Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC ODI Rankings: ಎರಡನೇ ಸ್ಥಾನಕ್ಕೆ ಬಡ್ತಿ ಪಡೆದ ವಿರಾಟ್ ಕೊಹ್ಲಿ: ರೋಹಿತ್‌ಗೆ ಅಗ್ರಸ್ಥಾನ

ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಬ್ಬರದ ಪ್ರದರ್ಶನ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ವಿರಾಟ್ ಅವರಿಗೆ ಭರ್ಜರಿ ಬಡ್ತಿ ನೀಡಿದೆ. ಈ ಮೂಲಕ ಭಾರತದ ಅನುಭವಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನ ಅಲಂಕರಿಸಿದ್ದಾರೆ.

ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಬ್ಬರಿಸಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಪಂದ್ಯ ಹಾಗೂ ರಾಯ್ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ, ವಿಶಾಖಪಟ್ಟಣಂನಲ್ಲಿ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದ್ದರು. ಇವರ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಈಗ ಐಸಿಸಿ ಶ್ರೇಯಾಂಕದಲ್ಲಿ ವಿರಾಟ್ ಬಡ್ತಿ ಪಡೆದಿದ್ದು, ಎರಡು ಸ್ಥಾನ ಜಿಗಿದಿದ್ದು, 773 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನ ತಲುಪಿದ್ದಾರೆ.

Virat Kohli Jumps to 2nd Spot in ICC ODI Rankings After Stellar Performance vs South Africa

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ ರೋಹಿತ್ ಶರ್ಮಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇವರು 781 ರೇಟಿಂಗ್ ಅಂಕಗಳನ್ನು ಹೊಂದಿದ್ದು ಮೊದಲ ಸ್ಥಾನದಲ್ಲಿದ್ದಾರೆ. ಇವರು ಹಾಗೂ ವಿರಾಟ್ ನಡುವೆ ಕೇವಲ 8 ಅಂಕಗಳ ವ್ಯತ್ಯಾಸ ಇದೆ. ಮುಂದಿನ ಸರಣಿಯಲ್ಲಿ ನಿಶ್ಚಿತವಾಗಿ ಈ ಇಬ್ಬರೂ ಬ್ಯಾಟರ್‌ಗಳ ನಡುವೆ ಅಗ್ರಸ್ಥಾನಕ್ಕಾಗಿ ಫೈಟ್‌ ನಡೆಯಲಿದೆ.

ನ್ಯೂಜಿಲೆಂಡ್ ತಂಡದ ಡೇರಿಲ್‌ ಮಿಚೆಲ್‌ 3, ಅಫ್ಘಾನಿಸ್ತಾನ ತಂಡ ಇಬ್ರಾಹಿ ಜರ್ದಾನ್ 4ನೇ ಶ್ರೇಯಾಂಕ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದ ನಾಯಕ ಕೆಎಲ್ ರಾಹುಲ್ ಆಡಿದ 3 ಪಂದ್ಯಗಳಲ್ಲಿ 126 ರನ್‌ ಸಿಡಿಸಿದ್ದು, ಶ್ರೇಯಾಂಕದಲ್ಲಿ ಏರಿಕೆ ಕಂಡಿದೆ. ಈ ಮೂಲಕ ರಾಹುಲ್‌ 12ನೇ ಶ್ರೇಯಾಂಕ ತಲುಪಿದ್ದಾರೆ.

ಕುಲ್‌ದೀಪ್‌ಗೆ 3ನೇ ಸ್ಥಾನ

ಚೈನಾಮನ್ ಬೌಲರ್‌ ಕುಲ್‌ದೀಪ್ ಯಾದವ್ ಶ್ರೇಯಾಂಕದಲ್ಲೂ ಏರಿಕೆ ಆಗಿದೆ. ಇವರು ಸಹ ದಕ್ಷಿಣ ಆಫ್ರಿಕಾ ವಿರುದ್ಧ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಇವರು 3 ಸ್ಥಾನ ಏರಿಕೆ ಕಂಡಿದ್ದು ಸದ್ಯ 655 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್‌ ನಂಬರ್ 1 ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ತಂಡದ ಜೋಫ್ರಾ ಆರ್ಚರ್ 2ನೇ ಸ್ಥಾನ ಹೊಂದಿದ್ದಾರೆ.

ಭಾರತ ಈ ವರ್ಷದಲ್ಲಿ ಯಾವುದೇ ಏಕದಿನ ಪಂದ್ಯವನ್ನು ಆಡುವುದಿಲ್ಲ. ಹೀಗಾಗಿ ಆಟಗಾರರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಆಗದು. ಜನವರಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ಅಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೊಮ್ಮೆ ಕಣಕ್ಕೆ ಇಳಿಯಲಿದ್ದಾರೆ.

Story first published: Wednesday, December 10, 2025, 15:05 [IST]
Other articles published on Dec 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+