ಸರಣಿ ಸೋಲಿನ ಮುಖಭಂಗದ ಜೊತೆಗೆ ವಿರಾಟ್ ಕೊಹ್ಲಿ ಹೆಸರಿಗೆ 'ಈ' ಕಳಂಕ

ಟಿ20 ವೈಟ್‌ವಾಶ್‌ನ ಉತ್ಸಾದಲ್ಲಿ ಏಕದಿನ ಸರಣಿಯನ್ನಾಡಲು ಬಂದ ಟಿಮ್ ಇಂಡಿಯಾಗೆ ಓಡಿಐನಲ್ಲಾಗಿದ್ದು ಮುಖಭಂಗ. ಮೂರು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಈಗಾಗಲೆ ಎರಡು ಪಂದ್ಯಗಳನ್ನು ಸೋತು ಎದುರಾಳಿಯ ಕೈಗೆ ಸರಣಿಯನ್ನು ನೀಡಿದೆ.
ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಸೋಲಿಗೆ ಕಾರಣವಾಗಿದೆ. ಸ್ವತಃ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಎಲ್ಲೂ ಕೆಟ್ಟ ಪ್ರದರ್ಶನವನ್ನು ನೀಡಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಕೀವಿಸ್ ವೇಗಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಸೌಥಿಗೆ ನೀಡಿದ ಈ ವಿಕೆಟ್ ಜೊತೆಗೆ ಕೊಹ್ಲಿ ಕಳಂಕವೊಂದನ್ನು ಅಂಟಿಸಿಕೊಂಡು ಬಿಟ್ಟಿದ್ದಾರೆ. ಏನದು ಮುಂದೆ ಓದಿ...

ಮತ್ತೆ ಮತ್ತೆ ಟಿಮ್ ಸೌಥಿಗೆ ವಿಕೆಟ್
ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲಿ ಉತ್ತಮ ಆಟವನ್ನು ಪ್ರದರ್ಶಿಸುವಲ್ಲಿ ವಿಫಲರಾದರು. ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿಗೆ ವಿರಾಟ್ ನಿನ್ನೆಯ ಪಂದ್ಯದಲ್ಲಿ ವಿಕೆಟ್ ಒಪ್ಪಿಸಿದ್ದಾರೆ.ಕೀವಿಸ್ ವೇಗಿ ಟಿಮ್ ಸೌಥಿ ಈ ಮೂಲಕ 9ನೇ ಬಾರಿ ವಿರಾಟ್ ಕೊಹ್ಲಿ ವಿಕೆಟ್ ಪಡೆದುಕೊಂಡಿದ್ದಾರೆ.

ದಾಖಲೆ ಬಾರಿಗೆ ವಿರಾಟ್ ವಿಕೆಟ್ ಪಡೆದ ಸೌಥಿ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟನ್ನು ಎಲ್ಲಾ ಮಾದರಿಯ ಕ್ರಿಕೆಟ್‌ಗಳಲ್ಲಿ ಟಿಮ್ ಸೌಥಿ 9ನೇ ಬಾರಿಗೆ ಔಟ್ ಮಾಡಿದ್ದಾರೆ. ಇದು ವಿರಾಟ್ ಕೊಹ್ಲಿಯನ್ನು ಬೌಲರ್ ಓರ್ವ ಅತಿ ಹೆಚ್ಚಿಬಾರಿ ಔಟ್ ಮಾಡಿದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ನಾಯಕ ಕಳಂಕವನ್ನು ಅಂಟಿಸಿಕೊಂಡಿದ್ದಾರೆ.

ಕೊಹ್ಲಿ ವಿಕೆಟ್ ಅತಿ ಹೆಚ್ಚಿ ಬಾರಿ ಪಡೆದವರು
ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಮತ್ತು ಗ್ರೇಮ್ ಸ್ವಾನ್ ವಿರಾಟ್ ಕೊಹ್ಲಿಯನ್ನು 8 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಮಾರ್ನೆ ಮಾರ್ಕೆಲ್, ನಥನ್ ಲಯನ್, ಝಂಪಾ ಮತ್ತು ರಾಂಪಾಲ್ ವಿರಾಟ್ ಕೊಹ್ಲಿ ವಿಕೆಟನ್ನು 7 ಬಾರಿ ಪಡೆದುಕೊಂಡ ಆಟಗಾರರಾಗಿದ್ದಾರೆ.

ಎರಡನೇ ಪಂದ್ಯದಲ್ಲಿ ಕೊಹ್ಲಿ ಕಳಪೆ ಪ್ರದರ್ಶನ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲಿ ಕಳಪೆ ಆಟವನ್ನು ಪ್ರದರ್ಶಿಸಿದ್ದಾರೆ. 25 ಎಸೆತಗಳನ್ನು ಎದುರಿಸಿದ ಕೊಹ್ಲಿ 15 ರನ್‌ಗಳಿಸಲಷ್ಟೇ ಶಕ್ತರಾಗಿದರು. ನ್ಯೂಜಿಲೆಂಡ್ ನೀಡಿದ 274 ರನ್‌ಗಳ ಗುರಿ ಬೆನ್ನತ್ತಿದ ಕೊಹ್ಲಿ ಪಡೆ 251 ರನ್‌ಗಳಿಗೆ ಪತನವಾಗಿ ಸರಣಿ ಒಪ್ಪಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications