ಟಾಪ್ 100 ಜನಪ್ರಿಯ ಕ್ರೀಡಾಪಟು: ಕೊಹ್ಲಿ, ಧೋನಿಗೆ ಮಾತ್ರ ಸ್ಥಾನ
ಬೆಂಗಳೂರು, ಮೇ 31 :ಇಎಸ್ಪಿಎನ್ ಪ್ರಕಟಿಸಿರುವ ವಿಶ್ವದ 100 ಜನಪ್ರಿಯ ಕ್ರೀಡಾಪಟುಗಳ ಪಟ್ಟಿಯಲ್ಲಿ ನಾಲ್ವರು ಮಾತ್ರ ಕ್ರಿಕೆಟರ್ಸ್ ಇದ್ದಾರೆ. ನಾಲ್ವರು ಕೂಡಾ ಟೀಂ ಇಂಡಿಯಾ ಆಟಗಾರರಾಗಿರುವುದು ವಿಶೇಷ.
ಇಂಡಿಯಾ ನಾಯಕ ವಿರಾಟ್ ಕೊಹ್ಲಿ 13ನೇ ಸ್ಥಾನ ಪಡೆದಿದ್ದಾರೆ. ಅವರೊಂದಿಗೆ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ 15ನೇ ಸ್ಥಾನ ಪಡೆದಿದ್ದು, ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಕ್ರಮವಾಗಿ 90 ಮತ್ತು 95ನೇ ಸ್ಥಾನ ಪಡೆದಿದ್ದಾರೆ.

ಅಥ್ಲೀಟ್ಗಳ ಜಾಹೀರಾತು ಒಪ್ಪಂದಗಳು, ಸಾಮಾಜಿಕ ಜಾಲತಾಣದಲ್ಲಿನ ಪ್ರಖ್ಯಾತಿ ಹಾಗೂ ಗೂಗಲ್ ಸರ್ಚ್ನ ಜನಪ್ರಿಯತೆ ಆಧರಿಸಿ ಈ ಪಟ್ಟಿಯನ್ನು ಸಿದ್ಧ ಪಡಿಸಲಾಗಿದೆ. ಪೋರ್ಚುಗಲ್ ಹಾಗೂ ರಿಯಲ್ ಮ್ಯಾಡ್ರಿಡ್ ನ ಸ್ಟಾರ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೋ ಅವರು ವಿಶ್ವದ ಅತ್ಯಂತ ಜನಪ್ರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಮಿಕ್ಕಂತೆ ಈ ಪಟ್ಟಿಯಲ್ಲಿ ಫುಟ್ಬಾಲ್, ಬ್ಯಾಸ್ಕೆಟ್ ಬಾಲ್, ಟೆನಿಸ್ ಆಟಗಾರರಿದ್ದಾರೆ. ಬಾಸ್ಕೆಟ್ಬಾಲ್ ದಿಗ್ಗಜ ಅಮೆರಿಕದ ಲೆಬ್ರಾನ್ ಜೇಮ್ಸ್, ಅರ್ಜೆಂಟೀನಾ ಫುಟ್ಬಾಲರ್ ಲಿಯೋನೆಲ್ ಮೆಸ್ಸಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.
ಟೆನಿಸ್ ಸ್ಟಾರ್ ರೋಜರ್ ಫೆಡರರ್, ರಾಫೆಲ್ ನಡಾಲ್ ಕ್ರಮವಾಗಿ 4 ಮತ್ತು 9ನೇ ಸ್ಥಾನದಲ್ಲಿದ್ದರೆ, ಜಮೈಕಾ ಓಟಗಾರ ಉಸೇನ್ ಬೋಲ್ಟ್, ಟೆನಿಸ್ ಆಟಗಾರ್ತಿಯರಾದ ಸೆರೇನಾ ವಿಲಿಯಮ್ಸ್ ಮತ್ತು ಮರಿಯಾ ಶರಪೋವಾ ಕ್ರಮವಾಗಿ 7, 19 ಮತ್ತು 23ನೇ ಸ್ಥಾನದಲ್ಲಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Kohli, Dhoni in 100 most famous athletes
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications