Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಸ್‌ ಗೇಲ್‌, ರೋಹಿತ್ ಶರ್ಮಾ ವಿಶೇಷ ಕ್ಲಬ್‌ಗೆ ವಿರಾಟ್‌ ಸೇರಲು ಬೇಕು 9 ಸಿಕ್ಸರ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಆವೃತ್ತಿಯ ಮೊದಲ ಪಂದ್ಯ ಮಾರ್ಚ್‌ 28 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ. ಆರ್‌ಸಿಬಿ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಗೆಲುವಿನ ಆರಂಭವನ್ನು ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.

ಆರ್‌ಸಿಬಿ ಕಣಕ್ಕೆ ಇಳಿದಾಗಲೆಲ್ಲಾ ಎಲ್ಲರ ಕಣ್ಣುಗಳು ಆರ್‌ಸಿಬಿ ತಂಡದ ಅನುಭವಿ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ. ಇವರು ಆರ್‌ಸಿಬಿ ತಂಡದ ಪರ 19ನೇ ಆವೃತ್ತಿಯಲ್ಲಿ ಆಡಲು ಸಜ್ಜಾಗುತ್ತಿದ್ದಾರೆ. ಶ್ರೀಮಂತ ಲೀಗ್‌ನಲ್ಲಿ ಹಲವು ದೊಡ್ಡ ದಾಖಲೆಗಳಿಗೆ ತಮ್ಮ ಹೆಸರನ್ನು ನಮೂಸಿದಿರುವ ವಿರಾಟ್‌, ಈ ಬಾರಿಯ ಲೀಗ್‌ನಲ್ಲಿ ಮತ್ತೊಮ್ಮೆ ತಮ್ಮ ದೊಡ್ಡ ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ.

Virat Kohli

ವಿರಾಟ್‌ ಕೊಹ್ಲಿ, ರೆಡ್‌ ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಇಳಿದಾಗಲೆಲ್ಲಾ ಅಭಿಮಾನಿಗಳಲ್ಲಿ ನವ ಉತ್ಸಾಹ ಇರುತ್ತದೆ. ಈ ಪ್ಲೇಯರ್ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿರುವ ಆಟಗಾರ. ಅಲ್ಲದೆ ಅತಿ ಹೆಚ್ಚು ಶತಕ ಬಾರಿಸಿದ ಪ್ಲೇಯರ್‌ಗಳ ಪಟ್ಟಿಯಲ್ಲೂ ಇವರಿಗೆ ಅಗ್ರಸ್ಥಾನ. ಈಗ ವಿರಾಟ್‌ ಮತ್ತೊಂದು ದಾಖಲೆಯನ್ನು ಈ ಆವೃತ್ತಿಯಲ್ಲಿ ಬರೆಯಬಹುದಾಗಿದೆ.

ಐಪಿಎಲ್‌ನಲ್ಲಿ ಈ ವರೆಗೆ ವಿರಾಟ್ ಕೊಹ್ಲಿ ಒಟ್ಟು 291 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಇನ್ನು 9 ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದಲ್ಲಿ, ಲೀಗ್‌ನಲ್ಲಿ 300ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ. ಈ ವರೆಗೆ ಈ ಸಾಧನೆಯನ್ನು ಕೇವಲ ಇಬ್ಬರು ಬ್ಯಾಟರ್‌ಗಳು ಮಾಡಿದ್ದಾರೆ. ವೆಸ್ಟ್‌ ಇಂಡೀಸ್ ತಂಡದ ಕ್ರಿಸ್‌ ಗೇಲ್ ಹಾಗೂ ರೋಹಿತ್ ಶರ್ಮಾ ಮಾತ್ರ 300ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ಹಿರಿಮೆ ಹೊಂದಿದ್ದಾರೆ. ಐಪಿಎಲ್‌ನಲ್ಲಿ 250ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಐದು ಆಟಗಾರರು ಇದ್ದಾರೆ.

Virat Kohli

ಐಪಿಎಲ್‌ ಇತಿಹಾಸದಲ್ಲಿ ಹೆಚ್ಚು ಸಿಕ್ಸರ್ಸ್ ಬಾರಿಸಿದ ಬ್ಯಾಟರ್ಸ್‌

ಕ್ರಿಸ್ ಗೇಲ್ - 357
ರೋಹಿತ್ ಶರ್ಮಾ - 302
ವಿರಾಟ್ ಕೋಹ್ಲಿ- 291
ಮಹೇಂದ್ರ ಸಿಂಗ್ ಧೋನಿ - 264
ಎಬಿ ಡಿವಿಲಿಯರ್ಸ್ - 251

ವಿರಾಟ್ ಕೊಹ್ಲಿ ಸಾಧನೆ

37 ವರ್ಷದ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಒಂದೇ ಫ್ರಾಂಚೈಸಿ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ. ಇವರು ಈ ಲೀಗ್‌ನಲ್ಲಿ ಒಟ್ಟಾರೆ 267 ಪಂದ್ಯಗಳನ್ನು ಆಡಿದ್ದು, 39ರ ಸರಾಸರಿಯಲ್ಲಿ 8661 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 8 ಶತಕ ಹಾಗೂ 63 ಅರ್ಧಶತಕಗಳು ಸೇರಿವೆ. ವಿರಾಟ್ ಬ್ಯಾಟ್‌ನಿಂದ ಒಟ್ಟು 771 ಬೌಂಡರಿ ದಾಖಲಾಗಿದ್ದು, 291 ಸಿಕ್ಸರ್ ಸಿಡಿಸಿದ್ದಾರೆ. ಈ ವರೆಗೆ ಅವರು ಒಟ್ಟು 117 ಕ್ಯಾಚ್‌ಗಳನ್ನು ಸಹ ಪಡೆದಿದ್ದಾರೆ.

Story first published: Wednesday, March 18, 2026, 8:26 [IST]
Other articles published on Mar 18, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+