ODI rankings: ಆಲ್ ರೌಂಡರ್ ಜಾಧವ್ ಜಿಗಿತ, ಕೊಹ್ಲಿ-ಬೂಮ್ರಾಗೆ ಅಗ್ರಸ್ಥಾನ!

ನವದೆಹಲಿ, ಮಾರ್ಚ್ 17: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿರುವ ಅಂತಾರಾಷ್ಟ್ರೀಯ ಏಕದಿನ ಪಂದ್ಯ ನೂತನ ರ್ಯಾಂಕಿಂಗ್‌ನಲ್ಲಿ ಭಾರತದ ಪುರುಷರ ತಂಡ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಆದರೆ ಬ್ಯಾಟ್ಸ್ಮನ್ ಮತ್ತು ಬೌಲರ್ ಯಾದಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ ಅಗ್ರ ಸ್ಥಾನದಲ್ಲೇ ಮುಂದುವರಿದಿದ್ದಾರೆ.
ಇತ್ತೀಚಿಗೆ ಮುಕ್ತಾಯಗೊಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ 310 ರನ್ ಕಲೆ ಹಾಕಿದ್ದರು. ಇದು ಕೊಹ್ಲಿ ಅಗ್ರ ಸ್ಥಾನದಲ್ಲೇ ನೆಲೆ ನಿಲ್ಲಲು ಸಹಕಾರಿಯಾಯಿತು. ಇದೇ ಸರಣಿಯಲ್ಲಿ 202 ರನ್ ಗಳಿಸಿದ್ದ ರೋಹಿತ್ ಶರ್ಮಾ ದ್ವಿತೀಯ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಭಾರತದ ಆಲ್ ರೌಂಡರ್ ಕೇದಾರ್ ಜಾಧವ್ 11 ಸ್ಥಾನ ಜಿಗಿತ ಕಂಡಿರುವುದು ವಿಶೇಷ. ಆಸ್ಟ್ರೇಲಿಯಾ ಏಕದಿನ ಸರಣಿಯಿಂದಾಗಿ ಜಾಧವ್ ಸದ್ಯ 24ನೇ ಸ್ಥಾನದಲ್ಲಿದ್ದಾರೆ. ನೂತನ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿರುವ ಬ್ಯಾಟಿಂಗ್, ಬೌಲಿಂಗ್, ಆಲ್ ರೌಂಡರ್ ಸ್ಥಾನಿಗರ ಕಿರು ಮಾಹಿತಿ ಕೆಳಗಿದೆ.

ಇಂಗ್ಲೆಂಡ್ ನಂ.1
ಏಕದಿನ ಮತ್ತು ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಈ ಹಿಂದೆ ಭಾರತ ಅಗ್ರ ಸ್ಥಾನದಲ್ಲಿತ್ತು. ಆದರೆ ಇತ್ತೀಚೆಗೆ ನೀರಸ ಬ್ಯಾಟಿಂಗ್‌ನಿಂದಾಗಿ ಭಾರತ ಅಗ್ರ ಸ್ಥಾನವನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿದೆ. ಏಕದಿನ ಸದ್ಯದ ರ್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್ ಪ್ರಥಮ (123 ರೇಟಿಂಗ್ ಪಾಯಿಂಟ್), ಭಾರತ (120 ರೇಟಿಂಗ್), ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಅನಂತರದ ಸ್ಥಾನಗಳಲ್ಲಿವೆ.

ಈಗಲೂ ಕೊಹ್ಲಿ ಕಿಂಗ್
ಏಕದಿನ ಬ್ಯಾಟಿಂಗ್ ರ್ಯಾಂಕ್ ನಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿ ಗಟ್ಟಿಯಾಗಿದ್ದಾರೆ. ಅವರ ಖಾತೆಯಲ್ಲಿ 890 ರೇಟಿಂಗ್ ಪಾಯಿಂಟ್ ಇದೆ. ದ್ವಿತೀಯ ಸ್ಥಾನದಲ್ಲಿರುವ ರೋಹಿತ್ 839 ರೇಟಿಂಗ್ ಪಾಯಿಂಟ್ ಸಂಪಾದಿಸಿದ್ದಾರೆ. ಇನ್ನು ನ್ಯೂಜಿಲ್ಯಾಂಡ್‌ನ ರಾಸ್ ಟೇಲರ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್, ಪಾಕಿಸ್ತಾನದ ಬಾಬರ್ ಅಝಾಮ್ ಮೂರರಿಂದ ಐದನೇ ಸ್ಥಾನಗಳಲ್ಲಿದ್ದಾರೆ.

ಬೂಮ್ರಾ ಮಿಂಚು
ಏಕದಿನಬೌಲಿಂಗ್ ಅಗ್ರ ರ್ಯಾಂಕಿಂಗ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಮುಂದುವರೆದಿದ್ದಾರೆ. ನ್ಯೂಜಿಲ್ಯಾಂಡ್‌ನ ಟ್ರೆಂಟ್ ಬೌಲ್ಟ್, ಅಫ್ಘಾನಿಸ್ತಾನದ ರಶೀದ್ ಖಾನ್, ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಮತ್ತು ಕಾಗಿಸೋ ರಬಾಡಾ ಎರಡರಿಂದ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ರಶೀದ್ ಬೆಸ್ಟ್ ಆಲ್ ರೌಂಡರ್
ಏಕದಿನ ಆಲ್ ರೌಂಡರ್ ಯಾದಿಯಲ್ಲಿ ಅಫ್ಘಾನಿಸ್ತಾನ ಆಟಗಾರ ರಶೀದ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ. ಬಾಂಗ್ಲಾ ಆಟಗಾರ ಶಕೀಬ್ ಅಲ್ ಹಸನ್, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ, ಪಾಕ್ ಆಟಗಾರ ಮೊಹಮ್ಮದ್ ಹಫೀಝ್, ನ್ಯೂಜಿಲ್ಯಾಂಡ್‌ನ ಮಿಚೆಲ್ ಸ್ಯಾಂಟ್ನರ್ ಕ್ರಮವಾಗಿ 2ರಿಂದ 5ನೇ ಸ್ಥಾನಗಳಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications