Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಟಿ20 2016: ಶ್ರೇಷ್ಠ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ!

ಬೆಂಗಳೂರು, ಏಪ್ರಿಲ್ 04: ವಿಶ್ವ ಟ್ವೆಂಟಿ20 2016ರ ಟೂರ್ನಮೆಂಟ್ ನ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸಂತಸದಲ್ಲಿರುವ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಅವರಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಭಾರತದ ಮಧ್ಯ ಕ್ರಮಾಂಕದ ಬ್ಯಾಟ್ಸ್ ಮನ್ ಕೊಹ್ಲಿ ಅವರನ್ನು ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಮೆಂಟ್ ನ ತಂಡದ ನಾಯಕರಾಗಿ ಸೋಮವಾರ(ಏಪ್ರಿಲ್ 04) ಘೋಷಿಸಲಾಗಿದೆ.

ವಿಶ್ವಟ್ವೆಂಟಿ20 ಟೂರ್ನಿಯಲ್ಲಿ 273ರನ್ ಹಾಗೂ 1 ವಿಕೆಟ್ ಪಡೆದು ಟೀಂ ಇಂಡಿಯಾವನ್ನು ಸೆಮಿಫೈನಲ್ ತನಕ ಕೊಂಡೊಯ್ದಿದ್ದ ಕೊಹ್ಲಿ ಅವರು ಈಗ ವಿಶ್ವ ಟ್ವೆಂಟಿ20 ಟೀಂ ಆಫ್ ದಿ ಟೂರ್ನಮೆಂಟ್ ಗೆ ನಾಯಕರಾಗಿದ್ದಾರೆ.[ವಿರಾಟ್ ಕೊಹ್ಲಿಗೆ ಅತ್ಯಂತ ಖುಷಿಕೊಟ್ಟ ಪ್ರಶಸ್ತಿ ಯಾವುದು?]

Virat Kohli named captain of World T20 Team Of The Tournament

ವಿಶ್ವಟಿ20 ಅಂತಿಮ ಸಮರದಲ್ಲಿ ಇಂಗ್ಲೆಂಡ್ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿದ ಕೆರಿಬಿಯನ್ನರು ಎರಡನೇ ಬಾರಿಗೆ ವಿಶ್ವಟಿ20 ಕಪ್ ಗೆ ಮುತ್ತಿಟ್ಟರು.[ವಾರ್ನ್ ಹಾಗೂ ಸ್ಯಾಮುಯಲ್ ವಾಕ್ಸಮರಕ್ಕೆ ಕಾರಣವೇನು? ]

ವಿಶ್ವಟ್ವೆಂಟಿ20 ಟೀಂನಲ್ಲಿ ನಾಲ್ವರು ಇಂಗ್ಲೆಂಡ್ ಆಟಗಾರರು, ವೆಸ್ಟ್ ಇಂಡೀಸ್ ಹಾಗೂ ಭಾರತದಿಂದ ಇಬ್ಬರು, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಿಂದ ತಲಾ ಒಬ್ಬ ಆಟಗಾರರನ್ನು ಹೊಂದಿದೆ. [ಫಲಿತಾಂಶವನ್ನೇ ಬದಲಿಸಿದ ಆ 4 'ದೈತ್ಯ' ಸಿಕ್ಸರ್‌ಗಳು]

ಆಯ್ಕೆ ಸಮಿತಿ:
ಜೆಫ್ ಅಲಾರ್ಡಿಸ್ (ಐಸಿಸಿ ಮ್ಯಾನೇಜರ್), ಇಯಾನ್ ಬಿಶಪ್(ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ), ನಾಸಿರ್ ಹುಸೇನ್(ಇಂಗ್ಲೆಂಡಿನ ಮಾಜಿ ಆಟಗಾರ), ಮೆಲ್ ಜೋನ್ಸ್ (ಆಸ್ಟ್ರೇಲಿಯಾ ಮಹಿಳಾ ತಂಡದ ಮಾಜಿ ಆಟಗಾರ್ತಿ), ಸಂಜಯ್ ಮಂಜೇಕ್ರರ್ (ಭಾರತದ ಮಾಜಿ ಕ್ರಿಕೆಟರ್), ಲಿಸಾ ಸ್ಟಾಲೆಕರ್ (ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ)

ಬ್ಯಾಟಿಂಗ್ ಕ್ರಮಾಂಕದ ರೀತಿಯಲ್ಲಿ ಐಸಿಸಿ ವಿಶ್ವ ಟಿ20 ತಂಡದ 12 ಆಟಗಾರರ ಪಟ್ಟಿ ಸ್ಲೈಡ್ ಗಳಲ್ಲಿ ನೋಡಿ... ಈ ಸುದ್ದಿಯನ್ನು ವಿಡಿಯೋ ಮೂಲಕ ನೋಡಿ

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+