Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಂಚೆ ಧರಿಸಿದ್ದರಿಂದಲೇ ಕೊಹ್ಲಿ ರೆಸ್ಟೋರೆಂಟ್ ಗೆ ನೋ ಎಂಟ್ರಿ: ವಿಡಿಯೋ ವೈರಲ್

ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಐಸಿಸಿ ಏಕದಿನ ವಿಶ್ವಕಪ್ 2023 ರ ನಂತರ ಕ್ರಿಕೆಟ್‌ನಿಂದ ವಿರಾಮ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಯಿಂದ ಹೊರಗುಳಿದ ನಂತರ, ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಸೀಮಿತ ಓವರ್‌ಗಳ ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

ಕ್ರಿಕೆಟ್‌ನಿಂದ ದೂರ ಉಳಿದ ನಂತರವೂ ಕೊಹ್ಲಿ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಮುಂಬೈನಲ್ಲಿ ವಿರಾಟ್ ಕೊಹ್ಲಿ ಅವರ ಒಡೆತನದ ರೆಸ್ಟೊರೆಂಟ್‌ ಇದೆ. ಈ ರೆಸ್ಟೊರೆಂಟ್‌ ನಲ್ಲಿ ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ಪ್ರವೇಶ ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

virat Kohli owned hotel denied entry to a man who went to Panche: video viral

ಮುಂಬೈನ ಜುಹು ಪ್ರದೇಶದಲ್ಲಿರುವ ವಿರಾಟ್ ಅವರ ರೆಸ್ಟೋರೆಂಟ್ 'ರೆಸ್ಟೋರೆಂಟ್ ಒನ್8 ಕಮ್ಯೂನ್' ಇದೆ. ಈ ರೆಸ್ಟೋರೆಂಟ್‌ಗೆ ಪ್ರವೇಶಿಸಲು ತಮಿಳುನಾಡು ಮೂಲದ ವ್ಯಕ್ತಿಗೆ ತಾನು ತೊಟ್ಟ ಬಟ್ಟೆ ಅಡ್ಡಿಯಾಗಿದೆ. ತನ್ನ ಬಟ್ಟೆಯ ಕಾರಣದಿಂದ ತನಗೆ ಪ್ರವೇಶವನ್ನು ಅನುಮತಿಸಲಿಲ್ಲ ಎಂದು ವ್ಯಕ್ತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ವೀಡಿಯೋದಲ್ಲಿ ಈ ವ್ಯಕ್ತಿ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾನೆ. ಅವರು ವಿರಾಟ್ ಅವರ ರೆಸ್ಟೋರೆಂಟ್‌ನ ಹೊರಗೆ ನಿಂತು ತಾನು ಅನುಭವಿಸಿದ ಯಾತನೆಯನ್ನು ತಿಳಿಸಿದ್ದಾರೆ.

ಈ ವೀಡಿಯೊವನ್ನು ಇಲ್ಲಿಯವರೆಗೆ 1 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ವೀಡಿಯೊದಲ್ಲಿ, ಪಂಚೆ ಉಟ್ಟ ವ್ಯಕ್ತಿ ಮುಂಬೈ ಇಳಿದು, ನೇರವಾಗಿ ಹೋಟೆಲ್‌ ಹೋಗಿ ಫ್ರೆಶ್ ಅಪ್ ಆಗಿ, ವಿರಾಟ್ ಒಡೆತನದ ಹೋಟೆಲ್‌ನತ್ತ ಹೆಜ್ಜೆ ಹಾಕಿದರು. ಒನ್8 ಕಮ್ಯೂನ್ ರೆಸ್ಟೋರೆಂಟ್‌ಗೆ ತೆರಳಿದರು. ಆದರೆ ಅಲ್ಲಿ ಅವರನ್ನು ಒಳಗೆ ಬಿಡಲಿಲ್ಲ.

ತನ್ನ ಉಡುಪಿನ ಕಾರಣದಿಂದ ರೆಸ್ಟೋರೆಂಟ್ ಸಿಬ್ಬಂದಿ ತನ್ನನ್ನು ಒಳಗೆ ಬಿಡಲಿಲ್ಲ ಎಂದು ವ್ಯಕ್ತಿ ವಿಡಿಯೋದಲ್ಲಿ ಹೇಳಿದರು. ಅವರ ಉಡುಪು ರೆಸ್ಟೋರೆಂಟ್‌ನ ಡ್ರೆಸ್ ಕೋಡ್‌ಗೆ ಹೊಂದಿಕೆಯಾಗದ ಕಾರಣ ಸಿಬ್ಬಂದಿ ಅವರನ್ನು ರೆಸ್ಟೋರೆಂಟ್ 'ರೆಸ್ಟೋರೆಂಟ್ ಒನ್8 ಕಮ್ಯೂನ್'ಗೆ ಪ್ರವೇಶಿಸದಂತೆ ತಡೆದರು ಎಂದು ಅವರು ಹೇಳಿದರು.

ವೀಡಿಯೊದಲ್ಲಿ, ವ್ಯಕ್ತಿಯು ಬಿಳಿ ಅಂಗಿ ಮತ್ತು ಧೋತಿ ಧರಿಸಿರುವುದನ್ನು ಕಾಣಬಹುದು. ಈ ಬಟ್ಟೆಗಳನ್ನು ಮುಖ್ಯವಾಗಿ ತಮಿಳುನಾಡಿನಲ್ಲಿ ಧರಿಸಲಾಗುತ್ತದೆ. ಮೈಮೇಲೆ ಹಾಕಿಕೊಳ್ಳುವ ಬಟ್ಟೆಯನ್ನು ನೋಡಿ, ಬೇರೆ ಜನ ನಮ್ಮನ್ನು ಗುರುತಿಸುತ್ತಾರೆ ಎಂಬುದಕ್ಕೆ ಇದುವೇ ಬೆಸ್ಟ್‌ ಎಕ್ಸಾಮ್‌ ಪಲ್...

Story first published: Monday, December 4, 2023, 18:41 [IST]
Other articles published on Dec 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+