ಸರಣಿಗೂ ಮುನ್ನವೇ ಆಸ್ಟ್ರೇಲಿಯನ್ನರಿಗೆ ಕಟುಕಿದ ಕೊಹ್ಲಿ
ಅಡಿಲೇಡ್, ನ. 24: ಹಿಂದಿನ ಪ್ರವಾಸದಲ್ಲಿ ಪ್ರೇಕ್ಷಕರ ಗ್ಯಾಲರಿ ಕಡೆ ಮಧ್ಯದ ಬೆರುಳು ತೋರಿಸಿ ವಿವಾದ ಎಬ್ಬಿಸಿದ್ದ ವಿರಾಟ್ ಕೊಹ್ಲಿ ಈ ಬಾರಿ ಭಾರತ ತಂಡದ ನಾಯಕ. ಶನಿವಾರ ಆಸ್ಟ್ರೇಲಿಯಾದಲ್ಲಿ ಇಳಿಯುತ್ತಲೇ ಬಿಸಿ ಬಿಸಿ ಮಾತುಗಳನ್ನಾಡಿದ್ದಾರೆ.
'ನಾವು ಬಂದಿದ್ದೇವೆ, ಆಕ್ರಮಣಕಾರಿ ಆಟಕ್ಕೆ ಸಿದ್ಧರಾಗಿ, ನಮ್ಮ ದೇಶದಲ್ಲಿ ಆಡಿದಂತೆ ಉತ್ತಮವಾಗಿಯೇ ಆಡುತ್ತೇವೆ' ಹೀಗೆ ಆಸ್ಟ್ರೇಲಿಯಾದ ಆಟಗಾರರನ್ನು ಉದ್ದೇಶಿಸಿ ಹೇಳಿದ್ದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ.[ಸದ್ದಿಲ್ಲದೆ ಕೊಹ್ಲಿ ದಾಖಲೆ ಮುರಿದ ಹಶೀಮ್ ಆಮ್ಲಾ]

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 4 ಟೆಸ್ಟ್ ಮತ್ತು ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ತ್ರಿಕೋನ ಸರಣಿಗೆ ಟೀಮ್ ಇಂಡಿಯಾ ತೆರಳಿದೆ. ಈ ವೇಳೆ ಮಾತನಾಡಿದ ಕೊಹ್ಲಿ ಆಸ್ಟ್ರೇಲಿಯನ್ನರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಇದೇ ಮೊದಲ ಸಾರಿ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ ತಂಡದ ಆತ್ಮವಿಶ್ವಾಸದ ಬಗ್ಗೆ ಮಾತನಾಡಿದ್ದಾರೆ. ಡಿಸೆಂಬರ್ 4 ರಿಂದ ಬ್ರೀಸ್ಬೇನ್ ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ.
ನನಗೆ ಹಿಂದಿನ ಬಾರಿಯ ಅಂದರೆ 2011-12ರಲ್ಲಿ ನಿಮ್ಮ ದೇಶದಲ್ಲಿ ಆಡಿದ ಅನುಭವವಿದ್ದು, ಎಲ್ಲದಕ್ಕೂ ಸಿದ್ಧವಾಗಿಯೇ ಬಂದಿದ್ದೇವೆ ಎಂದು ಹೇಳಿದ್ದಾರೆ. ಗಾಯದ ಕಾರಣದಿಂದ ಕಾಯಂ ನಾಯಕ ಎಂಎಸ್ ಧೋನಿ ಮೊದಲನೇ ಟೆಸ್ಟ್ ಗೆ ಅಲಭ್ಯರಾಗಿದ್ದಾರೆ.[ಕೊಹ್ಲಿಯಿಂದ ಮತ್ತೆ ದಾಖಲೆಗಳ ಧೂಳಿಪಟ]
ಹಿಂದಿನ ಬಾರಿ ನಡೆದ ಘಟನೆಗಳು ಮನಸ್ಸಿಗೆ ಸ್ವಲ್ಪ ಬೇಸರ ಮಾಡಿದ್ದರೂ ಚಿಂತೆಯಿಲ್ಲ. ಅದನ್ನು ಪ್ರೀತಿಸಿದ್ದೇನೆ. ಎರಡು ದೇಶಕ್ಕೆ ಉತ್ತಮ ಬೆಂಬಲಿಗರಿದ್ದು ಪ್ರೇಕ್ಷಕರ ಉನ್ಮಾದವನ್ನು ಸವಿಯುತ್ತೇನೆ ಎಂದು ಕೊನೆಯ ಬಾರಿ ಆಸ್ಟ್ರೇಲಿಯಾಕ್ಕೆ ಹೋದಾಗ ಪ್ರೇಕ್ಷಕರ ಗ್ಯಾಲರಿ ಕಡೆ ಮಧ್ಯದ ಬೆರಳು ತೋರಿಸಿ ವಿವಾದವೆಬ್ಬಿಸಿದ್ದ ರನ್ ಮಶಿನ್ ಹೇಳಿದ್ದಾರೆ.
ಆಸ್ಟ್ರೇಲಿಯನ್ನರು ಬ್ರಾಂಡ್ ಕ್ರಿಕೆಟ್ ಆಡಲಿ, ಮೈಂಡ್ ಗೇಮ್ ಮಾಡಲಿ ಚಿಂತೆಯಿಲ್ಲ. ನಮ್ಮದು ಮಾತ್ರ ಅಗ್ರೆಸ್ಸಿವ್ ಕ್ರಿಕೆಟ್. ಈಗಾಗಲೇ ಪೀಟರ್ ಸಿಡಲ್ ಅಂಥವರು ಭಾರತದ ಆಟಗಾರರ ಮೇಲೆ ಮಾನಸಿಕ ಒತ್ತಡ ತರಲು ಸಲ್ಲದ ಹೇಳಿಕೆ ನೀಡಿ ಪ್ರಚಾರ ಪಡೆಯುತ್ತಿದ್ದಾರೆ. ನಮಗೆ ಇದ್ಯಾವುದು ಬೇಕಾಗಿಲ್ಲ. ಅವರ ವಿರುದ್ಧ ಉತ್ತಮವಾಗಿ ಆಡುವುದೇ ನಮ್ಮ ಮುಂದಿರುವ ಗುರಿ ಎಂದು ದೆಹಲಿ ಬ್ಯಾಟ್ಸ್ ಮನ್ ಹೇಳಿದ್ದಾರೆ.

2ನೇ ಸ್ಥಾನ ಕಾಪಾಡಿಕೊಂಡ ಕೊಹ್ಲಿ
ಇತ್ತ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ವಿರಾಟ್ ಎರಡನೇ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡೆವಿಲಿಯರ್ಸ್ ಮೊದಲನೇ ಸ್ಥಾನದ ಮೇಲೆ ಪ್ರಭುತ್ವ ಸಾಧಿಸಿದ್ದಾರೆ.ಉಳಿದಂತೆ ಹಶೀಮ್ ಆಮ್ಲಾ(3), ಡಿ ಕೊಕ್(4), ಜೆಮ್ಸ್ ಫ್ಲಂಕ್ ನರ್ ಮತ್ತು ಅರೋನ್ ಫಿಂಚ್ (5) ನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications