ಕೊಹ್ಲಿಗೆ ರಾಮ್ ರಹೀಮ್ 'ಟಿಪ್ಸ್' ಏನಿದರ ಗುಟ್ಟು?
ಮುಂಬೈ, ಅಕ್ಟೋಬರ್ 04: ಆಸ್ಟ್ರೇಲಿಯಾ ವಿರುದ್ಧದದ ಸರಣಿಯಲ್ಲಿ ಭರ್ಜರಿ ಜಯ ದಾಖಲಿಸಿದ ಬಳಿಕ ಕೆಲ ದಿನಗಳ ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಅವರಿಗೆ ಅತ್ಯಾಚಾರಿ ಎನಿಸಿಕೊಂಡಿರುವ ರಾಮ್ ರಹೀಮ್ ಸಿಂಗ್ ಅವರ ಬಗ್ಗೆ ಪ್ರಶ್ನೆಗೆ ಎಸೆಯಲಾಯಿತು. ನಗುನಗುತ್ತಲೇ ಕೊಹ್ಲಿ ಅವರು ಗೂಗ್ಲಿಯಂಥ ಪ್ರಶ್ನೆಯನ್ನು ಎದುರಿಸಿದರು.
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಅವರು 'ಚಾಟ್ ಶೋ' ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಟ ಅಮೀರ್ ಖಾನ್ ಜತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ತೂರಿ ಬಂದ ಈ ಪ್ರಶ್ನೆಗೆ ಕೊಹ್ಲಿ ತಕ್ಕ ಉತ್ತರ ನೀಡಿದ್ದಾರೆ.

ರಾಮ್ ರಹೀಮ್ ಸಿಂಗ್ ಆಶ್ರಮಕ್ಕೆ ನಾನು, ನೆಹ್ರಾ ಭೇಟಿ ಕೊಟ್ಟಿದ್ದು ನಿಜ. ಇನ್ನೂ ಕೆಲವರು ಜತೆಗಿದ್ದರು. ಅವರಿಗೆ ನಮ್ಮ ಹೆಸರುಗಳೇ ಗೊತ್ತಿರಲಿಲ್ಲ. ನೆಹ್ರಾ ಅವರನ್ನು ಜಗದೀಶ್ ನೆಹ್ರಾ ಎಂದು ಕರೆದರು. ಯೂಸುಫ್ ಪಠಾಣ್ ರನ್ನು ಜೊಸುಫ್ ಪಠಾಣ್ ಎಂದರು. ಅವರಿಂದ ಕ್ರಿಕೆಟ್ ಬಗ್ಗೆ ಟಿಪ್ಸ್ ಸಿಗಲೇ ಇಲ್ಲ ಎಂದು ಕೊಹ್ಲಿ ನಸು ನಕ್ಕರು.
ಕಳೆದ ವರ್ಷ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಅವರ ಆಶ್ರಮಕ್ಕೆ ಕ್ರಿಕೆಟರ್ ಕೊಹ್ಲಿ, ನೆಹ್ರಾ, ಪಠಾಣ್ ಅವರು ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಕೋಪ ನಿಯಂತ್ರಣ, ಧ್ಯಾನದ ಬಗ್ಗೆ ರಾಮ್ ರಹೀಮ್ ಬೋಧನೆ ಮಾಡಿದ್ದರಂತೆ. ಆದರೆ, ನಂತರ ನಾನು ಕ್ರಿಕೆಟರ್ ಕೊಹ್ಲಿಗೆ ಕ್ರಿಕೆಟ್ ಟಿಪ್ಸ್ ನೀಡುತ್ತಿದ್ದೆ ಎಂದು ರಾಮ್ ರಹೀಮ್ ಹೇಳಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ಸದ್ಯ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎನಿಸಿ ರಾಮ್ ರಹೀಮ್ ಅವರು ಜೈಲು ಪಾಲಾಗಿದ್ದಾರೆ. ನೆಹ್ರಾ ಹಾಗೂ ಕೊಹ್ಲಿ ಮುಂದಿನ ಟಿ20 ಪಂದ್ಯಕ್ಕೆ ಸಿದ್ಧರಾಗುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications