ಐಪಿಎಲ್ 2020: ಯುಎಇಗೆ ಹಾರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಐಪಿಎಲ್‌ನ 13ನೇ ಆವೃತ್ತಿ ಯುಎಇನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದುಬೈಗೆ ಪ್ರಯಾಣವನ್ನು ಬೆಳೆಸಿದೆ. ಆರ್‌ಸಿಬಿ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಯಾಣಕ್ಕೂ ಮುನ್ನ ತಂಡದ ಪೋಟೋವನ್ನು ಹಂಚಿಕೊಳ್ಳಲಾಗಿದೆ.
ಆರ್‌ಸಿಬಿ ತಂಡದ ಬಹುತೇಕ ಆಟಗಾರರು ಬೆಂಗಳೂರಿನ ಹೋಟೆಲ್‌ನಲ್ಲಿ ಕ್ವಾರಂಟೈನ್ ಪೂರೈಸಿದ್ದಾರೆ. ಇಂದು ಇಡೀ ತಂಡ ಬೆಂಗಳೂರಿನಿಂದಲೇ ನೇರವಾಗಿ ದುಬೈಗೆ ಪ್ರಯಾಣಿಸುತ್ತಿದೆ. ದುಬೈ ಹೋಟೆಲ್‌ನಲ್ಲಿ 7 ದಿನಗಳ ಕ್ವಾರಂಟೈನ್ ಅವಧಿ ಪೂರೈಸಿದ ನಂತರ ಅಭ್ಯಾಸವನ್ನು ನಡೆಸಲಿದ್ದಾರೆ ಆರ್‌ಸಿಬಿ ತಂಡದ ಆಟಗಾರರು.

40 ಮಂದಿಯ ತಂಡ
21 ಆಟಗಾರರ ಸಹಿತ ಒಟ್ಟು ಯುಎಇಗೆ ತೆರಳಲಿರುವ 40 ಮಂದಿಯ ತಂಡವನ್ನು ಇತ್ತೀಚೆಗೆ ಆರ್‌ಸಿಬಿ ಪ್ರಕಟಿಸಿತ್ತು. ಮಾನಸಿಕ ಆರೋಗ್ಯದ ದೃಷ್ಠಿಯಿಂದ ಪರಿಣತ ಡಾಕ್ಟರ್ ಕೂಡ ಈ ತಂಡದಲ್ಲಿದ್ದಾರೆ. ಈ ಮೂಲಕ ಅತ್ಯಂತ ವ್ಯವಸ್ಥಿತವಾಗಿ ಈ ಬಾರಿಯ ಐಪಿಎಲ್ ಆವೃತ್ತಿಗೆ ಯುಎಇ ಸಜ್ಜಾಗಿದೆ.

ಸುಸಜ್ಜಿತ ಹೋಟೆಲ್‌ನಲ್ಲಿ ಆರ್‌ಸಿಬಿ
ಆರ್‌ಸಿಬಿ ತಂಡ ಯುಎಇನಲ್ಲಿ ಅತ್ಯಂತ ಸುಸಜ್ಜಿತ ವಾಲ್ಡಾರ್ಫ್ ಹೋಟೆಲ್‌ನಲ್ಲಿ ವಾಸ್ತವ್ಯವನ್ನು ಹೂಡಲಿದೆ. ಸಾಕಷ್ಟು ವಿಶೇಷತೆಯನ್ನು ಹೊಂದಿರುವ ಈ ಹೋಟೆಲ್ ಐಪಿಎಲ್ ಪಂದ್ಯ ನಡೆಯುವ ಶಾರ್ಜಾ, ಅಬುದಾಬಿ ಹಾಗೂ ದುಬೈ ಕ್ರಿಡಾಂಗಣಗಳಿಗೆ ಬಹುತೇಕ ಸಮಾನ ಅಂತರದಲ್ಲಿದೆ.

ಆಫ್ರಿಕಾ ಕ್ರಿಕೆಟಿಗರಿಗೆ ಅನುಮತಿ
ಇನ್ನು ಮತ್ತೊಂದೆಡೆ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ಅಗತ್ಯವಿದ್ದ ಅಲ್ಲಿನ ಸರ್ಕಾರದ ಅನುಮತಿ ದೊರೆತಿದ್ದು ಆಗಸ್ಟ್ 22ಕ್ಕೆ ಆ ಆಟಗಾರರು ಕೂಡ ದುಬೈಗೆ ತಲುಪಲಿದ್ದಾರೆ. ಆರ್‌ಸಿಬಿ ತಂಡದ ಎಬಿ ಡಿವಿಲಿಯರ್ಸ್ ಡೇಲ್ ಸ್ಟೈನ್, ಕ್ರಿಸ್ ಮೋರಿಸ್ ನಾಳೆ ತಂಡವನ್ನು ಸೇರಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications