ಐಸಿಸಿ ಟೆಸ್ಟ್, ಏಕದಿನ ಕ್ರಿಕೆಟ್ ವಾರ್ಷಿಕ ತಂಡಗಳಿಗೆ ಕೊಹ್ಲಿ ಕ್ಯಾಪ್ಟನ್

ಬೆಂಗಳೂರು, ಜನವರಿ 15: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯ ಏಕದಿನ ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್ ತಂಡದ ನಾಯಕರನ್ನಾಗಿ ಹೆಸರಿಸಲಾಗಿದೆ. ವಿಶ್ವದ ನಂ.1 ಬ್ಯಾಟ್ಸ್ ಮನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಅವರಿಗೆ ಕಳೆದ ವರ್ಷ ಸ್ಮರಣೀಯವಾಗಿತ್ತು.
ಐಸಿಸಿ ಜನವರಿ 15ರಂದು ಪ್ರಕಟಿಸಿರುವ ತಂಡದಲ್ಲಿ ಕೊಹ್ಲಿ ಅಲ್ಲದೆ, ನಾಲ್ವರು ಭಾರತೀಯರಿದ್ದಾರೆ. ಟೆಸ್ಟ್ ತಂಡದಲ್ಲಿ ದ್ವಿಶತಕ ವೀರ, ಕರ್ನಾಟಕದ ಆಟಗಾರ ಮಯಾಂಕ್ ಅಗರವಾಲ್ ಆಯ್ಕೆಯಾಗಿದ್ದಾರೆ. ಏಕದಿನ ತಂಡದಲ್ಲಿ ಉಪ ನಾಯಕ, ಆರಂಭಿಕ ಆಟಗಾರ ರೋಹಿತ್ ಶರ್ಮ, ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್, ವೇಗಿ ಮೊಹಮ್ಮದ್ ಶಮಿ ಅವರು ಆಯ್ಕೆಯಾಗಿದ್ದಾರೆ.
ಐಸಿಸಿ 2019ರ ತಂಡಗಳು ಇಂತಿದೆ:
ಏಕದಿನ ಕ್ರಿಕೆಟ್ (ಬ್ಯಾಟಿಂಗ್ ಕ್ರಮಾಂಕದಂತೆ): ರೋಹಿತ್ ಶರ್ಮ, ಶಾಯಿ ಹೋಪ್, ವಿರಾಟ್ ಕೊಹ್ಲಿ(ನಾಯಕ), ಬಾಬರ್ ಅಜಂ, ಕೇನ್ ವಿಲಿಯಮ್ಸನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್.
ಟೆಸ್ಟ್ ತಂಡ(ಬ್ಯಾಟಿಂಗ್ ಕ್ರಮಾಂಕದಂತೆ): ಮಯಾಂಕ್ ಅಗರವಾಲ್, ಟಾಮ್ ಲಾಥಮ್, ಮಾರ್ನಸ್ ಲಾಬುಚಾನೆ, ವಿರಾಟ್ ಕೊಹ್ಲಿ(ನಾಯಕ), ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಬಿಜೆ ವ್ಯಾಟ್ಲಿಂಗ್(ವಿಕೆಟ್ ಕೀಪರ್), ಪ್ಯಾಟ್ ಕುಮಿನ್ಸ್, ಮಿಚೆಲ್ ಸ್ಟಾರ್ಕ್, ನೀಲ್ ವಾಗ್ನಾರ್, ನಾಥನ್ ಲಿಯಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications