Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿ ಒಂದು ಲೈಕ್ ಕಹಾನಿ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸದ್ಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಕಣಕ್ಕೆ ಇಳಿಯುತ್ತಿದ್ದಾರೆ. ಮೈದಾನದಲ್ಲಿ ತಮ್ಮ ಕಲಾತ್ಮಕ ಬ್ಯಾಟಿಂಗ್‌ನಿಂದ ದಾಖಲೆಯ ಮೇಲೆ ದಾಖಲೆ ಬರೆಯುವ ವಿರಾಟ್‌, ಸಾಮಾಜಿಕ ತಾಣಗಳಲ್ಲಿ ಸುದ್ದಿಯಲ್ಲಿರುವ ಆಟಗಾರ. ಈ ಬಾರಿ ವಿರಾಟ್ ಸದ್ದು ಮಾಡುತ್ತಿರುವುದು ತಮ್ಮ ಬ್ಯಾಟಿಂಗ್‌ನಿಂದ ಅಲ್ಲ. ಬದಲಿಗೆ ಒಂದು ಫೋಟೋಗೆ ಲೈಕ್‌ ಮಾಡಿ.

ವಿರಾಟ್‌ ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಲು ಕಾರಣ, ಜರ್ಮನ್‌ನ ಲಿಜಾ ಲಾಜ್ ಅವರ ಫೋಟೋಗೆ ಮಾಡಿದ ಒಂದು ಲೈಕ್. ಲಿಜಾ ಲಾಜ್ ಅವರ ಫೋಟೋವನ್ನು ವಿರಾಟ್‌, ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್ ಮಾಡಿದ್ದಾರೆ. ಇವರು ಲೈಕ್‌ ಮಾಡಿದ ಸ್ಕ್ರೀನ್‌ ಶಾಟ್‌ಗಳು ಭಾರತದಲ್ಲಿ ಭಾರೀ ವೈರಲ್ ಆಗುತ್ತಿವೆ. ಅಲ್ಲದೆ ಲಿಜಾ ಲಾಜ್ ಭಾರತದಲ್ಲಿ ರಾತ್ರೋ ರಾತ್ರಿ ವೈರಲ್ ಆಗುತ್ತಿದ್ದಾರೆ. ಅಭಿಮಾನಿಗಳು ವಿರಾಟ್ ಅವರ ಹಳೆಯ ಅಲ್ಗಾರಿದಮಿಕ್ ವಿವರಣೆ ನೆನಪಿಸಿಕೊಂಡು, ಭಿನ್ನ ವಿಭಿನ್ನ ಮೀಮ್ ಉತ್ಸವವನ್ನು ಹುಟ್ಟುಹಾಕಿದೆ.

Virat Kohli

ಲಿಜಾ ಲಾಜ್ ಅವರ ಹೆಸರು ಜೆನ್ನಿಫರ್. ಇವರು ಒಬ್ಬ ಖ್ಯಾತ ವ್ಲಾಗರ್ ಮತ್ತು ಗಾಯಕಿ. ಇವರು ಹಾಡಿದ ಸಮೋಸಾ ಸಮೋಸಾ ಹಾಡು ಭಾರತದಲ್ಲಿ ವೈರಲ್ ಆಗಿದೆ. ಇನ್ನು ಇವರು ಬೆಂಗಳೂರು ಟ್ರಾಫಿಕ್ ಬಗ್ಗೆ ಮಾಡಿರುವ ತಮಾಷೆಯ ವಿಡಿಯೋ ಸಖತ್‌ ಸದ್ದು ಮಾಡಿದ್ದವು. ಇವರು ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದು, ಇವರು ಜನಪ್ರಿಯ ಟ್ರಾವೆಲ್ ವ್ಲಾಗರ್ ಮತ್ತು ಗಾಯಕಿ. ಲಿಜಾ ಲಾಜ್ ಜರ್ಮನ್ ಮತ್ತು ಡಚ್ ಮಾತನಾಡುತ್ತಾರೆ.

ಭಿನ್ನ ವಿಭಿನ್ನ ಪ್ರತಿಕ್ರಿಯೆ

ಈ ಲೈಕ್ ವೈರಲ್ ಆದ ತಕ್ಷಣ, ಅಭಿಮಾನಿಗಳು ವಿರಾಟ್ ಕೊಹ್ಲಿ ಅವರ ಹಳೆಯ ಅಲ್ಗಾರಿದಮಿಕ್ ಪ್ರತಿಕ್ರಿಯೆಗೆ ಟ್ರೋಲ್ ಮಾಡಲು ಪ್ರಾರಂಭಿಸಿದರು. ವಿರಾಟ್ ಈ ಹಿಂದೆ ಅವನೀತ್ ಕೌರ್ ಅವರ ಫೋಟೋವನ್ನು ಲೈಕ್ ಮಾಡಿದಾಗ, ಅಲ್ಗಾರಿದಮ್ ತನ್ನ ಫೀಡ್ ಅನ್ನು ತೆರವುಗೊಳಿಸುವಾಗ ಈ ಬಗ್ಗೆ ತಿಳಿದು ಬಂದಿತ್ತು. ವಿರಾಟ್ ಅವರ ಹಳೆಯ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಹಂಚಿಕೊಳ್ಳಲಾಗುತ್ತಿದೆ.

ವಿರಾಟ್‌ ಕೊಹ್ಲಿ ಸದ್ಯ ಆರ್‌ಸಿಬಿ ಪರ ಐಪಿಎಲ್‌ ಆಡುತ್ತಿದ್ದಾರೆ. ಇವರು ರನ್‌ ಸಾಧಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಸದ್ಯ ಆಡಿರುವ 5 ಪಂದ್ಯಗಳಲ್ಲಿ 228 ರನ್‌ ಸಿಡಿಸಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಇದೇ ಫಾರ್ಮ್‌ ಮುಂದುವರೆಸಿ ಆರೆಂಜ್‌ ಕ್ಯಾಪ್‌ ಗೆಲ್ಲುವ ಕನಸು ಕಾಣುತ್ತಿದ್ದಾರೆ.

Story first published: Friday, April 17, 2026, 18:06 [IST]
Other articles published on Apr 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+