ಪೋರ್ಟ್ ಆಫ್ ಸ್ಪೇನ್, ಜೂನ್ 22: ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ಕೆಳಗಿಳಿದ ಅನಿಲ್ ಕುಂಬ್ಳೆಯವರ ಬಗ್ಗೆ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಯಿ ಬಿಟ್ಟಿದ್ದಾರೆ.
ಪೋರ್ಟ್ ಆಫ್ ಸ್ಪೇನ್ ನಲ್ಲಿ ಶುಕ್ರವಾರ ವೆಸ್ಟ್ ಇಂಡೀಸ್ ಹಾಗೂ ಭಾರತದ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಈ ಪಂದ್ಯದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಉಭಯ ತಂಡಗಳ ನಾಯಕರ ಪತ್ರಿಕಾಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಅವರು ಕುಂಬ್ಳೆ ಬಗ್ಗೆ ಮಾತನಾಡಿದ್ದಾರೆ.

ನನಗೆ ಅನಿಲ್ ಕುಂಬ್ಳೆಯವರ ಬಗ್ಗೆ ಅಪಾರ ಗೌರವವಿದೆ. ಕೋಚ್ ಆಗಿ ಅವರ ಸಲಹೆಗಳನ್ನು ನಾನು ಗೌರವಿಸುತ್ತೇನೆ. ತಮ್ಮ ಜವಾಬ್ದಾರಿಯಿಂದ ಅವರು ಹಿಂದೆ ಸರಿಯುವ ನಿರ್ಧಾರ ಕೈಗೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಇದಲ್ಲದೆ, ಕ್ರೀಡೆಯಲ್ಲಿ ಇದೆಲ್ಲಾ ಮಾಮೂಲು ಎಂದು ಹೇಳಿದ್ದಾರೆ.