Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ವಿರಾಟ್‌ ಕೊಹ್ಲಿ 36 ರನ್‌ ಬಾರಿಸುತ್ತಿದ್ದಂತೆ ಹೊಸ ದಾಖಲೆ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯಕ್ಕಾಗಿ ಉಭಯ ತಂಡಗಳು ಭರದ ಸಿದ್ಧತೆಯನ್ನು ನಡೆಸಿದೆ. ಭಾರತ ತಂಡ ಈ ಟೆಸ್ಟ್‌ ಪಂದ್ಯಕ್ಕಾಗಿ ತಂಡದಲ್ಲಿ ಬದಲಾವಣೆ ಮಾಡಬಹುದು. ಆದರೆ ಈ ವೇಳೆ ಅಭಿಮಾನಿಗಳ ಎಲ್ಲರ ಚಿತ್ತ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿದೆ. ಇವರು ಅಂಗಳಕ್ಕೆ ಇಳಿದಾಗಲೆಲ್ಲಾ ದಾಖಲೆಗಳು ನಿರ್ಮಾಣವಾಗುತ್ತವೆ. ನಾಲ್ಕನೇ ಟೆಸ್ಟ್‌ನಲ್ಲೂ ವಿರಾಟ್ ಕೊಹ್ಲಿ ರೆಕಾರ್ಡ್ ಮೇಲೆ ಕಣ್ಣು ನೆಟ್ಟಿದ್ದಾರೆ.

ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ, ಭಾರತದ ಪರ ಅದೆಷ್ಟೋ ಸ್ಮರಣೀಯ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಇವರು ನೆಲಕಚ್ಚಿ ನಿಂತರೆ ಎದುರಾಳಿಗಳಿಗೆ ನಡುಕ. ಇವರು ದೇಶವೇ ಇರಲಿ ವಿದೇಶವೇ ಇರಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಒಮ್ಮೆ ಇವರು ಫಾರ್ಮ್‌ಗೆ ಮರಳಿದರೆ ಇವರನ್ನು ತಡೆಯುವುದು ತುಂಬನೇ ಕಷ್ಟ. ಇವರು ಸದ್ಯ ಭಾರತ ತಂಡದ ಭಾಗವಾಗಿದ್ದು, ಎಲ್ಲರ ಕಣ್ಣು ಈ ಪ್ಲೇಯರ್ ಮೇಲೆ ನೆಟ್ಟಿದೆ.

Virat Kohli Nears Milestone Poised to Overtake Brian Lara in Test Cricket

ಪರ್ತ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿ ಫಾರ್ಮ್‌ಗೆ ಮರಳಿದ್ದರು. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಆಡಿಲೇಡ್‌ ಹಾಗೂ ಬ್ರಿಸ್ಬೇನ್‌ನಲ್ಲಿ ಇವರು ವಿಶೇಷ ಸಾಧನೆ ಏನು ಮಾಡಲಿಲ್ಲ. ಇವರ ಮೇಲೆ ನಾಲ್ಕನೇ ಟೆಸ್ಟ್‌ನಲ್ಲಿ ಅಪಾರ ನಿರೀಕ್ಷೆಗಳು ಇವೆ. ಇವರು ದೊಡ್ಡ ಇನಿಂಗ್ಸ್‌ ಕಟ್ಟುತ್ತಾರೆ ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ಲಾರಾ ದಾಖಲೆಯ ಮೇಲೆ ಕಣ್ಣು

ವಿರಾಟ್‌ ಕೊಹ್ಲಿ ಮೆಲ್ಬೋರ್ನ್‌ನಲ್ಲಿ ಮತ್ತೊಂದು ದಾಖಲೆಯನ್ನು ಬರೆಯಬಹುದು. ಈ ವೇಳೆ ವಿರಾಟ್‌ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ದಿಗ್ಗಜ ಆಟಗಾರನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ವಿರಾಟ್‌ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 7500 ರನ್‌ ಬಾರಿಸಿದ್ದಾರೆ. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಇವರು 36 ರನ್‌ ಸಿಡಿಸಿದ್ದೇ ಆದಲ್ಲಿ, ವಿರಾಟ್ ಕೊಹ್ಲಿ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಅಳಿಸಿ ಹಾಕಬಹುದು.

Virat Kohli Nears Milestone Poised to Overtake Brian Lara in Test Cricket

ಬ್ರಿಯಾನ್ ಲಾರಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 7535 ರನ್‌ ಸಿಡಿಸಿದ್ದಾರೆ. ವಿರಾಟ್‌ ಕೊಹ್ಲಿ ಮೆಲ್ಬೋರ್ನ್‌ ಟೆಸ್ಟ್‌ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 36 ರನ್‌ ಬಾರಿಸಿದರೆ, ದೊಡ್ಡ ಸಾಧನೆ ಮಾಡಿದಂತೆ ಆಗುತ್ತದೆ. ವಿರಾಟ್‌ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಹೆಚ್ಚು ರನ್ ಗಳಿಸಿದ ವಿಷಯದಲ್ಲಿ ಐದನೇ ಸ್ಥಾನವನ್ನು ತಲುಪುವ ಸಾಧ್ಯತೆ ಇದೆ.

ರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ9 ಸಾವಿರಕ್ಕೂ ಹೆಚ್ಚು ಸಿಡಿಸಿದ ಆಟಗಾರ. ವಿರಾಟ್ 121 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 9166 ರನ್ ಗಳಿಸಿದ್ದು, ಇದರಲ್ಲಿ 30 ಶತಕಗಳು ಮತ್ತು 31 ಅರ್ಧ ಶತಕ ಸೇರಿವೆ.

4 ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಹೆಚ್ಚು ರನ್‌ ಸಿಡಿಸಿದ ಆಟಗಾರರು.

ಸಚಿನ್ ತೆಂಡೂಲ್ಕರ್- 13492 ರನ್
ಮಹೇಲಾ ಜಯವರ್ಧನೆ- 9509 ರನ್
ಜಾಕ್ವೆಸ್ ಕಾಲಿಸ್- 9033 ರನ್
ಜೋ ರೂಟ್-7745 ರನ್
ಬ್ರಿಯಾನ್ ಲಾರಾ- 7535 ರನ್

Story first published: Monday, December 23, 2024, 15:33 [IST]
Other articles published on Dec 23, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+