Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿಗೆ ಆರೆಂಜ್ ಕ್ಯಾಪ್‌: ರೇಸ್‌ನಲ್ಲಿ ಇರುವ ಟಾಪ್ 5 ಆಟಗಾರರ ಪಟ್ಟಿ

ಐಪಿಎಲ್‌ನಲ್ಲಿ ಸೂಪರ್ ಸ್ಟಾರ್ ಹಾಗೂ ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಯುವ ಆಟಗಾರರು ಈ ವೇದಿಕೆಯನ್ನು ತಮ್ಮ ಸಾಮರ್ಥ್ಯ ಪ್ರದರ್ಶಿಸುವ ವೇದಿಕೆಯನ್ನಾಗಿ ಮಾಡಿಕೊಂಡರೆ, ಅನುಭವಿ ಬ್ಯಾಟರ್‌ಗಳು ತಮ್ಮಲ್ಲಿ ಇನ್ನು ಶಕ್ತಿ ಇದೆ ಎಂಬುದನ್ನು ಸಾರಿ ಹೇಳುತ್ತಿದ್ದಾರೆ. ಈ ವೇಳೆ ಸದ್ಯ ಎದ್ದು ಕಾಣುವ ಆಟಗಾರ ವಿರಾಟ್ ಕೊಹ್ಲಿ. ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಮನಮೋಹಕ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚುತ್ತಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧವೂ ವಿರಾಟ್‌ ಅಮೋಘ ಪ್ರದರ್ಶನ ನೀಡಿ ಆರೆಂಜ್ ಕ್ಯಾಪ್‌ ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ.

ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 49 ರನ್‌ ಬಾರಿಸಿದರು. ಈ ಮೂಲಕ ತಂಡದ ಗೆಲುವಿನಲ್ಲಿ ತನ್ನದೇ ಆದ ಕಾಣಿಕೆ ನೀಡಿದರು. ಇವರ ಈ ಭರ್ಜರಿ ಪ್ರದರ್ಶನದ ಫಲವಾಗಿ ಇವರ ಮುಡಿಗೆ ಆರೆಂಜ್‌ ಕ್ಯಾಪ್‌ ಸಂದಿದೆ. ಸದ್ಯ ವಿರಾಟ್ ಐಪಿಎಲ್‌ನಲ್ಲಿ ಆಡಿದ 5 ಪಂದ್ಯಗಳಲ್ಲಿ 158ರ ಸ್ಟ್ರೈಕ್‌ ರೇಟ್‌ನಲ್ಲಿ 228 ರನ್‌ ಕಲೆ ಹಾಕಿದ್ದಾರೆ. ಅಲ್ಲದೆ 2 ಅರ್ಧಶತಗಳನ್ನು ಸಹ ಬಾರಿಸಿದ್ದಾರೆ. ಸದ್ಯ ಆರೆಂಜ್‌ ಕ್ಯಾಪ್‌ಗೆ ವಿರಾಟ್‌ ಒಡೆಯ.

Virat Kohli

ಅನುಭವಿಗಳ ನಡುವೆ ಕಾದಾಟ

ಆರೆಂಜ್ ಕ್ಯಾಪ್‌ ರೇಸ್‌ನಲ್ಲಿ ಸದ್ಯ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭರವಸೆಯ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 5 ಪಂದ್ಯಗಳಲ್ಲಿ 224 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 142 ಆಗಿದೆ. ಇದೇ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಸಹ ಕಾಣಿಸಿಕೊಳ್ಳುತ್ತಾರೆ. ಪ್ರಸಕ್ತ ಲೀಗ್‌ನಲ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿರುವ ಪಾಟಿದಾರ್ 213ರ ಸ್ಟ್ರೈಕ್‌ ರೇಟ್‌ನಲ್ಲಿ 222 ರನ್‌ ಸಿಡಿಸಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಇಶಾನ್‌ ಕಿಶನ್‌ ಸಹ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 5 ಪಂದ್ಯಗಳಲ್ಲಿ 213 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್‌ 190 ಆಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 5 ಪಂದ್ಯಗಳಲ್ಲಿ 263ರ ಸ್ಟ್ರೈಕ್ ರೇಟ್‌ನಲ್ಲಿ 200 ರನ್‌ ಸಿಡಿಸಿದ್ದಾರೆ.

ಈ ಆರೆಂಜ್‌ ಕ್ಯಾಪ್ ಪಟ್ಟಿಯಲ್ಲಿ ಅನುಭವಿ ಹಾಗೂ ಯುವ ಆಟಗಾರರ ನಡುವೆ ಜಿದ್ದಾಜಿದ್ದಿನ ಕಾಳಗ ನಡೆಯುತ್ತಿದೆ. ಕೊನೆಯಲ್ಲಿ ಪ್ರಶಸ್ತಿ ಗೆಲ್ಲುವುದು ಯಾರು ಎಂಬ ಕುತೂಹಲ ಮನೆ ಮಾಡಿದೆ.

Story first published: Thursday, April 16, 2026, 12:10 [IST]
Other articles published on Apr 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+