ಕೊಹ್ಲಿ ನಾಯಕತ್ವದಲ್ಲಿ ಸತತ 4ನೇ ಸೋಲು: ಭಾರತದಲ್ಲಿನ 14 ಪಂದ್ಯಗಳ ಅಜೇಯ ಸಾಧನೆಯೂ ಅಂತ್ಯ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 227 ರನ್‌ಗಳ ಅಂತರದಿಂದ ಸೋಲು ಕಂಡಿದೆ. ಆಸಿಸ್ ವಿರುದ್ಧದ ಸ್ಮರಣೀಯ ಟೆಸ್ಟ್ ಸರಣಿ ಗೆಲುವಿನ ಉತ್ಸಾಹದಲ್ಲಿದ್ದ ತಂಡಕ್ಕೆ ಈ ಸೋಲು ಆಘಾತವನ್ನು ಮೂಡಿಸಿದೆ. ಈ ಸೋಲಿನೊಂದಿಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸತತ ನಾಲ್ಕನೇ ಸೋಲನ್ನು ಟೀಮ್ ಇಂಡಿಯಾ ಕಂಡಂತಾಗಿದೆ.
ವಿರಾಟ್ ಕೊಹ್ಲಿ ನಾಯಕನಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ನಾಯಕತ್ವದಲ್ಲಿ ಸತತ ನಾಲ್ಕು ಸೋಲನ್ನು ಕಂಡಿದ್ದಾರೆ. ಕಳೆದ ವರ್ಷಾರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ವೆಲ್ಲಿಂಗ್ಟನ್ ಹಾಗೂ ಕ್ರೂಸ್ಟ್ ಚರ್ಚ್ ಪಂದ್ಯಗಳನ್ನು ಭಾರತ ಕಳೆದುಕೊಂಡಿತ್ತು. ಅದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಅಡಿಲೇಡ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಕೂಡ ಭಾರತ ಸೋತಿತ್ತು. ಈಗ ಚೆನ್ನೈನಲ್ಲೂ ಭಾರತ ಎದುರಾಳೀಗೆ ಶರಣಾಗಿದೆ.

10 ವರ್ಷಗಳಲ್ಲಿ ನಾಲ್ಕನೇ ಸೋಲು
ಕಳೆದ 10 ವರ್ಷಗಳಲ್ಲಿ ಟೀಮ್ ಇಂಡಿಯಾ ಭಾರತದ ನೆಲದಲ್ಲಿ ಸೋತ ಕೇವಲ 4ನೇ ಟೆಸ್ಟ್ ಪಂದ್ಯ ಇದಾಗಿದೆ. ಭಾರತ ಇದಕ್ಕೂ ಮೊದಲು ಕೊನೆಯ ಬಾರಿಗೆ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಅದಾದ ಬಳಿಕ ತವರಿನಲ್ಲಿ ನಡೆದ ಸತತ 14 ಪಂದ್ಯಗಳಲ್ಲಿ ಅಜೇಯವಾಗುಳಿದ ಸಾಧನೆ ಮಾಡಿತ್ತು. ಇಂಗ್ಲೆಂಡ್ ವಿರುದ್ಧದ ಈ ಸೋಲಿನ ಮೂಲಕ ಆ ಸಾಧನೆಯೂ ಅಂತ್ಯವಾಗಿದೆ. ಇನ್ನು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ 1999ರ ಬಳಿಕ ಇದೇ ಮೊದಲ ಬಾರಿಗೆ ಸೋಲು ಕಂಡಿದೆ.

ತಿರುಗೇಟು ನೀಡಲೇಬೇಕಿದೆ ಭಾರತ
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತವರಿನಲ್ಲಿ ನಡೆದ ಸರಣಿಯಲ್ಲಿ ಎರಡನೇ ಭಾರಿಗೆ ಟೀಮ್ ಇಂಡಿಯಾ ಆರಂಭಿಕ ಪಂದ್ಯವನ್ನು ಕಳೆದುಕೊಂಡಿದೆ. ಹೀಗಾಗಿ ಸರಣಿಯನ್ನು ವಶಪಡಿಸಿಕೊಲ್ಳುವ ಜೊತೆಗೆ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ಗೇರುವ ಗುರಿಯನ್ನು ಸಾಧಿಸಲು ಮುಂದಿನ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ತಿರುಗೇಟನ್ನು ನೀಡಲೇಬೇಕಿದೆ.

ಇಂಗ್ಲೆಂಡ್‌ಗೆ ಶ್ರೇಯಸ್ಸು ಸಲ್ಲಬೇಕು
ಇನ್ನು ಈ ಸೋಲಿನ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ" ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಬೌಲಿಂಗ್‌ನಲ್ಲಿ ಎದುರಾಳಿಗೆ ಹೆಚ್ಚಿನ ಒತ್ತಡವನ್ನು ಹಾಕುವಲ್ಲಿ ವಿಫಲರಾದೆವು. ಇದರ ಜೊತೆಗೆ ಮತ್ತಷ್ಟು ಹೆಚ್ಚಿನ ರನ್ ಗಳಿಸಲು ವಿಫಲರಾದೆವು. ಆದರೆ ಇಂಗ್ಲೆಂಡ್ ಉತ್ತಮ ಪ್ರದರ್ಶನವನ್ನು ನೀಡಿದ ಕಾರಣ ಇದರ ಶ್ರೇಯಸ್ಸು ಅವರಿಗೆ ಸಲ್ಲಬೇಕು" ಎಂದಿದ್ದಾರೆ.

ಚೆನ್ನೈನಲ್ಲೇ ನಡೆಯಲಿದೆ ಎರಡನೇ ಪಂದ್ಯ
ಇನ್ನು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿನ ಈ ಸೋಲಿನ ಬಳಿಕ ಟೀಮ್ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದತ್ತ ಚಿತ್ತವನ್ನು ನೆಟ್ಟಿದೆ. ಎರಡನೇ ಪಂದ್ಯವೂ ಕೂಡ ಚೆನ್ನೈನಲ್ಲೇ ನಡೆಯಲಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ. ಮುಂದಿನ ಶನಿವಾರ ಫೆಬ್ರವರಿ 13ರಿಂದ ಎರಡನೇ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕೆ ಪ್ರೇಕ್ಷಕರಿಗೂ ವೀಕ್ಷಣೆಗೆ ಅವಕಾಶವಿದ್ದು ಸ್ಟೇಡಿಯಮ್‌ನ ಸಾಮರ್ಥ್ಯದ ಅರ್ಧದಷ್ಟು ಜನರು ಪಂದ್ಯದ ವೀಕ್ಷಣೆಗೆ ಆಗಮಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications