
ಟೀಮ್ ಇಂಡಿಯಾ ಅನುಭವಿ ಆಟಗಾರ ಆರ್ ಅಶ್ವಿನ್ ಟೆಸ್ಟ್‌ನಲ್ಲಿ ಖಾಯಂ ಸದಸ್ಯರಾದರೂ ಸೀಮಿತ ಓವರ್‌ಗಳಲ್ಲಿ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲ ಮಾಜಿ ಕ್ರಿಕೆಟಿಗರು ಆರ್ ಅಶ್ವಿನ್ ಸೀಮಿತ ಓವರ್‌ಗಳಲ್ಲಿ ಅವಕಾಶ ಪಡೆಯುವ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಈ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ವಾಶಿಂಗ್ಟನ್ ಸುಂದರ್ ತುಂಬಾ ಉತ್ತಮವಾಗಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಹಾಗಾಗಿ ಒಂದೇ ರೀತಿಯ ಇಬ್ಬರು ಆಟಗಾರರು ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆಗಳು ಕಡಿಮೆ ಎಂದು ಹೇಳಿದ್ದಾರೆ.
"ನಮ್ಮ ತಂಡದ ಪರವಾಘಿ ವಾಶಿಂಗ್ಟನ್ ಸುಂದರ್ ನಿಜಕ್ಕೂ ಉತ್ತಮವಾಗಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಹೀಗಾಗಿ ಇಬ್ಬರು ಒಂದೇ ರೀತಿಯ ಆಟಗಾರರನ್ನು ಹೊಂದುವುದು ಕಷ್ಟ. ವಾಶಿ ತುಂಬಾ ಭಯಾನಕ ಋತುವನ್ನು ಹೊಂದಿದ್ದರೆ(ಅದು ಸಾಧ್ಯವಿಲ್ಲ) ಆಗ ಈ ರೀತಿಯ ಪ್ರಶ್ನೆಗಳಿಗೆ ತರ್ಕವಿರುತ್ತದೆ" ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಟೀಮ್ ಇಂಡಿಯಾ ಪರವಾಗಿ ಆರ್ ಅಶ್ವಿನ್ ಸೀಮಿತ ಓವರ್‌ಗಳಲ್ಲಿ ಕೊನೆಯ ಬಾರಿಗೆ 2017ರ ಜುಲೈನಲ್ಲಿ ಕಣಕ್ಕಿಳಿದಿದ್ದರು. ಅದಾದ ಬಳಿಕ ಅಶ್ವಿನ್ ಹಾಗೂ ಜಡೇಜಾ ಸ್ಥಾನಕ್ಕೆ ರಿಸ್ಟ್ ಸ್ಪಿನ್ನರ್‌ಗಳಾದ ಯುಜುವೇಂದ್ರ ಚಾಹಲ್ ಹಾಗೂ ಕುಲ್‌ದೀಪ್ ಯಾದವ್ ಸ್ಥಾನವನ್ನು ಪಡೆಯಲು ಆರಂಭಿಸಿದರು. ಜಡೇಜಾ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು ಆದರೆ ಆರ್ ಅಶ್ವಿನ್‌ಗೆ ಮತ್ತೆ ತಂಡದಲ್ಲಿ ಸ್ಥಾನ ದೊರೆಯಲಿಲ್ಲ. ಆದರೆ ಆರ್ ಅಶ್ವಿನ್ ಐಪಿಎಲ್‌ನಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದು ಡೆಲ್ಲಿ ತಂಡದ ಪರವಾಗಿ ಗಮನಾರ್ಹ ಆಟ ಪ್ರದರ್ಶನವನ್ನು ನೀಡುತ್ತಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭುವನೇಶ್ವರ್ ಕುಮಾರ್ ತಂಡಕ್ಕೆ ಮರಳಿದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ಆತ ತಾಂಡಕ್ಕೆ ಮರಳಿರುವುದು ಸಂತಸ ತಂದಿದೆ. ಭಾರತ ತಂಡಕ್ಕೆ ಮತ್ತಷ್ಟು ಗೆಲುವುಗಳನ್ನು ತಂದುಕೊಡಲು ಆತ ಉತ್ಸುಕನಾಗಿದ್ದಾರೆ. ಇಲ್ಲಿಂದ ಅವರು ಬಲಿಷ್ಠವಾಗಿ ಮುನ್ನುಗ್ಗಲಿದ್ದಾರೆ ಎಂಬ ಭರವಸೆಯನ್ನು ಹೊಂದಿದ್ದೇನೆ" ಎಂದಿದ್ದಾರೆ ವಿರಾಟ್ ಕೊಹ್ಲಿ.