Virat Kohli: 'T20 ಕ್ರಿಕೆಟ್ ಪ್ರಚಾರಕ್ಕೆ ನನ್ನ ಹೆಸರು ಬಳಸಲಾಗುತ್ತಿದೆ': ವಿಶ್ವಕಪ್‌ಗೆ ಸಿದ್ಧ ಎಂದು ಸಾರಿದ ವಿರಾಟ್ ಕೊಹ್ಲಿ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಟಿ20 ವಿಶ್ವಕಪ್ ತಂಡದಲ್ಲಿ ಸೇರಿಸಬೇಕೆ ಬೇಡವೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ಬೆನ್ನಲ್ಲೆ ವಿರಾಟ್ ಕೊಹ್ಲಿ ಅವರು ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಬಿಸಿಸಿಐ ಆಯ್ಕೆದಾರರಿಗೆ ಸಂದೇಶ ರವಾನಿಸುವ ಅಗತ್ಯತೆ ಇತ್ತು. ಇದಕ್ಕಾಗಿ ವಿರಾಟ್ ಕೊಹ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣವನ್ನು ವೇದಿಕೆ ಮಾಡಿಕೊಂಡರು.
ನಿಜಕ್ಕೂ ವಿರಾಟ್ ಆರಂಭದಿಂದಲೇ ಅಬ್ಬರಿಸಲು ಪ್ರಾರಂಭಿಸಿದರು. ವಿರಾಟ್ ಕೊಹ್ಲಿ ಅಪ್‌ಡೇಟ್ ವರ್ಷನ್ ರೀತಿ ಕೊಹ್ಲಿ ಬ್ಯಾಟಿಂಗ್ ಮಾಡಿದರು. ಮೊದಲ ಓವರ್‌ನಲ್ಲೇ ನಾಲ್ಕು ಬೌಂಡರಿ ಬಾರಿಸಿದ ವಿರಾಟ್, ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದರು. ಇಲ್ಲಿಂದ ವಿರಾಟ್ ಕೊಹ್ಲಿ ವಿರಾವೇಶದ ಆಟ ಆರಂಭವಾಯಿತು. ಟೀಕಾಕಾರು ಏನೇ ಹೇಳಿದ್ರು ಬ್ಯಾಟ್ ಎಂಬ ಮಂತ್ರ ದಂಡದ ಮೂಲಕ ಉತ್ತರ ನೀಡುವ ವಿರಾಟ್ ಚಿನ್ನಸ್ವಾಮಿಂ ಅಂಗಳದಲ್ಲಿ ಅಬ್ಬರಿಸಿದರು.

ಐಪಿಎಲ್ 2024ರ ಎರಡನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ವಿರಾಟ್ ತಮ್ಮಲ್ಲಿ ಇನ್ನು ಚುಟುಕು ಕ್ರಿಕೆಟ್ ಆಡುವ ಕ್ಷಮತೆ ಇದೆ ಎಂದು ಸಾರಿದರು. ಸೋಮವಾರ ವಿರಾಟ್ ಕೊಂಚ ಡಿಫ್ರೆಂಟ್ ಸ್ಟೈಲ್‌ನಲ್ಲಿ ಬ್ಯಾಟಿಂಗ್ ಮಾಡಿದರು. ವಿರಾಟ್ ಸ್ಟ್ರೈಕ್ ರೇಟ್ ಅವರ ಅಪ್ ಡೇಟ್ ವರ್ಷನ್‌ಗೆ ಹಿಡಿದ ಕನ್ನಡಿಯಾಗಿತ್ತು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ವಿರಾಟ್ 157.14ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದಾರೆ.
ಕಿಂಗ್ಸ್ ಸದ್ದಡಗಿಸಿದ ಚೇಸಿಂಗ್ ಸ್ಟಾರ್
ಸೋಮವಾರ ಪಂಜಾಬ್ ವಿರುದ್ಧ ಪಂದ್ಯದಲ್ಲಿ ವಿರಾಟ್ 49 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸೇರಿದಂತೆ 77 ರನ್ ಸಿಡಿಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕಗಳ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್ ಕೊಹ್ಲಿ ಅವರ ಅಮೋಘ ಪ್ರದರ್ಶನಕ್ಕೆ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಹಲವು ಪ್ರಶ್ನೆಗಳು ಉತ್ತರ ನೀಡಿದರು.
ನೀವು ಕವರ್ ಡ್ರೈವ್ ಚೆನ್ನಾಗಿ ಬಾರಿಸುತ್ತೀರಿ ಎಂದು ಗೊತ್ತು, ಪಂಜಾಬ್ ವಿರುದ್ಧ ಬೇರೆ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ವಿರಾಟ್, ಪರಿಸ್ಥಿತಿಗೆ ತಕ್ಕಂತೆ ಚೇಂಜ್ ಆಗಬೇಕಾಗುತ್ತದೆ ಎಂದು ತಿಳಿಸಿದರು.

ಪ್ರಚಾರಕ್ಕೆ ನನ್ನ ಹೆಸರು ಬಳಕೆ
T20 ಕ್ರಿಕೆಟ್‌ನಲ್ಲಿ, ಪ್ರಪಂಚದಾದ್ಯಂತ ಪ್ರಚಾರ ಮಾಡಲು ನನ್ನ ಹೆಸರನ್ನು ಬಳಸಲಾಗುತ್ತದೆ ಎಂದು ನನಗೆ ತಿಳಿದಿದೆ. ಹಾಗಾಗಿ ಈ ಮಾದರಿಯಲ್ಲಿ ಆಡುವ ಸಾಮರ್ಥ್ಯ ಇನ್ನೂ ಇದೆ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಅಭಿಮಾನಿಗಳಿಗೆ ಭರವಸೆ ನೀಡುತ್ತೇನೆ ಮತ್ತು ನನ್ನ ಅತ್ಯುತ್ತಮ ನೀಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಎರಡು ತಿಂಗಳ ಕಾಲ ಸಾಮಾನ್ಯ ಜನರಂತೆ ಬದುಕುವುದು ನನಗೆ ಮತ್ತು ನನ್ನ ಕುಟುಂಬಕ್ಕೆ ವಾಸ್ತವಿಕ ಅನುಭವವಾಗಿತ್ತು. ನನ್ನ ಕುಟುಂಬದೊಂದಿಗೆ ಸಮಯ ಕಳೆದಿದಕ್ಕೆ ನಾನು ದೇವರಿಗೆ ಕೃತಜ್ಞನಾಗಿದ್ದೇನೆ. ಬೇರೆ ದೇಶದಲ್ಲಿ ಯಾರೊಬ್ಬರು ಗುರುತಿಸಲಾಗದಿರುವುದು ಅದ್ಭುತ ಅನುಭವ ಎಂದು ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications