Virat Kohli: 51 ರನ್‌ಗೆ ಒಂದು, 141 ರನ್ ಚಚ್ಚಿದರೆ ಇನ್ನೊಂದು ದಾಖಲೆ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಪಾಕಿಸ್ತಾನದ ವಿರುದ್ಧ ಅಮೋಘ ಲಯವನ್ನು ಕಂಡುಕೊಂಡಿದ್ದಾರೆ. ಕಳೆದ 466 ದಿನಗಳಿಂದ ಏಕದಿನ ಫಾರ್ಮೆಟ್‌ನಲ್ಲಿ ಮಾಡದ ದಾಖಲೆಯನ್ನು ವಿರಾಟ್, ತಮ್ಮ ನೆಚ್ಚಿನ ಎದುರಾಳಿ ಪಾಕ್ ವಿರುದ್ಧ ಮಾಡಿದ್ದಾರೆ. ಈ ಮೂಲಕ ಕಳೆದುಕೊಂಡಿದ್ದ ಲಯವನ್ನು ಮತ್ತೆ ಪಡೆದಂತೆ ಆಗಿದೆ. ವಿರಾಟ್ ಕೊಹ್ಲಿ ಅವರ ಈ ಆಟವನ್ನು ಕಂಡು ಅಭಿಮಾನಿಗಳು ಒಂದು ಲೆಕ್ಕಚಾರವನ್ನು ಆರಂಭಿಸಿದ್ದರೆ ಹಾಗಿದ್ದರೆ ಏನದು ಇಲ್ಲಿದೆ ಮಾಹಿತಿ.
ವಿರಾಟ್ ಕೊಹ್ಲಿ ನವೆಂಬರ್ 15, 2023ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಕೊನೆಯದಾಗಿ ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿದ್ದರು. ಆ ಬಳಿಕ ಆಡಿದ ಏಳು ಪಂದ್ಯಗಳಲ್ಲಿ, ಮೂರಂಕಿ ಮುಟ್ಟಿರಲಿಲ್ಲ. ಈಗ ವಿರಾಟ್ ಕೊಹ್ಲಿ ಅಮೋಘ ಫಾರ್ಮ್‌ಗೆ ಕಂಡುಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ "ಎ" ಗುಂಪಿನ ಪಂದ್ಯದಲ್ಲಿ ಪಾಕ್ ವಿರುದ್ಧ ಶತಕ ಬಾರಿಸಿ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸಿದ್ದಾರೆ. ಈ ಮೂಲಕ ಅವರ ಹಲವು ದಾಖಲೆಗಳನ್ನು ನಿರ್ಮಿಸಿದರು. ಆದರೆ ಮುಂದಿನ ಪಂದ್ಯಗಳಲ್ಲಿ ನಿರ್ಮಿಸಲಿರುವ ದಾಖಲೆಗಳ ಪಟ್ಟಿ ಇಲ್ಲಿದೆ.

ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್. ಇವರು ಫಾರ್ಮ್‌ಗೆ ಮರಳಲು ಬಿಗ್ ಮ್ಯಾಚ್‌ನ್ನೇ ವೇದಿಕೆಯನ್ನಾಗಿ ಮಾಡಿಕೊಂಡರು. ಇದೇ ವೇಳೆ ಅಮೋಘ ಶತಕ ಬಾರಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 651 ರನ್ ಸಿಡಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಈ ಮೆಗಾ ಟೂರ್ನಿಯಲ್ಲಿ ಭಾರತದ ಪರ ಗರಿಷ್ಠ ರನ್ ಸಾಧಿಸಿದ ಮೂರನೇ ಪ್ಲೇಯರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಈಗ ಇದೇ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರುವತ್ತ ಚಿತ್ತ ನೆಟ್ಟಿದ್ದಾರೆ. ಈ ಸ್ಥಾನವನ್ನು ಅಲಂಕರಿಸಲು ಇನ್ನು 51 ರನ್ ಅವಶ್ಯಕತೆ ಇದೆ.
ಭಾರತದ ಪರ ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ರನ್
ಶಿಖರ್ ಧವನ್, 10 ಪಂದ್ಯ, 701 ರನ್
ಸೌರವ್ ಗಂಗೂಲಿ, 13 ಪಂದ್ಯ, 665 ರನ್
ವಿರಾಟ್ ಕೊಹ್ಲಿ, 15 ಪಂದ್ಯ, 651 ರನ್
ರಾಹುಲ್ ದ್ರಾವಿಡ್, 19 ಪಂದ್ಯ, 627 ರನ್
ರೋಹಿತ್ ಶರ್ಮಾ, 12 ಪಂದ್ಯ, 542 ರನ್

ಇನ್ನು ಇದೇ ಟೂರ್ನಿಯಲ್ಲಿ ವಿರಾಟ್‌ಗೆ ಕನಿಷ್ಠ ಇನ್ನು ಎರಡು ಪಂದ್ಯಗಳನ್ನು ಆಡುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಈ ವೇಳೆ ವಿರಾಟ್ 141 ರನ್‌ಗಳನ್ನು ಗಳಿಸುವಲ್ಲಿ ಸಫಲರಾದರೆ, ವಿಶ್ವ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಲಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ರನ್ ಸಾಧನೆ ಮಾಡಿದ ಬ್ಯಾಟರ್ಸ್
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್), 17 ಪಂದ್ಯ, 791 ರನ್
ಮಹೇಲ್ ಜಯವರ್ಧನೆ (ಶ್ರೀಲಂಕಾ), 22 ಪಂದ್ಯ, 742 ರನ್
ಶಿಖರ್ ಧವನ್ (ಭಾರತ), 10 ಪಂದ್ಯ, 701 ರನ್
ಕುಮಾರ್ ಸಂಗಾಕ್ಕಾರ (ಶ್ರೀಲಂಕಾ), 22 ಪಂದ್ಯ, 683 ರನ್
ಸೌರವ್ ಗಂಗೂಲಿ (ಭಾರತ), 13 ಪಂದ್ಯ, 665 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications