Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜಿನಿಂದ ಸಂತಸಗೊಂಡಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ ವಿರಾಟ್ ಕೊಹ್ಲಿ

Virat Kohli Kohli addresses RCB fans and shares his views about the recently concluded IPL Auction

ಗುರುವಾರ ನಡೆದ ಐಪಿಎಲ್ ಹರಾಜಿನಲ್ಲಿ ಎಲ್ಲಾ ತಂಡಗಳು ತಮ್ಮ ತಂಡಕ್ಕೆ ಅಗತ್ಯವಿದ್ದ ಆಟಗಾರರನ್ನು ಸೇರ್ಪಡೆಗೊಳಿಸಿದೆ. ಈ ಮೂಲಕ ಹೊಸ ಆವೃತ್ತಿಗೆ ತಂಡಗಳು ಸಜ್ಜಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಕೂಡ ಈ ಬಾರಿಯ ಐಪಿಎಲ್‌ ಮುನ್ನ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದ್ದು ಹೊಸ ಸವಾಲಿಗೆ ಸಜ್ಜಾಗಿದೆ.

ಈ ಬಾರಿಯ ಐಪಿಎಲ್ ಹರಾಜಿನ ಬಗ್ಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಂದು ಮಾತನಾಡಿರುವ ವಿರಾಟ್ ಕೊಹ್ಲಿ ಅಭಿಮಾನಿಗಳೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

"ನಮ್ಮ ತಂಡ ಕೊಂಡುಕೊಂಡ ಆಟಗಾರರ ಬಗ್ಗೆ ಮತ್ತು ಹರಾಜುನಲ್ಲಿ ನಮ್ಮ ತಂಡದ ಫಲಿತಾಂಶದಿಂದಾಗಿ ಸಾಕಷ್ಟು ಸಂತಸಗೊಂಡಿದ್ದೇನೆ. ನಾವು ಏನು ಬಯಸಿದ್ದೆವೋ ಅದನ್ನು ಪಡೆದುಕೊಂಡಿದ್ದೇವೆ. ತಂಡದ ಸಂಯೋಜನೆಗೆ ಹಾಗೂ ಬಲವರ್ಧನೆಗೆ ಇದು ಅಗತ್ಯವಿತ್ತು" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

"ನಾವು ಕಳೆದ ವರ್ಷದ ಆವೃತ್ತಿಯಲ್ಲಿ ನಿಜಕ್ಕೂ ಉತ್ತಮ ಪ್ರದರ್ಶನವನ್ನು ನೀಡಿದ್ದೆವು. ಮುಂದಿನ ಹೊಸ ಆವೃತ್ತಿ ನಮ್ಮ ಪಾಲಿಗೆ ಪೂರಕವಾಗಿರುತ್ತದೆ ಎಂದು ಭಾವಿಸುತ್ತೇನೆ. ಕಳೆದ ಬಾರಿಗಿಂತ ಎರಡು ಹೆಜ್ಜೆ ಮುಂದಿಡಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ. ಅತ್ಯುತ್ತಮ ಅಭಿಮಾನಿಗಳನ್ನು ಹೊಂದಿರುವ ನಾವು ನಿಮ್ಮ ಬೆಂಬಲವನ್ನು ಈ ಬಾರಿಯೂ ನಿರೀಕ್ಷಿಸುತ್ತೇವೆ" ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

ಆರ್‌ಸಿಬಿ ಸಂಪೂರ್ಣ ತಂಡ: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಜೋಶುವಾ ಫಿಲಿಪ್, ಮೊಹಮ್ಮದ್ ಅಜರುದ್ದೀನ್, ಕೈಲ್ ಜೇಮೀಸನ್, ಶ್ರೀಕರ್ ಭಾರತ್, ಸುಯಾಶ್ ಪ್ರಭುದೇಸಾಯಿ, ಡೇನಿಯಲ್ ಕ್ರಿಶ್ಚಿಯನ್, ಪವನ್ ದೇಶಪಾಂಡೆ, ಶಹಬಾಜ್ ಅಹ್ಮದ್, ಆಡಮ್ ಜಂಪಾ, ಕೇನ್ ರಿಚರ್ಡ್ಸನ್, ಗ್ಲೆನ್ ಮ್ಯಾಕ್ಸ್ವೆಲ್, ಸಚಿನ್ ಬೇಬಿ, ರಜತ್ ಪಾಟಿದಾರ್.

Story first published: Saturday, February 20, 2021, 15:00 [IST]
Other articles published on Feb 20, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+