Virat Kohli: ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ವಿರಾಟ್ ಕೊಹ್ಲಿ ಜೋಕಾರ್
ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೇಲೆ ಆಸ್ಟ್ರೇಲಿಯಾ ಹಿಡಿತ ಸಾಧಿಸಿದೆ. ಈ ಪಂದ್ಯದ ಮೊದಲ ದಿನದಂದು ಆಸ್ಟ್ರೇಲಿಯಾ ಪರ ಚೊಚ್ಚಲ ಪಂದ್ಯವನ್ನಾಡಿದ 19 ವರ್ಷದ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್ ಅವರೊಂದಿಗೆ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಾಗ್ವಾದ ನಡೆಸಿದ್ದರು. ಮೈದಾನದಲ್ಲೇ ಕಾನ್‌ಸ್ಟಾಸ್ ಭುಜಕ್ಕೆ ಭುಜ ಡಿಕ್ಕಿ ಹೊಡೆದಿದ್ದ ವಿರಾಟ್ ಕೊಹ್ಲಿ ವಾಗ್ವಾದ ನಡೆಸಿದ್ದರು.
ಕಾನ್‌ಸ್ಟಾಸ್ ಮತ್ತು ವಿರಾಟ್ ಕೊಹ್ಲಿ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಬಹುತೇಕರು ವಿರಾಟ್ ಕೊಹ್ಲಿ ನಡೆಯನ್ನು ಟೀಕಿಸಿದ್ದರು. ಇದಾದ ನಂತರ ಐಸಿಸಿ ವಿರಾಟ್ ಕೊಹ್ಲಿಗೆ ಪಂದ್ಯದ ಶುಲ್ಕದ 20 ಪ್ರತಿಶತದಷ್ಟು ದಂಡವನ್ನು ವಿಧಿಸುವುದರ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಿತು. ಇದೀಗ ಈ ಘಟನೆಯ ನಂತರ ಆಸ್ಟ್ರೇಲಿಯಾದ ಮಾಧ್ಯಮಗಳು ವಿರಾಟ್ ಕೊಹ್ಲಿ ಅವರನ್ನು ಟೀಕಿಸಿವೆ. ವಿರಾಟ್ ಕೊಹ್ಲಿ ಅವರನ್ನು ಜೋಕಾರ್‌ಗೆ ಹೋಲಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಆಸ್ಟ್ರೇಲಿಯಾದ ಮಾಧ್ಯಮಗಳು ಶುಕ್ರವಾರ ಬೆಳಗಿನ ಪತ್ರಿಕೆಗಳಲ್ಲಿ ವಿರಾಟ್ ಕೊಹ್ಲಿ ಅವರ ವ್ಯಂಗ್ಯ ಫೋಟೋಗಳನ್ನು ಹಾಕುವ ಮೂಲಕ ಕಾಲೆಳೆದಿವೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆಸ್ಟ್ರೇಲಿಯಾದ ಪತ್ರಿಕೆಯೊಂದು ತನ್ನ ಲೇಖನವೊಂದರಲ್ಲಿ 'ಜೋಕರ್ ಕೊಹ್ಲಿ' ಎಂಬ ಶೀರ್ಷಿಕೆಯೊಂದಿಗೆ ವಿರಾಟ್ ನಡೆಯನ್ನು ಟೀಕಿಸಿದೆ.
ಮತ್ತೊಂದೆಡೆ ಆಸ್ಟ್ರೇಲಿಯಾದ ಪತ್ರಿಕೆ 'ದಿ ವೆಸ್ಟ್ ಆಸ್ಟ್ರೇಲಿಯನ್', ವಿರಾಟ್ ಕೊಹ್ಲಿಯನ್ನು ಕೆಟ್ಟದಾಗಿ ಅವಮಾನಿಸಿದೆ. ಪ್ರತಿಕೆಯಲ್ಲಿ 'ಯುವಕರ ಕನಸಿನ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಭಾರತೀಯ ಸೌಕ್ ಕೆಣಕಿದ್ದಾರೆ ಎಂದು ಬರೆಯಲಾಗಿದೆ. ಟ್ಯಾಸ್ಮೆನಿಯನ್ ಪ್ರದೇಶದಲ್ಲಿ 'ಸುಕ್' ಎಂದರೆ ಹೇಡಿ ಎಂದರ್ಥ. ಇನ್ನೊಂದರ್ಥದಲ್ಲಿ ಚಿಕ್ಕ ಅಥವಾ ಅಳುವ ಮಗು. ವಿರಾಟ್ ಕೊಹ್ಲಿಯನ್ನು ಅವಮಾನಿಸಿರುವ ಆಸ್ಟ್ರೇಲಿಯಾ ಮಾಧ್ಯಮಗಳ ವಿರುದ್ಧ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿವೆ.
ಭಾರತ ಪ್ರವಾಸಕ್ಕೂ ಮುನ್ನ ಆಸ್ಟ್ರೇಲಿಯಾದ ಪತ್ರಿಕೆಗಳು ವಿರಾಟ್ ಕೊಹ್ಲಿಯನ್ನು ಹೊಗಳಿ ಸಾಕಷ್ಟು ಲೇಖನಗಳನ್ನು ಪ್ರಕಟಿಸಿದ್ದವು. ಆಸ್ಟ್ರೇಲಿಯಾದ ಎಲ್ಲಾ ದೊಡ್ಡ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಮೊದಲ ಪುಟಗಳಲ್ಲಿ ವಿರಾಟ್ ಕೊಹ್ಲಿ ಪ್ರಾಬಲ್ಯವು ಕಂಡುಬಂದಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ವಿರಾಟ್ ಕೊಹ್ಲಿ ಆಗಮಿಸಿದಾಗಿನಿಂದ ಅವರ ಅಭ್ಯಾಸದವರೆಗೆ ಏನಾಯಿತು ಎಂಬುದು ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ಚರ್ಚೆಯ ಕೇಂದ್ರವಾಗಿದೆ. ಆಸ್ಟ್ರೇಲಿಯಾದ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಮೊದಲ ಪುಟಗಳಲ್ಲಿ ವಿರಾಟ್ ಕೊಹ್ಲಿಯ ದಾಖಲೆಗಳು, ಪ್ರೋಮೋಗಳು ಮತ್ತು ಶೈಲಿಯ ಪ್ರತಿಯೊಂದು ಸಣ್ಣ ವಿಷಯವೂ ಪ್ರಕಟವಾಗುತ್ತಿದೆ. ಈ ಹಿಂದೆಯೂ ಆಸ್ಟ್ರೇಲಿಯಾ ಮಾಧ್ಯಮಗಳು ವಿರಾಟ್ ಕೊಹ್ಲಿಯನ್ನು ಪ್ರಾಣಿಯೊಂದಕ್ಕೆ ಹೋಲಿಸಿ ಟೀಕೆಗೆ ಒಳಗಾಗಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications