Virat Kohli: ಅಭ್ಯಾಸದ ಬಳಿಕ ವಿಶೇಷ ಅಭಿಮಾನಿಯನ್ನ ಭೇಟಿಯಾದ ವಿರಾಟ್ ಕೊಹ್ಲಿ, ಫೋಟೋ ಭಾರೀ ವೈರಲ್
Virat Kohli: ಐಪಿಎಲ್ 2026ರ ಸಿದ್ಧತೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು, ತಮ್ಮ ಅಭ್ಯಾಸದ ಅವಧಿಯ ನಂತರ ವಿಶೇಷ ಚೇತನ ಅಭಿಮಾನಿ ಧರಮ್‌ವೀರ್ ಪಾಲ್ ಅವರನ್ನು ಭೇಟಿಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಈ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರಿಕೆಟ್ ಪಂದ್ಯಗಳನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಧರಮ್‌ವೀರ್ ಪರಿಚಿತ ಮುಖ. ಮಧ್ಯಾಪ್ರದೇಶದ ಮೊರೆನಾ ಜಿಲ್ಲೆಯ ಸಣ್ಣ ಹಳ್ಳಿಯವರಾದ ಇವರು, ಸ್ನಾಯುಗಳ ದೌರ್ಬಲ್ಯ ಮತ್ತು ಮೂಳೆಗಳ ಸಮಸ್ಯೆಯಿಂದಾಗಿ ಅವರಿಗೆ ನಡೆಯಲು ಆಗುತ್ತಿಲ್ಲ. ಆದರೂ, ಕ್ರಿಕೆಟ್ ಮೇಲಿನ ಅವರ ಪ್ರೀತಿ ಅವರನ್ನು ವಿಶ್ವದಾದ್ಯಂತ ಸುತ್ತುವಂತೆ ಮಾಡಿದೆ. ಕಳೆದ ಎರಡು ದಶಕಗಳಿಂದ ಅವರು ಭಾರತದ ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸದ್ಯ Honorary Ball Boy ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಟೋಗ್ರಾಫ್ ನೀಡಿದ ಕೊಹ್ಲಿ
ಆರ್‌ಸಿಬಿ ತರಬೇತಿ ಶಿಬಿರದ ನಂತರ ಧರಮ್‌ವೀರ್ ಅವರು ಕೊಹ್ಲಿಯನ್ನು ಆಟೋಗ್ರಾಫ್‌ಗಾಗಿ ಕೂಗಿ ಕರೆದರು. ಧರಮ್‌ವೀರ್ ಅವರನ್ನು ತಕ್ಷಣವೇ ಗುರುತಿಸಿದ ಕೊಹ್ಲಿ, ಅವರ ಬಳಿ ಬಂದು ಪುಟ್ಟ ಬ್ಯಾಟ್‌ಗಳ ಮೇಲೆ ಸಹಿ ಹಾಕಿಕೊಟ್ಟಿದ್ದಲ್ಲದೆ, ಅವರೊಂದಿಗೆ ಫೋಟೋಗೆ ಫೋಸ್ ನೀಡಿದರು.
ಧರಮ್‌ವೀರ್ ಸಾಧನೆ
ಇದು ಇವರ ಮೊದಲ ಭೇಟಿಯಲ್ಲ. 2022ರಲ್ಲಿ ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ತಮ್ಮ 100ನೇ ಟೆಸ್ಟ್ ಪಂದ್ಯದ ನೆನಪಿಗಾಗಿ ಕೊಹ್ಲಿ ತಮ್ಮ ಜೆರ್ಸಿಯನ್ನು ಧರಮ್‌ವೀರ್‌ಗೆ ಉಡುಗೊರೆಯಾಗಿ ನೀಡಿದ್ದರು. ಇನ್ನೂ ಆರ್ಥಿಕ ಸಂಕಷ್ಟದ ನಡುವೆಯೂ ತಮ್ಮ ಛಲ ಬಿಡದ ಇವರು, ಇಂದು ಕ್ರಿಕೆಟ್ ಜಗತ್ತಿನ ಚಿರಪರಿಚಿತ ಮುಖ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಿಗೆ ಪ್ರಯಾಣಿಸಿ ಟೀಮ್ ಇಂಡಿಯಾವನ್ನು ಬೆಂಬಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications