For Quick Alerts
ALLOW NOTIFICATIONS  
For Daily Alerts
 

RCB vs GT Dream XI: ಡ್ರಿಮ್‌ ಇಲೆವೆನ್‌ನಲ್ಲಿ ಈ ಆಟಗಾರರು ಇದ್ರೆ ಬೆಸ್ಟ್‌: ನಾಯಕ ಯಾರು?

ಬುಧವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಆವೃತ್ತಿಯ ಮೊದಲ ಬಾರಿಗೆ ಬೆಂಗಳೂರು ತಂಡ ತವರಿನಲ್ಲಿ ಅಂಗಳ ಪ್ರವೇಶಿಸಲಿದೆ. ಆರ್‌ಸಿಬಿ ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಡ್ರಿಮ್‌ ಇಲೆವೆನ್ ತಂಡ ಹೇಗಿರಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಆರ್‌ಸಿಬಿ ಈ ಬಾರಿ ಭರ್ಜರಿ ಫಾರ್ಮ್‌ನಲ್ಲಿದೆ. 17 ವರ್ಷಗಳ ಬಳಿಕ ಚೆನ್ನೈನಲ್ಲಿ ಗೆಲುವು ದಾಖಲಿಸಿರುವ ಆರ್‌ಸಿಬಿ ಇತಿಹಾಸ ನಿರ್ಮಿಸಿದೆ. ಈಗ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಹೀಗಾಗಿ ಕುತೂಹಲ ಮನೆ ಮಾಡಿದೆ. ಡ್ರಿಮ್‌ ಇಲೆವೆನ್ ತಂಡದಲ್ಲಿ ಯಾರೆಲ್ಲಾ ಆಟಗಾರರು ಇದ್ದರೆ ಬೆಸ್ಟ್‌ ಎಂಬ ಬಗ್ಗೆ ವರದಿ ಇಲ್ಲಿದೆ.

Virat Kohli or Sai Sudarshan Best Dream XI Picks for RCB vs GT IPL Clash

ಇಬ್ಬರು ವಿಕೆಟ್‌ ಕೀಪರ್‌

ಉಭಯ ತಂಡಗಳಲ್ಲೂ ಸ್ಟಾರ್ ವಿಕೆಟ್‌ ಕೀಪರ್ ಕಂ ಬ್ಯಾಟರ್‌ಗಳು ಇದ್ದಾರೆ. ಇವರಿಬ್ಬರನ್ನು ತಂಡದಲ್ಲಿ ಸೇರಿಸಿಕೊಂಡರೆ ಬೆಸ್ಟ್‌. ಅಲ್ಲದೆ ಇವರಿಬ್ಬರಲ್ಲಿ ಒಬ್ಬರಿಗೆ ಉಪನಾಯಕನ ಪಟ್ಟ ಕಟ್ಟಬಹುದು. ಈ ಇಬ್ಬರೂ ಆಟಗಾರರು ಪ್ರಸಕ್ತ ವರ್ಷದ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಇಬ್ಬರೂ ತಮಗೆ ತಂಡ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನೀಭಾಯಿಸುವ ಆಟಗಾರರು. ಈಗಾಗಲೇ ಈ ಇಬ್ಬರೂ ಆಟಗಾರರು ಈ ಐಪಿಎಲ್‌ನಲ್ಲಿ ತಲಾ ಒಂದು ಅರ್ಧಶತಕ ಬಾರಿಸಿದ್ದಾರೆ.

ಬ್ಯಾಟರ್‌ಗಳು ಯಾರು ಯಾರು?

ಉಭಯ ತಂಡಗಳಲ್ಲೂ ಸ್ಟಾರ್ ಬ್ಯಾಟರ್‌ಗಳು ಇದ್ದಾರೆ. ವಿರಾಟ್ ಕೊಹ್ಲಿ, ರಜತ್‌ ಪಟಿದಾರ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್‌, ಶುಭಮನ್‌ ಗಿಲ್‌ ಈ ಬ್ಯಾಟರ್‌ಗಳು ಈಗಾಗಲೇ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಹೀಗಾಗಿ ಈ ಐದು ಬ್ಯಾಟರ್‌ಗಳಲ್ಲಿ ನಾಲ್ವರು ಇದ್ದರೆ ಉತ್ತಮ.

Virat Kohli or Sai Sudarshan Best Dream XI Picks for RCB vs GT IPL Clash

ಆಲ್‌ರೌಂಡರ್ಸ್‌

ಆರ್‌ಸಿಬಿ ತಂಡದ ಸ್ಟಾರ್ ಆಲ್‌ರೌಂಡರ್‌ಗಳಾದ ಕೃನಾಲ್‌ ಪಾಂಡ್ಯ ಹಾಗೂ ಲಿಯಾಮ್‌ ಲಿವಿಂಗ್‌ ಸ್ಟೋನ್‌ 18ನೇ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದರಿಂದ ಈ ಇಬ್ಬರೂ ಆಟಗಾರರನ್ನು ಹಾಕಿಕೊಂಡರೆ ಒಳ್ಳೆಯದು.

ಬೌಲರ್ಸ್‌

ಉಭಯ ತಂಡದಲ್ಲೂ ದಿಗ್ಗಜ ಬೌಲರ್‌ಗಳು ಇದ್ದಾರೆ. ಆದರೆ ಬೆಂಗಳೂರಿನ ವಾತವರಣಕ್ಕೆ ಸೂಟ್‌ ಆಗುವ ಕೆಲವೇ ಕೆಲವು ಬೌಲರ್‌ಗಳ ಎರಡೂ ತಂಡದಲ್ಲಿ ಇದ್ದಾರೆ. ಮೊಹಮ್ಮದ್ ಸಿರಾಜ್‌ ಈ ಅಂಗಳದಲ್ಲಿ ಹೆಚ್ಚಿನ ಪಂದ್ಯವನ್ನು ಆಡಿದ್ದರಿಂದ ಇವರನ್ನು ಹಾಕಿಕೊಳ್ಳುವುದು ಉತ್ತಮ ಆಯ್ಕೆ. ಇನ್ನು ಜಿಟಿ ಪರ ರಶೀದ್ ಖಾನ್‌ ಅವರು ಇದ್ದರೆ ಬೆಸ್ಟ್. ಇದೇ ಅಂಗಳದಲ್ಲಿ ಆಡಿ ಬೆಳದ ಅನುಭವ ಹೊಂದಿರುವ ಪ್ರಸಿದ್ಧ ಕೃಷ್ಣ ಸಹ ಈ ಮೈದಾನದ ಬಗ್ಗೆ ಅರಿವಿದ್ದು, ಇವರೂ ಸಹ ನಿಮ್ಮ ತಂಡದಲ್ಲಿದ್ದರೆ ಒಳ್ಳೆಯದು.

ಆರ್‌ಸಿಬಿ ತಂಡದ ವೇಗದ ಬೌಲರ್‌ಗಳಾದ ಜೋಶ್‌ ಹ್ಯಾಜಲ್‌ವುಡ್ ಹಾಗೂ ಭುವನೇಶ್ವರ್‌ ಕುಮಾರ್‌ ಹೊಸ ಚೆಂಡಿನೊಂದಿಗೆ ಕಾಟ ನೀಡಬಲ್ಲರು. ಈ ಇಬ್ಬರ ಆಯ್ಕೆಯೂ ಉತ್ತಮವಾಗಿರುತ್ತದೆ.

ನಾಯಕ ಯಾರು?

ಈ ಅಂಗಳ ಅಂಕಿ ಅಂಶಗಳನ್ನು ನೋಡಿದಾಗ ವಿರಾಟ್ ಕೊಹ್ಲಿ ನಾಯಕನ ಸ್ಥಾನಕ್ಕೆ ಉತ್ತಮ ಆಯ್ಕೆ. ಗುಜರಾತ್‌ ತಂಡದ ಪರ ಸಾಯಿ ಸುದರ್ಶನ್ ಭರ್ಜರಿ ಫಾರ್ಮ್‌ನಲ್ಲಿದ್ದು ಇವರನ್ನು ಸಹ ನೀವು ಕಡೆಗಣಿಸುವಂತಿಲ್ಲ.

Story first published: Wednesday, April 2, 2025, 8:21 [IST]
Other articles published on Apr 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+