ಟೆಸ್ಟ್‌ನಲ್ಲಿ ಕೊಹ್ಲಿ ಅಥವಾ ರೂಟ್ ಯಾರು ಬೆಸ್ಟ್?; ಮಾಜಿ ಕ್ರಿಕೆಟಿಗರು ಹೇಳಿದ್ದೇನು?
ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಮತ್ತು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಕಾಲದ ಶ್ರೇಷ್ಠ ಬ್ಯಾಟರ್‌ಗಳು, ಇಬ್ಬರಿಗೂ ಪರಿಚಯದ ಅಗತ್ಯವಿಲ್ಲ.
ಜೋ ರೂಟ್ ಮತ್ತು ವಿರಾಟ್ ಕೊಹ್ಲಿ ತಮ್ಮ ತಂಡಗಳನ್ನು ಗೆಲುವಿ ಕಡೆಗೆ ಹಲವು ಬಾರಿ ಮುನ್ನಡೆಸಿದ್ದಾರೆ. ರೂಟ್ ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪ್ರತಿ ಪಂದ್ಯದಲ್ಲೂ ಅವರು ಶತಕಗಳನ್ನು ಗಳಿಸುವ ಮೂಲಕ ದಾಖಲೆಗಳನ್ನು ಮಾಡಿದ್ದಾರೆ. ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದಾರೆ.

ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅಥವಾ ಜೋ ರೂಟ್ ಇಬ್ಬರಲ್ಲಿ ಯಾರು ಬೆಸ್ಟ್ ಬ್ಯಾಟರ್ ಎಂಬ ಚರ್ಚೆಗಳು ಆರಂಭವಾಗಿವೆ. ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಮತ್ತು ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್‌ಕೀಪರ್- ಬ್ಯಾಟರ್ ಆಡಮ್ ಗಿಲ್‌ಕ್ರಿಸ್ಟ್ ನಡುವೆ ಚರ್ಚೆ ನಡೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಮೈಕೆಲ್ ವಾನ್ ಮತ್ತು ಆಡಮ್ ಗಿಲ್‌ಕ್ರಿಸ್ಟ್ ತಮ್ಮ ಬೆಸ್ಟ್ ಬ್ಯಾಟರ್ ಯಾರೆಂದು ತಿಳಿಸಿದ್ದಾರೆ. ಯಾವ ಕಾರಣದಿಂದ ಈ ಬ್ಯಾಟರ್ ಬೆಸ್ಟ್ ಎಂಬುದನ್ನು ಹೇಳಿದ್ದಾರೆ. ಮೈಕಲ್ ವಾನ್ ಅವರು ತಮ್ಮ ದೇಶವಾಸಿ ಜೋ ರೂಟ್ ಅವರನ್ನು ಅತ್ಯುತ್ತಮ ಟೆಸ್ಟ್ ಬ್ಯಾಟರ್ ಎಂದು ಆಯ್ಕೆ ಮಾಡಿದ್ದಾರೆ. ಇದೇ ವೇಳೆ ಆಡಮ್ ಗಿಲ್‌ಕ್ರಿಸ್ಟ್ ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ಬೆಸ್ಟ್ ಬ್ಯಾಟರ್ ಎಂದು ಕರೆದಿದ್ದಾರೆ.
ಆದರೆ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೊಹ್ಲಿ ಉತ್ತಮ ಬ್ಯಾಟರ್ ಎಂದು ಇಬ್ಬರೂ ಒಪ್ಪಿಕೊಂಡಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಅವರ ಇತ್ತೀಚಿನ ಫಾರ್ಮ್ ಅನ್ನು ಪರಿಗಣಿಸಿ ವಾನ್ ರೂಟ್ ಹೆಸರನ್ನು ತೆಗೆದುಕೊಂಡಿದ್ದಾರೆ. ಗಿಲ್‌ಕ್ರಿಸ್ಟ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಆಸ್ಟ್ರೇಲಿಯಾದಲ್ಲಿ ರೂಟ್ ಒಂದೇ ಒಂದು ಟೆಸ್ಟ್ ಶತಕವನ್ನು ಗಳಿಸಿಲ್ಲ ಎಂದು ತಿಳಿಸಿದ್ದಾರೆ.
ಕೊಹ್ಲಿ ಬೆಸ್ಟ್
ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್ ಅಂಕಿ-ಅಂಶಗಳು ಚೆನ್ನಾಗಿವೆ. ಅವರು ಇದುವರೆಗಿನ ಇಂಗ್ಲೆಂಡ್‌ನ ಅತ್ಯುತ್ತಮ ಆಟಗಾರ. ಪರ್ತ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಅತ್ಯುತ್ತಮ ಶತಕಗಳನ್ನು ಗಳಿಸಿದ್ದರು. ಅಂದಿನ ಪಂದ್ಯದಲ್ಲಿ ಅವರು ಬಹುಶಃ ವಿಭಿನ್ನವಾಗಿದ್ದ. ಹೀಗಾಗಿ ನಾನು ವಿರಾಟ್ ಅವರನ್ನು ಬೆಸ್ಟ್ ಬ್ಯಾಟರ್ ಎಂದು ಆಯ್ಕೆ ಮಾಡುತ್ತೇನೆ ಎಂದು 2018ರಲ್ಲಿ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 123 ರನ್ ಗಳಿಸಿದ ಕೊಹ್ಲಿಯ ಇನ್ನಿಂಗ್ಸ್ ಬಗ್ಗೆ ಗಿಲ್‌ಕ್ರಿಸ್ಟ್ ಮಾತನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications