Viral Post: ವಿರಾಟ್ ಕೊಹ್ಲಿ-ಯುವರಾಜ್ ಸಿಂಗ್ ನಡುವೆ ಬಿರುಕು; ವೈರಲ್ ಆಯ್ತು ಪೋಸ್ಟ್!
ಪಾಕಿಸ್ತಾನ ಮತ್ತು ದುಬೈ ಆತಿಥ್ಯದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಪ್ರಶಸ್ತಿಯನ್ನು ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡ ಗೆದ್ದಿದೆ. ಮಾರ್ಚ್ 9 ರಂದು ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ 4 ವಿಕೆಟ್‌ಗಳಿಂದ ಸೋಲಿಸಿ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಭಾರತದ ಈ ಐತಿಹಾಸಿಕ ಗೆಲುವಿನ ನಂತರ, ಅನೇಕ ಮಾಜಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಟೀಮ್ ಇಂಡಿಯಾವನ್ನು ಅಭಿನಂದಿಸಿದ್ದಾರೆ.
ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಕೂಡ ಟ್ವೀಟ್ ಮಾಡಿ ಟೀಮ್ ಇಂಡಿಯಾ ಮತ್ತು ಆಟಗಾರರನ್ನು ಅಭಿನಂದಿಸಿದ್ದಾರೆ, ಆದರೆ ಅವರ ಪೋಸ್ಟ್ ವಿರಾಟ್ ಕೊಹ್ಲಿ ಅವರೊಂದಿಗಿನ ಸಂಬಂಧವನ್ನು ಬಹಿರಂಗಪಡಿಸಿದೆ. ಯುವರಾಜ್ ಅವರ ಪೋಸ್ಟ್ ಓದಿದ ನಂತರ, ವಿರಾಟ್ ಮತ್ತು ಯುವರಾಜ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗಗೊಳ್ಳುತ್ತಿದೆ.

ಟೀಮ್ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ತಕ್ಷಣ, ಯುವರಾಜ್ ಸಿಂಗ್ ಒಂದು ಪೋಸ್ಟ್ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿ ಹತ್ತು ಆಟಗಾರರನ್ನು ಟ್ಯಾಗ್ ಮಾಡಿದರು. ಇದಾದ ನಂತರ ವಿರಾಟ್ ಮತ್ತು ಯುವರಾಜ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿವೆ.
ಪೋಸ್ಟ್‌ನಲ್ಲಿ ಏನಿದೆ?
ಯುವರಾಜ್ ಸಿಂಗ್ ತಮ್ಮ ಪೋಸ್ಟ್‌ನಲ್ಲಿ, 'ಎಂತಹ ಪಂದ್ಯ ಮತ್ತು ಎಂತಹ ಅದ್ಭುತ ಫೈನಲ್. ಟೂರ್ನಿಯುದ್ದಕ್ಕೂ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ ಹಿಟ್‌ಮ್ಯಾನ್ ಅವರ ಅದ್ಭುತ ನಾಯಕತ್ವದಿಂದಾಗಿ ಚಾಂಪಿಯನ್ಸ್ ಟ್ರೋಫಿ ತವರಿಗೆ ಬಂದಿತು. ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಆಟ ಪ್ರದರ್ಶಿಸಿದರು. ಒತ್ತಡದಲ್ಲಿ ಧೈರ್ಯ ತೋರಿಸಲು ಅಗತ್ಯವಿದ್ದಾಗ ಮುಂದಾದರು. ರವೀಂದ್ರ ಜಡೇಜ, ಕುಲದೀಪ್ ಯಾದವ್, ಅಕ್ಸರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಟೂರ್ನಿಯುದ್ದಕ್ಕೂ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಮಿಂಚಿದರು. ಮೊಹಮ್ಮದ್ ಶಮಿ ನಿರಂತರವಾಗಿ ಚೆಂಡಿನೊಂದಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ನ್ಯೂಜಿಲೆಂಡ್‌ಗೆ ಯಾವುದೇ ಅದೃಷ್ಟವಿರಲಿಲ್ಲ, ಅವರು ಕೊನೆಯವರೆಗೂ ನಮ್ಮನ್ನು ಒತ್ತಡದಲ್ಲಿಟ್ಟರು, ಆದರೆ ಅದು ನಮ್ಮ ಟೂರ್ನಮೆಂಟ್ ಆಗಿತ್ತು ಎಂದು ಬರೆದುಕೊಂಡಿದ್ದಾರೆ. ಇಲ್ಲಿ ಎಲ್ಲಿಯೂ ವಿರಾಟ್ ಕೊಹ್ಲಿ ಹೆಸರನ್ನು ಬರೆದಿಲ್ಲ.
ಕೊಹ್ಲಿ ಅಬ್ಬರ
ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತವಾಗಿ ಆಡಿದರು. ಶ್ರೇಯಸ್ ಅಯ್ಯರ್ ನಂತರ ಕೊಹ್ಲಿ ಭಾರತ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಕೊಹ್ಲಿ 54.5 ಸರಾಸರಿಯಲ್ಲಿ 218 ರನ್ ಗಳಿಸಿದರು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ 84 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ತಂಡವನ್ನು ಫೈನಲ್‌ಗೆ ಕರೆದೊಯ್ದರು. ಗುಂಪು ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅದ್ಭುತ ಶತಕ ಗಳಿಸಿ ಮಿಂಚಿದ್ದರು. ಆದರೆ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಎಡುವಿದರು. ಕೇವಲ 1 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications