ಆಸ್ಟ್ರೇಲಿಯಾ ನೆಲದಲ್ಲಿ ಯಾರೂ ಮಾಡದ ವಿಶಿಷ್ಠ ದಾಖಲೆ ಬರೆದ ಕೊಹ್ಲಿ!

ಸಿಡ್ನಿ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿಸಿ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಪ್ರವಾಸ ಬಂದಿತ್ತು. ಐಪಿಎಲ್ ಫೈನಲ್ ಮತ್ತು ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದ ಮಧ್ಯೆ ಇದ್ದಿದ್ದು ಕೇವಲ 16 ದಿನಗಳ ಅಂತರ. ವಿರಾಟ್ ಕೊಹ್ಲಿ ಪಡೆ ಆಸ್ಟ್ರೇಲಿಯಾಕ್ಕೆ ಬಂದು 10 ದಿನಗಳಾಗಿವೆ. ಇತ್ತಂಡಗಳ ನಿಯಮಿತ ಓವರ್‌ಗಳ ಕ್ರಿಕೆಟ್ ಸರಣಿಯಗಳ ವಿಜೇತರನ್ನು ನಿರ್ಧರಿಸಿ ಆಗಿದೆ. ಏಕದಿನ ಸರಣಿ ಆತಿಥೇಯ ಆಸ್ಟ್ರೇಲಿಯಾ ವಶವಾಗಿದ್ದರೆ, ಟಿ20ಐ ಸರಣಿ ಭಾರತದ ಪಾಲಾಗಿದೆ.
ಮೂರು ಪಂದ್ಯಗಳ ಏಕದಿನ ಸರಣಿ 2-1ರಿಂದ ಆಸ್ಟ್ರೇಲಿಯಾ ವಶವಾಗಿತ್ತು, ಏಕದಿನ ಸರಣಿ ಕಳಕೊಂಡ ಟೀಮ್ ಇಂಡಿಯಾ ಟಿ20ಐ ಸರಣಿಯಲ್ಲಿ ಆತಿಥೇಯರಿಗೆ ತಕ್ಕ ತಿರುಗೇಟು ನೀಡಿತ್ತು. ಮೂರು ಪಂದ್ಯಗಳ ಟಿ20ಐ ಸರಣಿಯೀಗ 2-0ರಿಂದ ಭಾರತದ ವಶವಾಗಿದೆ.
ಮೂರನೇ ಮತ್ತು ಕೊನೇಯ ಏಕದಿನ ಪಂದ್ಯ ಡಿಸೆಂಬರ್ 8ರ ಮಂಗಳವಾರ ನಡೆಯಲಿದೆ. ಈ ಪಂದ್ಯದಲ್ಲೂ ಭಾರತ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಟೀಕೆಗೆ ಗುರಿಯಾಗಿದ್ದ ಕೊಹ್ಲಿ
ಭಾರತ vs ಆಸ್ಟ್ರೇಲಿಯಾ ಸರಣಿಯ ಆರಂಭ ಭಾರತದ ನಾಯಕ ವಿರಾಟ್ ಕೊಹ್ಲಿಗೆ ಬಹುಶಃ ಖುಷಿ ನೀಡಿರಲಿಕ್ಕಿಲ್ಲ. ಸರಣಿಯ ಮಧ್ಯೆ ಕೊಹ್ಲಿಗೆ ಮೊದಲ ಟೆಸ್ಟ್ ಪಂದ್ಯದ ಬಳಿಕ ಪಿತೃತ್ವ ರಜೆ ಮಂಜೂರಾಗಿದ್ದು ಹಾಗೂ ಏಕದಿನ ಸರಣಿಯ ಸೋಲು ಟೀಕೆಗೆ ಗುರಿಯಾಗಿತ್ತು. ನಿಯಮಿತ ಓವರ್‌ನಲ್ಲಿ ನಾಯಕತ್ವ ಬದಲಾಯಿಸಬೇಕು. ರೋಹಿತ್ ಶರ್ಮಾಗೆ ನಾಯಕತ್ವ ನೀಡಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.

ಕೊಹ್ಲಿ ಹೆಸರಿಗೆ ಅಪರೂಪದ ದಾಖಲೆ
ಆರಂಭದಲ್ಲಿ ಕೊಹ್ಲಿ ಟೀಕೆ ಎದುರಿಸಿದ್ದರಾದರೂ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದ ದಾಖಲೆಗೆ ಕೊಹ್ಲಿ ಕಾರಣರಾಗಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ, ಟಿ20ಐ ಮತ್ತು ಟೆಸ್ಟ್ ಕ್ರಿಕೆಟ್ ಈ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಸರಣಿ ಗೆದ್ದ ಭಾರತದ ಏಕಮಾತ್ರ ನಾಯಕನೆಂಬ ಹಿರಿಮೆಗೆ ಕೊಹ್ಲಿ ಕಾರಣರಾಗಿದ್ದಾರೆ. ಭಾನುವಾರ ಟಿ20ಐ ಸರಣಿ ಗೆಲ್ಲುತ್ತಲೇ ಈ ದಾಖಲೆ ನಿರ್ಮಾಣವಾಗಿದೆ.

ದಾಖಲೆ ಆಗಿದ್ದು ಹೇಗೆ?
ಕಳೆದ ವರ್ಷ ಅಂದರೆ 2018-2019ರಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ವಿರಾಟ್ ನಾಯಕತ್ವದ ಭಾರತ ತಂಡ, 3 ಪಂದ್ಯಗಳ ಟಿ20ಐ ಸರಣಿಯಲ್ಲಿ 1-1ರ ಸಮಬಲ, 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಗೆಲುವು, 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಜಯ ಗಳಿಸಿತ್ತು. ಅಂದು ಟಿ20 ಸರಣಿಯನ್ನು ಭಾರತ ಗೆದ್ದಿರಲಿಲ್ಲ. ಆದರೆ ಈಗ ಆಸ್ಟ್ರೇಲಿಯಾದಲ್ಲಿ ಟಿ20ಐ ಸರಣಿಯಲ್ಲೂ ಗೆದ್ದಿರುವುದರಿಂದ ಕೊಹ್ಲಿ ನಾಯಕತ್ವದಡಿಯಲ್ಲಿ ದಾಖಲೆ ಸೃಷ್ಠಿಯಾಗಿದೆ. ಟೀಮ್ ಇಂಡಿಯಾ ಪಾಲಿಗೂ ಇದು ಅಪರೂಪದ ಮೈಲಿಗಲ್ಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications