For Quick Alerts
ALLOW NOTIFICATIONS  
For Daily Alerts
 

WTC 2019-25: ರೋಹಿತ್ ಶರ್ಮಾ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಮಂಗಳವಾರ, ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆರಂಭವಾದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದರು.

2019-2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಚಕ್ರದಲ್ಲಿ ವಿರಾಟ್ ಕೊಹ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

ಭಾರತದ ಹಾಲಿ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಈ ಮೈಲುಗಲ್ಲು ಸಾಧಿಸಿದ್ದಾರೆ. ವಿರಾಟ್ ಕೊಹ್ಲಿ 2019ರಿಂದ ಆಡಿದ 57 ಇನ್ನಿಂಗ್ಸ್‌ಗಳಲ್ಲಿ 2101 ರನ್ ಗಳಿಸಿದ್ದು, ರೋಹಿತ್ ಶರ್ಮಾ 42 ಇನ್ನಿಂಗ್ಸ್‌ಗಳಲ್ಲಿ 2097 ರನ್ ಗಳಿಸಿದ್ದಾರೆ.

Virat Kohli overtakes Rohit Sharma To Became Top Indian Batter Highest Run Scorer In WTC 2019-25

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊರತುಪಡಿಸಿ, ಚೇತೇಶ್ವರ ಪೂಜಾರ 62 ಇನ್ನಿಂಗ್ಸ್‌ಗಳಲ್ಲಿ 1769 ರನ್‌ಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ನಂತರ ಅಜಿಂಕ್ಯ ರಹಾನೆ 49 ಇನ್ನಿಂಗ್ಸ್‌ಗಳಲ್ಲಿ 1589 ರನ್ ಮತ್ತು ರಿಷಭ್ ಪಂತ್ 41 ಇನ್ನಿಂಗ್ಸ್‌ಗಳಲ್ಲಿ 1575 ರನ್ ಗಳಿಸಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಗುರುತು ಮೂಡಿಸಲು ವಿಫಲರಾದರು. ಏಕೆಂದರೆ, 64 ಎಸೆತಗಳಲ್ಲಿ 59.38ರ ಸ್ಟ್ರೈಕ್ ರೇಟ್‌ನೊಂದಿಗೆ 38 ರನ್ ಗಳಿಸಿದರು. 35ರ ಹರೆಯದ ವಿರಾಟ್ ಕೊಹ್ಲಿ ಹರಿಣ ಪಡೆಯ ಬೌಲಿಂಗ್ ದಾಳಿಯ ವಿರುದ್ಧ 5 ಬೌಂಡರಿಗಳನ್ನು ಬಾರಿಸಿದರು.

ಆದಾಗ್ಯೂ, 31ನೇ ಓವರ್‌ ಎಸೆದ ವೇಗಿ ಕಗಿಸೊ ರಬಾಡ ಬೌಲಿಂಗ್‌ನಲ್ಲಿ ತಮ್ಮ ಪುನರಾವರ್ತಿತ ಔಟ್ ಸೈಡ್ ಆಫ್ ಸ್ಟಂಪ್ ಬಾಲ್ ಕೆಣಕಲು ಹೋಗಿ ಬ್ಯಾಟ್‌ಗೆ ಸವರಿದ ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈಸೇರಿತು.

Virat Kohli overtakes Rohit Sharma To Became Top Indian Batter Highest Run Scorer In WTC 2019-25

ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ನ 1ನೇ ದಿನದಂದು ಮೂರನೇ ಸೆಷನ್‌ನ ಬಹುಪಾಲು ಮಳೆಯಿಂದ ಅಡ್ಡಿಯಾಯಿತು. ಎರಡನೇ ದಿನವೂ ಮಳೆ ಬರುವ ನಿರೀಕ್ಷೆ ಇದೆ.

ಮಧ್ಯಮ ಕ್ರಮಾಂಕದ ಬ್ಯಾಟರ್ ಕೆಎಲ್ ರಾಹುಲ್ ಮೈದಾನದಲ್ಲಿ ಕಳೆದ ಸಮಯದುದ್ದಕ್ಕೂ ದಿಟ್ಟ ಹೋರಾಟ ನಡೆಸಿದರು. ಉಳಿದ ಬ್ಯಾಟ್ಸ್‌ಮನ್‌ಗಳು ಕಗಿಸೊ ರಬಾಡ ಅವರ ಬೌಲಿಂಗ್ ಎದುರಿಸಲು ವಿಫಲರಾದರು. ಈ ವೇಳೆ ಭಾರತದ ಸ್ಕೋರ್ ಅನ್ನು 200 ರನ್‌ಗಳ ಗಡಿ ದಾಟಿಸಲು ಹೋರಾಡಿದರು. ಕೊನೆಯಲ್ಲಿ ಮೊಹಮ್ಮದ್ ಸಿರಾಜ್ ಅವರು ಎದುರಿಸಿದ 10 ಎಸೆತಗಳಲ್ಲಿ ತಾಳ್ಮೆಯಿಂದ ಬ್ಯಾಟ್ ಬೀಸಿದರು.

ಮೊದಲ ದಿನದ ಅಂತಿಮ ಸೆಷನ್‌ನಲ್ಲಿ ಜಸ್ಪ್ರೀತ್ ಬುಮ್ರಾ ತಾಳ್ಮೆ ಕಳೆದುಕೊಂಡರು ಮತ್ತು 19 ಎಸೆತಗಳನ್ನು ಆಡಿದ ಬಳಿಕ ಮಾರ್ಕೊ ಜಾನ್ಸೆನ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು.

Story first published: Wednesday, December 27, 2023, 12:42 [IST]
Other articles published on Dec 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+