52 ವರ್ಷಗಳ ಹಿಂದಿನ ಜಯ ಮತ್ತೆ ದಾಖಲಿಸಲಿದೆಯಾ ಟೀಮ್ ಇಂಡಿಯಾ?!

ವೆಲ್ಲಿಂಗ್ಟನ್, ಫೆಬ್ರವರಿ 19: ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾ ದೀರ್ಘ ಕ್ರಿಕೆಟ್ ಮಾದರಿಯಾದ ಟೆಸ್ಟ್ ನಲ್ಲಿ ಪಾಲ್ಗೊಳ್ಳಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಪಂದ್ಯ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಸ್ಟೇಡಿಯಂನಲ್ಲಿ ಶುಕ್ರವಾರ (ಫೆಬ್ರವರಿ 21) ಆರಂಭಗೊಳ್ಳಲಿದೆ. ವೆಲ್ಲಿಂಗ್ಟನ್‌ನ ಈ ಬೇಸಿನ್ ರಿಸರ್ವ್ ಸ್ಟೇಡಿಯಂನಲ್ಲಿ ಭಾರತದ ಅಂಕಿ-ಅಂಶಗಳು ಇನ್ನೂ ಕುತೂಹಲಕಾರಿಯಾಗಿದೆ.
ಬೇಸಿನ್ ರಿಸರ್ವ್ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆದ್ದಿದ್ದೇ ತುಂಬಾ ಕಡಿಮೆ. ವಿರಾಟ್ ಕೊಹ್ಲಿ ಪಡೆ ಈ ಬಾರಿ ಗೆದ್ದರೆ ದಾಖಲೆಯೇ ನಿರ್ಮಾಣವಾಗಲಿದೆ. ಆರಂಭಿಕ ಟೆಸ್ಟ್ ಪಂದ್ಯ ಗೆದ್ದರೆ ಸುಮಾರು 52 ಹಿಂದಿನ ಗೆಲುವನ್ನು ಭಾರತ ಮತ್ತೆ ನೆನಪಿಸಿದಂತಾಗುತ್ತದೆ.
ನ್ಯೂಜಿಲೆಂಡ್ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಭಾರತ ಎಷ್ಟು ಪಂದ್ಯಗಳನ್ನು ಗೆದ್ದಿದೆ? 52 ವರ್ಷಗಳ ಹಿಂದೆ ಗೆದ್ದಿದ್ದು ಯಾರ ನಾಯಕತ್ವದಲ್ಲಿ? ಬೇಸಿನ್ ರಿಸರ್ವ್ ಸ್ಟೇಡಿಯಂನ ಅಂಕಿ-ಅಂಶಗಳೇನು ಎಂಬಿತ್ಯಾದಿ ಸಂಗತಿಗಳನ್ನು ಕೆಳಗೆ ವಿವರಿಸಿದ್ದೇವೆ.

ಭಾರತ ಗೆದ್ದಿದ್ದು ಬರೀ 5ರಲ್ಲಷ್ಟೇ
ನ್ಯೂಜಿಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ಒಟ್ಟು 23 ಟೆಸ್ಟ್ ಪಂದ್ಯಗಳನ್ನಾಡಿದೆ. ಇದರಲ್ಲಿ ಭಾರತ ಗೆದ್ದಿದ್ದು ಕೇವಲ ಐದು ಪಂದ್ಯಗಳಲ್ಲಷ್ಟೇ. ಇನ್ನು 8 ಪಂದ್ಯಗಳಲ್ಲಿ ಇಂಡಿಯಾ ಸೋತಿದ್ದರೆ ಉಳಿದ 10 ಪಂದ್ಯಗಳು ಡ್ರಾ ಅನ್ನಿಸಿದ್ದವು. ಒಟ್ಟಿನಲ್ಲಿ ನ್ಯೂಜಿಲೆಂಡ್‌ನಲ್ಲಿ ಭಾರತ ಟೆಸ್ಟ್‌ನಲ್ಲಿ ಗೆದ್ದಿದ್ದು ಬೆರಳೆಣಿಕೆ ಪಂದ್ಯಗಳನ್ನಷ್ಟೇ.

ಬೇಸಿನ್ ರಿಸರ್ವ್‌ನಲ್ಲಿ ಕೆಟ್ಟ ದಾಖಲೆ
ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಸ್ಟೇಡಿಯಂನಲ್ಲಿನ ಭಾರತದ ಟೆಸ್ಟ್ ಅಂಕಿ-ಅಂಶಗಳು ಇನ್ನೂ ಕೆಟ್ಟದಾಗಿದೆ. ಅಂದರೆ ಈ ಸ್ಟೇಡಿಯಂನಲ್ಲಿ ಆಡಿರುವ ಒಟ್ಟು 7 ಪಂದ್ಯಗಳಲ್ಲಿ ಭಾರತ ಗೆದ್ದಿದ್ದು ಕೇವಲ 1ರಲ್ಲಷ್ಟೇ. ಉಳಿದ 4ರಲ್ಲಿ ಸೋತಿದ್ದರೆ, ಇನ್ನೆರಡರಲ್ಲಿ ಡ್ರಾ ಸಾಧಿಸಿತ್ತು.

52 ವರ್ಷಗಳ ಹಿಂದಿನ ಗೆಲುವು
ವೆಲ್ಲಿಂಗ್ಟನ್‌ನ ಬೇಸಿನ್ ರಿವರ್ಸ್ ಸ್ಟೇಡಿಯಂನಲ್ಲಿ ಭಾರತ ಟೆಸ್ಟ್ ಪಂದ್ಯ ಗೆದ್ದಿದ್ದು ಸುಮಾರು 52 ವರ್ಷಗಳ ಹಿಂದೆ. 1968ರಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ನಾಯಕತ್ವದಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ಧ (ಈ ಸ್ಟೇಡಿಯಂನಲ್ಲಿ) ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿತ್ತು. ಇದರಲ್ಲಿ 8 ವಿಕೆಟ್ ಜಯ ಗಳಿಸಿತ್ತು.

ಬೇಸಿನ್ ರಿಸರ್ವ್ ಫಲಿತಾಂಶಗಳು
ಬೇಸಿನ್ ರಿವರ್ಸ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಸೋಲು-ಗೆಲುವುಗಳು ಇಂತಿವೆ. 1968ರಲ್ಲಿ 8 ವಿಕೆಟ್ ಗೆಲುವು, 1976ರಲ್ಲಿ ನ್ಯೂಜಿಲೆಂಡ್‌ಗೆ ಇನ್ನಿಂಗ್ಸ್ ಸಹಿತ 33 ರನ್ ಜಯ, 1981ರಲ್ಲಿ ಕಿವೀಸ್‌ಗೆ 62 ರನ್ ಗೆಲುವು, 1998ರಲ್ಲಿ ನ್ಯೂಜಿಲೆಂಡ್ 4 ವಿಕೆಟ್ ವಿಜಯ, 2002ರಲ್ಲಿ ನ್ಯೂಜಿಲೆಂಡ್‌ಗೆ 10 ವಿಕೆಟ್ ಜಯ, 2009ರ ಪಂದ್ಯ ಡ್ರಾ, 2014ರ ಪಂದ್ಯ ಡ್ರಾ ಅನ್ನಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications