ಏಕದಿನ ಶ್ರೇಯಾಂಕ ಪ್ರಕಟ: ಬೌಲರ್, ಬ್ಯಾಟ್ಸ್ ಮನ್, ತಂಡಗಳ ಪಟ್ಟಿ
ನವದೆಹಲಿ, ಅಕ್ಟೋಬರ್ 30: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಏಕದಿನ ಬ್ಯಾಟ್ಸ್ ಮನ್ ಗಳ ಶ್ರೇಯಾಂಕ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಗ್ರ ಸ್ಥಾನಕ್ಕೇರಿದ್ದಾರೆ.
28 ವರ್ಷದ ವಿರಾಟ್ ಕೊಹ್ಲಿ ಒಟ್ಟು 889 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಅವರನ್ನು ಹಿಂದಿಕ್ಕಿ ಐಸಿಸಿ ಏಕದಿನ ಬ್ಯಾಟ್ಸ್ ಮನ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಪಟ್ಟಕ್ಕೇರಿದರು.
ಭಾನುವಾರ ಕಾನ್ಪುರ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಮೋಘ ಶತಕ ಸಿಡಿಸಿದ್ದರಿಂದ ಶ್ರೇಯಾಂಕಲ್ಲಿ ನಂಬರ್ ಒನ್ ಆಗಲು ನೆರವಾಗಿದೆ.
ಇತ್ತೀಚೆಗೆ ಅಷ್ಟೇ ಎಬಿಡಿ ವಿಲಿಯರ್ಸ್ ಬಾಂಗ್ಲಾದೇಶದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರಿಂದ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕೊಹ್ಲಿಯನ್ನು ಹಿಂದಿಕ್ಕೆ ಅಗ್ರಸ್ಥಾಕ್ಕೇರಿದ್ದರು.
ಸಧ್ಯ ಎಬಿಡಿ 872 ಅಂಕಗಳೊಂದಿಗೆ ಎಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ 865 ಅಂಕ ಒಡೆದು ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಬೌಲಿಂಗ್, ಆಲ್ ರೌಂಡರ್ ಹಾಗೂ ತಂಡಗಳು ಶ್ರೇಯಾಂಕ ಪಟ್ಟಿ ಈ ಕೆಳಗಿನಂತಿದೆ.

ಐಸಿಸಿ ಟಾಪ್ 5 ಬ್ಯಾಟ್ಸ್ ಮನ್ ಗಳು
1. ಭಾರತದ ವಿರಾಟ್ ಕೊಹ್ಲಿ( 889)
2. ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ (872 )
3. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (865).
4. ಪಾಕಿಸ್ತಾನದ ಬಾಬರ್ ಅಜಮ್ (846)
5 ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ (808)

ಐಸಿಸಿ ಟಾಪ್ 5 ಬೌಲರ್ಸ್
ಬೌಲಿಂಗ್ ವಿಭಾಗದಲ್ಲಿ ಭಾರತದ ವೇಗಿ ಜಸ್ ಪ್ರೀತ್ ಬೂಮ್ರಾ 719 ಅಂಕದೊಂದಿಗೆ ಮೂರನೇ ಸ್ಥಾನಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿ ಪಾಕಿಸ್ತಾನದ ಹಸನ್ ಅಲಿ(759) ಇದ್ದರೇ, 2ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ (743) ಇದ್ದಾರೆ.

ಐಸಿಸಿ ಟಾಪ್ 5 ಆಲ್ ರೌಂಡರ್ಸ್
1. ಪಾಕಿಸ್ತಾನದ ಮೊಹಮ್ಮದ್ ಹಫೀಜ್ (352).
2. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ( 346).
3. ಅಪಘಾನಿಸ್ತಾನದ ಮೊಹಮ್ಮದ್ ನಬೀ(329.
4. ಇಂಗ್ಲೆಡ್ ನ ಬೆನ್ ಸ್ಟೋಕ್ 293.
5 ಶ್ರೀಲಂಕಾದ ಏಂಜೆಲೋ ಮ್ಯಾಥ್ಯೂಸ್ 290.

ಐಸಿಸಿ ಟಾಪ್ 5 ತಂಡಗಳು
1. ದಕ್ಷಿಣ ಆಫ್ರಿಕಾ (121)
2. ಭಾರತ(119).
3. ಆಸ್ಟ್ರೇಲಿಯಾ(114).
4 ಇಂಗ್ಲೆಂಡ್(114).
5. ನ್ಯೂಜಿಲೆಂಡ್(113)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications