For Quick Alerts
ALLOW NOTIFICATIONS  
For Daily Alerts
 

Unsung Hero: ಆರ್‌ಸಿಬಿ ಗೆಲುವಿನಲ್ಲಿ ಇವರದ್ದೂ ಕಾಣಿಕೆ ಅಪಾರ

ಜೈಪುರದಲ್ಲಿನ ಬ್ಯಾಟಿಂಗ್ ಫ್ರೆಂಡ್ಲಿ ಟ್ರ್ಯಾಕ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಫಿಲ್‌ ಸಾಲ್ಟ್‌ ಅವರ ಅಮೋಘ ಜೊತೆಯಾಟದ ನೆರವಿನಿಂದ ಆರ್‌ಸಿಬಿ, ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ, 18ನೇ ಆವೃತ್ತಿಯ ಐಪಿಎಲ್‌ನಲ್ಲಿ ನಾಲ್ಕನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಸೊಗಸಾದ ಪ್ರದರ್ಶನ ನೀಡಿದ್ದಕ್ಕಾಗಿ ಫಿಲ್ ಸಾಲ್ಟ್ ಆವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಪಂದ್ಯದ ಅಸಲಿ ಹೀರೋ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ ಅದಕ್ಕೆ ಉತ್ತರ ಇಲ್ಲಿದೆ.

ವಿರಾಟ್ ಕೊಹ್ಲಿ ರಾಜಸ್ಥಾನ ವಿರುದ್ಧ ಅಜೇಯ 62 ರನ್‌ ಬಾರಿಸುತ್ತಿದ್ದಂತೆ ತಮ್ಮ ಟಿ20 ಕ್ರಿಕೆಟ್‌ನಲ್ಲಿ 100ನೇ ಅರ್ಧಶತಕ ಬಾರಿಸಿದ ಹಿರಿಮೆಯನ್ನು ತನ್ನದಾಗಿಸಿಕೊಂಡರು. ಫಿಲ್‌ ಸಾಲ್ಟ್‌ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಾಡಲಾಗದ ಸಾಧನೆಯನ್ನು, ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಮಾಡಿದರು. ಇವರು 33 ಎಸೆತಗಳಲ್ಲಿ 65 ರನ್‌ ಬಾರಿಸಿ ತಂಡಕ್ಕೆ ನೆರವಾದ್ರು. ಇವರಿಬ್ಬರ ಆಟ ನಿಜಕ್ಕೂ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿತು. ಆದರೆ ಆ ಒಬ್ಬ ಬೌಲರ್‌ ಮಾತ್ರ ಗೆಲುವಿನಲ್ಲಿ ತನ್ನದೇ ಆದ ಕಾಣಿಕೆ ನೀಡಿದರು.

Virat Kohli Phil Salt Shine but Josh Hazlewood Emerges as Unsung Hero in RCB s Win Over Rajasthan Royals

ಅನ್‌ಸಂಗ್‌ ಹೀರೋ ಯಾರು?

ಯಶಸ್ವಿ ಜೈಸ್ವಾಲ್‌ ಅವರ ಸೊಗಸಾದ ಆಟದ ನೆರವಿನಿಂದ ರಾಜಸ್ಥಾ ರಾಯಲ್ಸ್‌ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ನೆರವಾಯಿತು. ಇವರು 47 ಎಸೆತಗಳಲ್ಲಿ 75 ರನ್‌ ಬಾರಿಸಿದ್ದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಇವರ ಉತ್ತಮ ಆಟಕ್ಕೆ ಬ್ರೇಕ್ ಹಾಕುವಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಬೌಲರ್‌ ಜೋಶ್ ಹ್ಯಾಜಲ್‌ವುಡ್ ಯಶಸ್ವಿಯಾದರು. ಇವರ ಪರ್ಫೆಕ್ಟ್ ಲೈನ್ ಹಾಗೂ ಲೆಂಥ್‌ ಅರಿಯುವಲ್ಲಿ ವಿಫಲರಾದರ ಯಶಸ್ವಿ ಎಲ್‌ಬಿ ಬಲೆಗೆ ಬಿದ್ದರು.

ಜೋಶ್‌ ಹ್ಯಾಜಲ್‌ವುಡ್‌ ಯಶಸ್ವಿ ಜೈಸ್ವಾಲ್ ಅವರ ಆಟಕ್ಕೆ ಬ್ರೇಕ್ ಹಾಕಿದ ಪರಿಣಾಮವೇ ರಾಜಸ್ಥಾನ ಮೊತ್ತ ಕಡಿಮೆ ಆಯಿತು. ಇಲ್ಲದೇ ಇದ್ದಲ್ಲಿ ರಾಜಸ್ಥಾನ ಇನ್ನು ಕೊಂಚ ರನ್‌ಗಳನ್ನು ಕಲೆ ಹಾಕುತ್ತಿತ್ತು. ಹೀಗಾಗಿ ಈ ವಿಕೆಟ್‌ ಪಡೆದ ಜೋಶ್‌ ಹ್ಯಾಜಲ್‌ವುಡ್‌ ಅನ್‌ ಸಂಗ್‌ ಹೀರೋ ರೀತಿ ಮಿಂಚಿದರು.

Virat Kohli Phil Salt Shine but Josh Hazlewood Emerges as Unsung Hero in RCB s Win Over Rajasthan Royals

ಜೋಶ್‌ ಹ್ಯಾಜಲ್‌ವುಡ್‌ ಪ್ರಸಕ್ತ ಲೀಗ್‌ನಲ್ಲಿ ತಮ್ಮ ಘನತೆಗೆ ತಕ್ಕ ಆಟವನ್ನು ಆಡುತ್ತಿದ್ದಾರೆ. ಇವರು ಪವರ್‌ ಪ್ಲೇನಲ್ಲಿ ಡಾಟ್ ಬೌಲ್‌ ಎಸೆಯಲು ಹೆಸರುವಾಸಿ. ಇವರು ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ನಡೆಸಿ 32 ರನ್‌ ನೀಡಿ 1 ವಿಕೆಟ್‌ ಕಬಳಿಸಿದರು. ಈ ವೇಳೆ ಇವರು 8 ಡಾಟ್‌ ಬೌಲ್‌ಗಳನ್ನು ಎಸೆದಿದ್ದರು.

Story first published: Sunday, April 13, 2025, 21:37 [IST]
Other articles published on Apr 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+