ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ ಕೊಹ್ಲಿ

Posted By:

ದುಬೈ, ನವೆಂಬರ್ 21 : ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟೆಸ್ಟ್ ಕ್ರಿಕೆಟ್ ಬ್ಯಾಟ್ಸ್ ಮನ್ ಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಐದನೇ ಸ್ಥಾನಕ್ಕೇರಿದ್ದಾರೆ.

ನಾಯಕನಾಗಿ 11 ಶತಕ ಸಿಡಿಸಿ ಗವಾಸ್ಕರ್ ದಾಖಲೆ ಸರಿಗಟ್ಟಿದ ಕೊಹ್ಲಿ

ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ ನೆರವಿನಿಂದ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿ 5ನೇ ಸ್ಥಾನವನ್ನು ಅಲಂಕರಿಸಿದರು.

Virat Kohli moves up to 5th in ICC Test rankings; Ravindra Jadeja drops to third place

ಏಕದಿನ ಹಾಗೂ ಟಿ20 ಬ್ಯಾಟ್ಸ್ ಮನ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಟೆಸ್ಟ್ ಕ್ರಿಕೆಟ್ ನಲ್ಲೂ ಒಂದು ಮೇಲಕ್ಕೇರಿ ಐದನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಆಸೀಸ್ ನ ಸ್ಟಿವ್ ಸ್ಮಿತ್ ಅಗ್ರಸ್ಥಾನದಲ್ಲಿ ಮುಂದುರೆದಿದ್ದರೆ, ಇಂಗ್ಲೆಡ್ ನ ಜೋ ರೂಟ್ 2ನೇ ಶ್ರೇಯಾಂದಲ್ಲಿದ್ದಾರೆ.

ಇನ್ನಳಿದಂತೆ ಭಾರತದ ಶಿಖರ್ ಧವನ್ ಎರಡು ಸ್ಥಾನ ಮೇಲಕ್ಕೇರಿ 28ನೇ ಅಲಂಕರಿಸಿದ್ದಾರೆ. ಇನ್ನು ಬೌಲಿಂಗ್ ವಿಭಾದಲ್ಲಿ ಭುವನೇಶ್ವರ್ ಕುಮಾರ್ 8ಸ್ಥಾನ ಬಡ್ತಿ ಪಡೆದು 29ನೇ ಸ್ಥಾನಕ್ಕೇರಿದರೆ, ರವೀಂದ್ರ ಜಡೇಜಾ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

Story first published: Tuesday, November 21, 2017, 17:55 [IST]
Other articles published on Nov 21, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ