For Quick Alerts
ALLOW NOTIFICATIONS  
For Daily Alerts
 

ಹೌದು, ಕೊಹ್ಲಿ ಸ್ವಾರ್ಥಿ.. ಯಾಕೆಂದರೆ..: ವಿರಾಟ್ ಯಾಕೆ ಸ್ವಾರ್ಥಿ ಎಂದು ಸಾಲು ಸಾಲು ಕಾರಣ ನೀಡಿದ ವೆಂಕಟೇಶ್ ಪ್ರಸಾದ್

ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸಿದ್ದು ಸಚಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಕೊನೆಯವರೆಗೂ ಬ್ಯಾಟಿಂಗ್ ಮಾಡಿದ ಕೊಹ್ಲಿ 121 ಎಸೆತಗಳಲ್ಲಿ 101 ರನ್ ಸಿಡಿಸಿ ಅಜೇಯವಾಗುಳಿದಿದ್ದಾರೆ.

ಇನ್ನು ವಿರಾಟ್ ಕೊಹ್ಲಿಯ ಈ ಇನ್ನಿಂಗ್ಸ್ ಬಗ್ಗೆ ಈಗ ಸಾಕಷ್ಟು ಚರ್ಚೆಗಳಾಗುತ್ತಿದ್ದು ಹೊಗಳಿಕೆಗಳ ಜೊತೆಗೆ ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ. ಸವಾಲಿನ ಪಿಚ್‌ನಲ್ಲಿ ಕೊಹ್ಲಿ ಅದ್ಭುತವಾದ ಇನ್ನಿಂಗ್ಸ್ ಕಟ್ಟಿದರು ಎನ್ನುವ ಹೊಗಳಿಕೆಯ ಮಾತುಗಳು ಒಂದೆಡೆ ಕೇಳಿ ಬಂದರೆ ಮತ್ತೊಂದೆಡೆ ವಿರಾಟ್ ಸ್ವಾರ್ಥಿಯಂತೆ ಮೈಲಿಗಲ್ಲಿಗಾಗಿ ಆಡಿದ್ದಾರೆ ಎನ್ನುವ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ.

Virat Kohli is Selfish: Why did Former Indian Bowler Venkatesh Prasad Says Kohli is Selfish

ವಿರಾಟ್ ಕೊಹ್ಲಿಯ ವಿರುದ್ಧ ಕೇಳಿ ಬರುತ್ತಿರುವ ಈ ಕಟು ಟೀಕೆಗಳಿಗೆ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಕನ್ನಡಿಗ ವಂಕಟೇಶ್ ಪ್ರಸಾದ್, ಅವರದ್ದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಸಾರ್ಥಿ ಎನ್ನುತ್ತಲೇ ಅವರನ್ನು ಕೊಂಡಾಡಿದ್ದಾರೆ. ವೆಂಕಟೇಶ್ ಪ್ರಸಾದ್ ಅವರ ಈ 'ಎಕ್ಸ್‌' ಪೋಸ್ಟ್ ಈಗ ಸಾಕಷ್ಟು ವೈರಲ್ ಆಗಿದೆ.

ಹೌದು, ಸಾರ್ಥಿ ಎಂದ ವೆಂಕಿ

ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಸ್ವಾರ್ಥಿ ಎಂದು ಟೀಕಿಸಿದವರಿಕೆ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕಟುವಾಗಿ ತಿರುಗೇಟು ನೀಡಿದ್ದಾರೆ. ವಿರಾಟ್ ಕೊಹ್ಲಿ ದೇಶದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕನಸನ್ನು ನನಸಾಗಿಸುವಷ್ಟು ಸಾರ್ಥಿ ಎಂದಿದ್ದಾರೆ ವೆಂಕಟೇಶ್ ಪ್ರಸಾದ್. ಜೊತೆಗೆ ಸಾಕಷ್ಟು ಶ್ರೇಷ್ಠ ಸಾಧನೆಗಳನ್ನು ಮಾಡಿದ ಹೊರತಾಗಿಯೂ ಮತ್ತಷ್ಟು ಸಾಧನೆಗಳನ್ನು ಮಾಡುವಷ್ಟು ಹಪಹಪಿಯಿರುವಷ್ಟು ಸಾರ್ಥಿ ಎಂದು ಕೊಹ್ಲಿ ಬಗ್ಗೆ ಸುಂದರವಾಗಿ ಬರೆದುಕೊಂಡಿದ್ದಾರೆ.

ವೆಂಕೇಶ್ ಪ್ರಸಾದ್ ಹೇಳಿದ್ದೇನು?

ಕರ್ನಾಟಕ ಕಂಡ ಶ್ರೇಷ್ಠ ವೇಗದ ಬೌಲರ್, ಟೀಮ್ ಇಂಡಿಯಾದ ಮಾಜಿ ಕ್ರಿಎಕಟಿಗ ವೆಂಕಟೇಶ್ ಪ್ರಸಾದ್ ಅವರ ಟ್ವೀಟ್‌ನ ಕನ್ನದ ಅನುಮಾದ ಇಲ್ಲಿದೆ.
"ವಿರಾಟ್ ಕೊಹ್ಲಿ ಸ್ವಾರ್ಥಿ ಮತ್ತು ವೈಯಕ್ತಿಕ ಮೈಲಿಗಲ್ಲುಗಳ ಮೇಲೆ ಮೋಹ ಹೊಂದಿದ್ದಾರೆ ಎನ್ನುವ ತಮಾಷೆಯ ವಾದಗಳನ್ನು ಕೇಳಿಸಿಕೊಂಡಿದ್ದೇನೆ. ಹೌದು.. ಕೊಹ್ಲಿ ಸ್ವಾರ್ಥಿ, ಕೋಟ್ಯಂತರ ಜನರ ಕನಸನ್ನು ನನಸಾಗಿಸುವಷ್ಟು ಸ್ವಾರ್ಥಿ, ಅದ್ಭುತ ಸಾಧನೆಗಳ ನಂತರವೂ ಮತ್ತಷ್ಟು ಶ್ರೇಷ್ಠ ಸಾಧನೆಗಾಗಿ ಶ್ರಮಿಸುವಷ್ಟು ಸ್ವಾರ್ಥಿ, ಹೊಸ ಬೆಂಚ್ ಮಾರ್ಕ್‌ಗಳನ್ನು ನಿರ್ಮಿಸುವಷ್ಟು ಸ್ವಾರ್ಥಿ, ತನ್ನ ತಂಡಕ್ಕೆ ಗೆಲುವು ಖಚಿತಪಡಿಸುವಷ್ಟು ಸ್ವಾರ್ಥಿ. ಹೌದು, ಕೊಹ್ಲಿ ಸ್ವಾರ್ಥಿ.." ಎಂದು ಬರೆದುಕೊಂಡಿದ್ದಾರೆ.

ಅಜೇಯ ಓಟ ಮುಂದುವರಿಸಿದ ಟೀಮ್ ಇಂಡಿಯಾ

ಇನ್ನು ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಗೆಲುವಿನ ಓಟವನ್ನು ಮುಂದಿವರಿಸಿದೆ. ಆಡಿರುವ ಎಲ್ಲಾ ಎಂಟು ಪಂದ್ಯಗಳಲ್ಲಿಯೂ ಭಾರತ ತಂಡ ಅದ್ಭುತ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ ಅಜೇಯವಾಗುಳಿದಿರುವ ಏಕೈಕ ತಂಡ ಎನ್ನುವ ಹೆಗ್ಗಳಿಕೆಯೊಂದಿಗೆ ಭಾರತ ಈಗಾಗಲೇ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇನ್ನು ಭಾರತ ತನ್ನ ಕೊನೆಯ ಲೀಗ್ ಪಂದ್ಯವನ್ನು ಬೆಂಗಳೂರಿನಲ್ಲಿ ಮುಂದಿನ ಭಾನುವಾರ ಆಡಲಿದೆ.

Story first published: Monday, November 6, 2023, 10:47 [IST]
Other articles published on Nov 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+