ಐಸಿಸಿ ವಿಶ್ವಕಪ್ ಗೆ ವಿರಾಟ್ ಕೊಹ್ಲಿ ಅಂಬಾಸಿಡರ್
ದುಬೈ, ನ.13: ಮುಂಬರುವ 2015ರ ಐಸಿಸಿ ವಿಶ್ವಕಪ್ ಅಂಬಾಸಿಡರ್ ಆಗಿ ಭಾರತದ ವಿರಾಟ್ ಕೊಹ್ಲಿ ನೇಮಕವಾಗಿದ್ದಾರೆ. ಕೊಹ್ಲಿಯೊಂದಿಗೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಜಾನ್ಸನ್, ಆಲ್ ರೌಂಡರ್ ಶೇನ್ ವಾಟ್ಸನ್, ನ್ಯೂಜಿಲೆಂಡ್ ನಾಯಕ ಬ್ರೆಂಡನ್ ಮಕ್ ಲಮ್ ಮತ್ತು ಶ್ರೀಲಂಕಾದ ಕುಮಾರ್ ಸಂಗಕ್ಕಾರ ನೇಮಕವಾಗಿದ್ದಾರೆ.
ಗುರುವಾರ ಮಾಹಿತಿ ನೀಡಿದ ಐಸಿಸಿ, ಅಂಬಾಸಿಡರ್ ಗಳು ಸಾಮಾಜಿಕ ಕಾರ್ಯಗಳಲ್ಲಿ ಸಂಸ್ಥೆಯ ಜತೆಯಾಗಲಿದ್ದಾರೆ ಮತ್ತು ವಿವಿಧ ಕಾರ್ಯಕ್ರಮಗಳ ಪ್ರಾಯೋಜನೆಯಲ್ಲಿ ತೊಡಗಲಿದ್ದಾರೆ ಎಂದು ತಿಳಿಸಿದೆ.[ಕೊಹ್ಲಿ ಬ್ಯಾಟಿಂದ ಹಾರಿದ 'ಮುತ್ತು' ಎಲ್ಲಿ ಹೋಯಿತು?]

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ನವ ನಾಯಕ ಕೊಹ್ಲಿ, ಇದು ದೇಶಕ್ಕೆ ಮತ್ತು ನನಗೆ ಹೆಮ್ಮೆ ತರುವ ಸಂಗತಿಯಾಗಿದೆ. ಕ್ರಿಕೆಟ್ ನ ಅಂತಸತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಇಂಥ ಪದವಿಗಳು ಆಧಾರವಾಗುತ್ತವೆ. ವಿಶ್ವ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಮತ್ತೊಂದು ಅವಕಾಶ ದೊರೆತಿದೆ ಎಂದು ಹೇಳಿದ್ದಾರೆ.
ನಮ್ಮ ರಾಷ್ಟ್ರದಲ್ಲಿ ನಡೆಯಲಿರುವ ವಿಶ್ವಕಪ್ ಅಂಬಾಸಿಡರ್ ಆಗಿ ನೇಮಕವಾಗಿರುವುದು ಸಂತಸ ತಂದಿದೆ. ಈ ಬಾರಿಯ ವಿಶ್ವಕಪ್ ಪಂದ್ಯಾವಳಿ ನೆನಪಿನಲ್ಲಿ ಉಳಿಯುವಂಥದ್ದಾಗಲಿದ್ದು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ಆಸ್ಟ್ರೇಲಿಯಾ ವೇಗಿ ಮಿಚೆಲ್ ಜಾನ್ಸನ್ ತಿಳಿಸಿದ್ದಾರೆ.
ಇದು ನನಗೆ ಸಿಕ್ಕ ಬಹುದೊಡ್ಡ ಗೌರವ. ವಿಶ್ವಕಪ್ ಯಾವಾಗ ಆರಂಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಇಡೀ ಪ್ರಪಂಚವೇ ಇದೆ ಅದರಲ್ಲಿ ನಾನು ಒಬ್ಬ ಎಂದು ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications