ಡೇ-ನೈಟ್ ಟೆಸ್ಟ್ ಯಾವಾಗಲೂ ಆಡುವಂತಾಗಬಾರದು: ವಿರಾಟ್ ಕೊಹ್ಲಿ

ಕೋಲ್ಕತ್ತಾ, ನವೆಂಬರ್ 21: ಅಪರೂಪಕ್ಕೊಮ್ಮೆ ಡೇ-ನೈಟ್ ಟೆಸ್ಟ್ ಆಡಬಹುದೇನೊ, ಆದರೆ ಟೆಸ್ಟ್ ಕ್ರಿಕೆಟ್ ಅಂದರೇನೆ ಡೇ-ನೈಟ್ ಟೆಸ್ಟ್ ಎಂಬಂತಾಗಬಾರದು. ಸಾಂಪ್ರದಾಯಿಕ ರೆಡ್ ಬಾಲ್ ಟೆಸ್ಟ್‌ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಿಸಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನವೆಂಬರ್ 22ರಿಂದ ಭಾರತ vs ಬಾಂಗ್ಲಾ ನಡುವಣ ಡೇ-ನೈಟ್ ಟೆಸ್ಟ್ ಪಂದ್ಯಾಟ ಆರಂಭವಾಗಲಿದೆ. ಎರಡೂ ತಂಡಗಳು ಇದೇ ಮೊದಲ ಬಾರಿಗೆ ಡೇ-ನೈಟ್ ಟೆಸ್ಟ್‌ನಲ್ಲಿ ಆಡುತ್ತಿವೆ. ಡೇ-ನೈಟ್ ಟೆಸ್ಟ್ ರೋಮಾಂಚನ ಅನ್ನಿಸಲಿದೆ ನಿಜ ಆದರೆ, ಅದೇ ಟೆಸ್ಟ್ ಕ್ರಿಕೆಟ್ ಸಂಪ್ರದಾಯವಾಗಬಾರದು ಎಂಬರ್ಥದಲ್ಲಿ ಕೊಹ್ಲಿ ಹೇಳಿಕೆ ನೀಡಿದ್ದಾರೆ.
'ಡೇ-ನೈಟ್ ಟೆಸ್ಟ್ ಮೂಲಕ ಮಾತ್ರ ಟೆಸ್ಟ್ ಕ್ರಿಕೆಟ್ ಆಡುವಂತಾಗಬಾರದು. ಹಾಗಾದರೆ ನೀವು ಬೆಳಗಿನ ಮೊದಲ ಸೆಷನ್‌ನ ಹೆದರಿಕೆಯನ್ನೇ ಕಳೆದುಕೊಳ್ಳುತ್ತೀರಿ. ಡೇ-ನೈಟ್ ಟೆಸ್ಟ್ ಮೂಲಕ ನೀವು ಟೆಸ್ಟ್ ಕ್ರಿಕೆಟ್‌ಗೆ ರೋಮಾಂಚನ ತರಬಹುದೇನೋ. ಆದರೆ ಟೆಸ್ಟ್ ಕ್ರಿಕೆಟ್‌ನ ನಿಜವಾದ ಮನರಂಜನೆ ತರಲು ಸಾಧ್ಯವಿಲ್ಲ,' ಎಂದು ಕೊಹ್ಲಿ ಹೇಳಿದ್ದಾರೆ.
'ಟೆಸ್ಟ್ ಕ್ರಿಕೆಟ್‌ನ ನಿಜವಾದ ಮನರಂಜನೆ ಅಡಗಿರೋದು ಸೆಷನ್‌ನಲ್ಲಿ ಬ್ಯಾಟ್ಸ್‌ಮನ್ ಔಟಾಗದೆ ಉಳಿಯಲು ಯತ್ನಿಸುವುದು ಮತ್ತು ಬೌಲರ್, ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡಲು ಯತ್ನಿಸುವುದರಲ್ಲಿ. ಇಬ್ಬರೂ ಇದಕ್ಕೆ ಸ್ಪಂದಿಸಲಾಗದಿದ್ದರೆ ಅದು ಒಳ್ಳೆಯ ಲಕ್ಷಣವಲ್ಲ,' ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications