Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋಲ್ಕತ್ತಾದಲ್ಲಿ ಸ್ನೇಹಿತನನ್ನು ಭೇಟಿಯಾದ ವಿರಾಟ್ ಕೊಹ್ಲಿ: ಫೋಟೋ ವೈರಲ್

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಸಂಬಂಧ ಹಾಗೂ ಕ್ರಿಕೆಟ್‌ಗೆ ಎಷ್ಟು ಮಹತ್ವ ನೀಡುತ್ತಾರೆ ಎಂಬುದನ್ನು ಹೇಳುವ ಅಗತ್ಯವೇ ಇಲ್ಲ. ವಿರಾಟ್‌ ಈಗಲೂ ತಮ್ಮ ಬಾಲ್ಯ ಸ್ನೇಹಿತರನ್ನು ಸಮಯ ಸಿಕ್ಕಾಗಲೆಲ್ಲಾ ಭೇಟಿ ಆಗುತ್ತಲೇ ಬರುತ್ತಾರೆ. ಹಾಗೇ ಕೋಲ್ಕತ್ತಾಗೆ ಬಂದಾಗಲೆಲ್ಲಾ ಕೊಹ್ಲಿ, ತಮ್ಮ ಸ್ನೇಹಿತ ಶ್ರೀವತ್ಸ ಗೋಸ್ವಾಮಿ ಅವರನ್ನು ಭೇಟಿ ಮಾಡಿಯೇ ಮಾಡುತ್ತಾರೆ. ಈ ಬಾರಿಯೂ ಸ್ನೇಹಿತನನ್ನು ವಿರಾಟ್ ಭೇಟಿ ಮಾಡಿದ್ರು.

ಸದ್ಯ ಸಾಮಾಜಿಕ ತಾಣದಲ್ಲಿ ಆ ಒಂದು ಫೋಟೋ ಸಖರ್ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಶ್ರೀವತ್ಸ ಗೋಸ್ವಾಮಿ ಹಾಗೂ ವಿರಾಟ್‌ ಒಂದೇ ಟೇಬಲ್‌ನ ಅಕ್ಕ ಪಕ್ಕದ ಚೇರ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ್ರೆ ಇಬ್ಬರೂ ಹೊಟೇಲ್‌ನಲ್ಲಿ ಊಟವನ್ನು ಆನಂದಿಸಿದಂತೆ ಕಾಣುತ್ತದೆ. ವಿರಾಟ್‌ ಅವರನ್ನು ಭೇಟಿಯಾದ ಬಗ್ಗೆ ಶ್ರೀವತ್ಸ್‌ ಗೋಸ್ವಾಮಿ ಒನ್‌ಇಂಡಿಯಾ ಜೊತೆ ಮಾತನಾಡಿದ್ದಾರೆ.

Virat Kohli Meets Friend Srivatsa Goswami in Kolkata Photo Goes Viral

ವಿರಾಟ್‌ ಕೊಹ್ಲಿ ಸದ್ಯ ವಿಶ್ವದ ಸ್ಟಾರ್ ಆಟಗಾರ. ಅಷ್ಟೇ ಅಲ್ಲ ಒನ್ ಆಫ್‌ ದಿ ಕ್ರಿಕೆಟ್‌ ಐಕಾನ್‌. ಇವರು ಈಗ ಕೋಲ್ಕತ್ತಾದಲ್ಲಿ ಇದ್ದಾರೆ. ಮಾರ್ಚ್‌ 22 ರಿಂದ ಆರಂಭವಾಗಲಿರುವ ಕೆಕೆಆರ್‌ ಹಾಗೂ ಆರ್‌ಸಿಬಿ ನಡುವಣ ಪಂದ್ಯಕ್ಕಾಗಿ ಇವರು ಇಲ್ಲಿಗೆ ಬಂದಿದ್ದಾರೆ. ಈ ವೇಳೆ ವಿರಾಟ್‌ ಕೊಹ್ಲಿ ಮೈದಾನದಲ್ಲಿ ಸಖತ್ ಅಭ್ಯಾಸವನ್ನು ಮಾಡಿದ್ದಾರೆ. ತಮ್ಮ ಕ್ರಿಕೆಟ್‌ ಬದುಕನ್ನು ಬದಿಗಿಟ್ಟು ತನ್ನ ಸ್ನೇಹಿತ ಶ್ರೀವತ್ಸ ಗೋಸ್ವಾಮಿಯನ್ನು ವಿರಾಟ್‌ ಬಿಡುವು ಮಾಡಿಕೊಂಡು ಭೇಟಿ ಮಾಡಿದ್ದಾರೆ.

Virat Kohli Meets Friend Srivatsa Goswami in Kolkata Photo Goes Viral

ಆಗಿದ್ದೇನು?

ವಿರಾಟ್‌ ಬುದವಾರವೇ ಆರ್‌ಸಿಬಿ ತಂಡದ ಜೊತೆಗೆ ಕೋಲ್ಕತ್ತಾಗೆ ಬಂದಿದ್ದಾರೆ. ಈ ವೇಳೆ ಗುರುವಾರ ತಮ್ಮ ಸ್ನೇಹಿತ ಶ್ರೀವತ್ಸರನ್ನು ಹೋಟೆಲ್‌ಗೆ ಕರಿಸಿಕೊಂಡಿದ್ದಾರೆ. ಇದೇ ವೇಳೆ ಇಬ್ಬರೂ ಸ್ನೇಹಿತು ಕುಳಿತು ಊಟ ಸೇವಿಸಿದ್ದಾರೆ. ಅಲ್ಲದೆ ಕೆಲ ಹೊತ್ತು ಮಾತನಾಡಿದ್ದಾರೆ. ಶ್ರೀವತ್ಸ ಗೋಸ್ವಾಮಿ ಭಾರತ ಅಂಡರ್ 19 ತಂಡ 2008ರಲ್ಲಿ ವಿಶ್ವಕಪ್‌ ಗೆದ್ದ ತಂಡದ ಭಾಗವಾಗಿದ್ದರು. ಆಗ ವಿರಾಟ್ ತಂಡವನ್ನು ಮುನ್ನಡೆಸಿದ್ದರು.

ಸುಮಾರು 18 ವರ್ಷಗಳ ಹಿಂದೆ ಇದ್ದ ವಿರಾಟ್‌ಗೂ ಈಗಿನ ವಿರಾಟ್‌ಗೂ ಅಜಗಜಾಂತರ ವ್ಯತ್ಯಾಸ ಇದೆ. ಇಂದು ವಿರಾಟ್‌ ಕೊಹ್ಲಿ ಚೇಸಿಂಗ್ ಸ್ಟಾರ್ ಆದ್ರೂ, ಸಹ ಅವರ ಸ್ನೇಹದಲ್ಲಿ ಯಾವುದೇ ಬಿರುಕಿಲ್ಲ. ವಿರಾಟ್‌ ಅವರೊಂದಿಗೆ ಭೋಜನ ಮಾಡಿದ ಬಳಿಕದ ಫೋಟೋವನ್ನು ಶ್ರೀವತ್ಸ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಒನ್ ಇಂಡಿಯಾದ ಜೊತೆ ಮಾತನಾಡಿರುವ ಶ್ರೀವತ್ಸ, " ನಮ್ಮ ಸ್ನೇಹ 2007ರಿಂದಲೂ ಹಾಗೇ ಇದೆ. ನಾನು ಸ್ನೇಹಿತನಾಗಿ ಕೊಹ್ಲಿಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ನಮ್ಮಿಬ್ಬರ ಸ್ನೇಹ ಮೊದಲಿನಂತೆ ಇದೆ. ನಾವಿಬ್ಬರೂ ಸೇರಿದಾಗ ಕ್ರಿಕೆಟ್‌ ಬಗ್ಗೆ ಮಾತನಾಡುವುದೇ ಇಲ್ಲ. ಇಬ್ಬರೂ ಕುಟುಂಬಸ್ಥರ ಬಗ್ಗೆ ಮಾತನಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ವಿರಾಟ್‌ ತನ್ನ ಫಿಟ್ನೆಸ್‌ನಿಂದಾಗಿ ಎಲ್ಲರಿಗಿಂತೂ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಫಿಟ್ನೆಸ್ ಅನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಈ ವಯಸ್ಸಿನಲ್ಲೂ ವಿರಾಟ್‌ ಈ ರೀತಿಯ ಪ್ರದರ್ಶನ ನೀಡುವುದರ ಹಿಂದೆ ಖಂಡಿತವಾಗಿಯೂ ಅವರ ಫಿಟ್ನೆಸ್ ಕಾರಣ ಎಂದು ತಿಳಿಸಿದ್ದಾರೆ. ಹಿಂದಿನ ವಿಷಯಗಳ ಬಗ್ಗೆ ನಾನು ಮಾತನಾಡಲು ಹೋಗಲಿಲ್ಲ. ವಿರಾಟ್‌ಗೆ ಮತ್ತೆ ಅಭ್ಯಾಸದಲ್ಲಿ ಭಾಗಿ ಆಗಬೇಕಿತ್ತು ಎಂದು ಶ್ರೀವತ್ಸ ತಿಳಿಸಿದ್ದಾರೆ.

Story first published: Thursday, March 20, 2025, 23:30 [IST]
Other articles published on Mar 20, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+