For Quick Alerts
ALLOW NOTIFICATIONS  
For Daily Alerts
 

Virat Kohli: ಆಸ್ಟ್ರೇಲಿಯಾದ ಪಾಲಿಗೆ ವಿರಾಟ್ ಕೊಹ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿ

ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ಬೆಳೆದ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸುವಂತಿದೆ. ಭಾರತ ಕ್ರಿಕೆಟ್‌ ಆಟ ಆಡುತ್ತಿರುವಾಗಿನಿಂದಲೂ ಸ್ಟಾರ್ ಆಟಗಾರರಿಗೆ ಕೊರತೆ ಏನು ಇಲ್ಲ. ಆದರೆ ಆಟಗಾರರಿಗೆ ವಿದೇಶಗಳಲ್ಲಿಯೂ ಈಗಿನಷ್ಟು ಪ್ರಾಮುಖ್ಯತೆ ಸಿಗುತ್ತಿರಲಿಲ್ಲ ಎಂಬುದನ್ನು ನಂಬುವಂತಹ ಮಾತು. ಈಗ ಹೈಟೆಕ್‌ ಯುಗದಲ್ಲಿ ಬೆರಳ ಅಡಿಯಲ್ಲಿ ನಿಮಗೆ ಬೇಕಾದ ಸುದ್ದಿಗಳು ಬಂದು ಬೀಳುತ್ತವೆ. ಕ್ರಿಕೆಟ್ ಸಹ ಬೆಳೆಯುತ್ತಲೇ ಸಾಗಿದೆ. ಟೀಮ್ ಇಂಡಿಯಾದ ಆಟಗಾರರ ಖ್ಯಾತಿ ಸಹ ಸಾಗರೋತ್ತರ ದಾಟಿದೆ.

ಅಂದಹಾಗೆ ಟೀಮ್ ಇಂಡಿಯಾ ಹಲವು ಸ್ಟಾರ್‌ ಆಟಗಾರರನ್ನು ಕಂಡಿದೆ. ವಿಶ್ವದ ಆಲ್‌ ಟೈಮ್‌ ಬೆಸ್ಟ್‌ ಬ್ಯಾಟರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಸುನಿಲ್‌ ಗವಾಸ್ಕರ್‌, ಕರ್ನಾಟಕದ ಜಿಆರ್‌ ವಿಶ್ವನಾಥ್, ಕ್ಲಾಸಿಕಲ್‌ ಶಾಟ್‌ಗಳಿಗೆ ಹೊಸ ಭಾಷ್ಯ ಬರೆದ ಸಚಿನ್‌ ತೆಂಡೂಲ್ಕರ್‌, ಆಕ್ರಮಣಕಾರಿ ಆಟಕ್ಕೆ ನಾಂದಿ ಹಾಡಿದ್ದ ವೀರೇಂದ್ರ ಸೆಹ್ವಾಗ್‌, ಗೋಡೆಯಂತೆ ನಿಂತು ಎದುರಾಳಿಗಳನ್ನು ಕಾಡಿದ್ದ ರಾಹುಲ್‌ ದ್ರಾವಿಡ್‌, ಇವರಂತೆ ಅನೇಕರು 22 ಯಾರ್ಡ್‌ ಸರ್ಕಲ್‌ನಲ್ಲಿ ಕಮಾಲ್‌ ಮಾಡಿದ್ದಾರೆ. ಈಗ ಭಾರತದ ಇನ್ನೋಬ್ಬ ಸ್ಟಾರ್ ಆಟಗಾರನ ಹೆಸರನ್ನು ಬಳಸಿಕೊಂಡು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಖಜಾನೆ ತುಂಬಿಸಿಕೊಳ್ಳಲು ಸ್ಕೆಚ್ ಹಾಕಿಕೊಂಡಿದೆ.

Virat Kohli is the hen that lays the golden egg for Australia

ಈ ಟೀಮ್ ಇಂಡಿಯಾ ಆಟಗಾರ ಬೇರೆ ಯಾರು ಅಲ್ಲ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ. ಪ್ರಸ್ತುತ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್‌ ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತವರಿನಲ್ಲಿ ನಡೆದ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟ್‌ ಸೈಲೆಂಟ್ ಆಗಿತ್ತು. 5 ಟೆಸ್ಟ್‌ಗಳಲ್ಲಿ ಕೇವಲ 192 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್‌ನಿಂದ ವಿಶೇಷವಾದದ್ದೇನನ್ನೂ ಮಾಡಲು ಸಾಧ್ಯವಿಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ. ಆದರೆ, ಆಸ್ಟ್ರೇಲಿಯಾದ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪುನರಾಗಮನ ಮಾಡುತ್ತಾರೆ ಎನನದು ಭವಿಷ್ಯ ನುಡಿದ್ದಾರೆ.

ಇದು ವಿರಾಟ್ ಕೊಹ್ಲಿಯ ಕೊನೆಯ ಆಸ್ಟ್ರೇಲಿಯಾ ಪ್ರವಾಸವಾಗಿರಬಹುದು. ಕೊಹ್ಲಿ ಜೊತೆಗೆ ರೋಹಿತ್ ಶರ್ಮಾ ಮತ್ತು ಇತರ ಆಟಗಾರರು ವಯಸ್ಸಿನ ಕಾರಣ ತಂಡದಿಂದ ಹೊರಗುಳಿಯಬಹುದು. ಆದರೆ ಭಾರತ ತಂಡದ ಆಟವನ್ನು ವೀಕ್ಷಿಸಲು ಎದುರು ನೋಡುತ್ತಿದ್ದೇನೆ ಎಂದು ಲ್ಯಾಂಗರ್ ಹೇಳಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಜನರನ್ನು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ನೋಡಲು ಸ್ಟೇಡಿಯಂಗಳಿಗೆ ಕರೆತರುವ ಪ್ಲಾನ್ ಎನ್ನಲಾಗುತ್ತಿದೆ.

ಲ್ಯಾಂಗರ್ ವಿಶೇಷ ಮನವಿ

ವಿರಾಟ್ ಕೊಹ್ಲಿ ತಮ್ಮ ಆಟ ಮತ್ತು ವೈಯಕ್ತಿಕ ಜೀವನದ ಮೂಲಕ ಕೋಟ್ಯಾಂತರ ಆಭಿಮಾನಿಗಳನ್ನು ಹೊಂದಿದ್ದಾರೆ. ಅವರನ್ನು ಜೀವನದಲ್ಲಿ ಒಮ್ಮೆ ಕಾಣಬೇಕು ಎಂಬುದು ಅದೆಷ್ಟೋ ಅಭಿಮಾನಿಗಳ ಕನಸಾಗಿದೆ. ಹೀಗಾಗಿ ಸಾಕಷ್ಟು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ವಿರಾಟ್ ಕೊಹ್ಲಿ ಅವರನ್ನು ನೋಡಲೆಂದೆ ಸ್ಟೇಡಿಯಂಗೆ ಬರುತ್ತಾರೆ. ಇದನ್ನೇ ಆದಾಯದ ಮಾರ್ಗವಾಗಿ ಬಳಸಿಕೊಳ್ಳಲು ಆಸ್ಟ್ರೇಲಿಯಾ ಕ್ರಿಕೆಟ್ ಮುಂದಾಗಿದೆ. ಈ ಕುರಿತು ಜಸ್ಟಿನ್ ಲ್ಯಾಂಗರ್ ಪರೋಕ್ಷವಾಗಿ ಮಾತನಾಡಿದಂತಿದೆ.

ಲ್ಯಾಂಗರ್ ಅವರು ತಮ್ಮ ದೇಶದ ಜನರಿಗೆ ವಿಶೇಷ ಮನವಿ ಮಾಡಿದ್ದಾರೆ. ಇದು ಭಾರತದ ದಿಗ್ಗಜರಿಗೆ ಆಸ್ಟ್ರೇಲಿಯಾದ ಕೊನೆಯ ಪ್ರವಾಸವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಹೋಗಿ ಅವರ ಆಟ ನೋಡಬೇಕು. ಕ್ರಿಕೆಟ್ ಎಂಜಾಯ್ ಮಾಡಬೇಕು ಎಂದು ಲ್ಯಾಂಗರ್ ಹೇಳಿದ್ದಾರೆ. ಇದರ ಅರ್ಥ ಕೊಹ್ಲಿ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಟೇಡಿಯಂಗೆ ನೋಡಲು ಬರುತ್ತಾರೆ. ಇದರೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಖಜಾನೆ ಕೂಡ ತುಂಬಲಿದೆ. ಹೀಗಾಗಿ ಲ್ಯಾಂಗರ್ ಅವರು ಅಳೆದು ತೂಗಿ ಆಸ್ಟ್ರೇಲಿಯಾದ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎಂಬರ್ಥದಲ್ಲಿ ವಿರಾಟ್ ಕೊಹ್ಲಿ ಅವರನ್ನು ಬಣ್ಣಿಸಿದ್ದಾರೆ.

ವಿರಾಟ್ ಕೊಹ್ಲಿ ಆಡುವುದನ್ನು ನೋಡಲು ಕಾಯುತ್ತಿದ್ದೇನೆ. ಕೊಹ್ಲಿ ಇಲ್ಲಿ ಕೊನೆಯ ಬಾರಿಗೆ ಬಂದರೆ, ಜನರು ಅವರ ಆಟವನ್ನು ಆನಂದಿಸುತ್ತಾರೆ ಅಂದುಕೊಳ್ಳುತ್ತೇನೆ. ಅವರು ಒಬ್ಬ ಸೂಪರ್ ಸ್ಟಾರ್. ಕೊಹ್ಲಿ ಮಾತ್ರವಲ್ಲದೆ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಇದ್ದಾರೆ. ಎಲ್ಲರ ಆಟವನ್ನು ನೋಡಿ ಆನಂದಿಸಿ ಎಂದು ಆಸ್ಟ್ರೇಲಿಯಾ ಜನರನ್ನು ಸ್ಟೇಡಿಯಂಗೆ ಬಂದು ಪಂದ್ಯವನ್ನು ನೋಡುವಂತೆ ಮನವಿ ಮಾಡಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಟೆಸ್ಟ್ ಪಂದ್ಯಗಳನ್ನು ನೋಡಲು ಸ್ಟೇಡಿಯಂಗಳಿಗೆ ಜನ ಸಾಗರ ಹರಿದು ಬಂದರೆ ಆಸ್ಟ್ರೇಲಿಯಾ ಕ್ರಿಕೆಟ್‌ ಖಜಾನೆ ತುಂಬಲಿದೆ.

Story first published: Monday, November 18, 2024, 16:32 [IST]
Other articles published on Nov 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+