Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಾರ್ವಕಾಲಿಕ ಆರ್‌ಸಿಬಿ 11 ಘೋಷಿಸಿದ ವಿರಾಟ್‌ ಕೊಹ್ಲಿ: ಇಬ್ಬರು ಕನ್ನಡಿಗರಿಗೆ ಸ್ಥಾನ

ಮಾರ್ಚ್‌ 28 ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್‌ಗೆ ಎಲ್ಲ ತಂಡಗಳು ಈಗಾಗಲೇ ಅಭ್ಯಾಸ ಶಿಬಿರ ನಡೆಸಿವೆ. ಇನ್ನು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವ ಕನಸು ಕಾಣುತ್ತಿದೆ. ಈ ಮಧ್ಯೆ ಆರ್‌ಸಿಬಿ ತಂಡದ ಬ್ಯಾಟಿಂಗ್ ಶಕ್ತಿ ವಿರಾಟ್‌ ಕೊಹ್ಲಿ ಆಲ್‌ ಟೈಮ್‌ ಬೆಸ್ಟ್‌ ಆರ್‌ಸಿಬಿ ಪ್ಲೇಯಿಂಗ್‌ ಇಲೆವೆನ್ ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ ನೀಡಲಾಗಿದೆ.

ಇತ್ತೀಚೆಗಷ್ಟೇ ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ಸಾರ್ವಕಾಲಿಕ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್ ಘೋಷಿಸಿದ್ದರು. ಈಗ ವಿರಾಟ್‌ ಕೊಹ್ಲಿ ಸಹ ತಮ್ಮ ಆರ್‌ಸಿಬಿ ಬೆಸ್ಟ್‌ ಪ್ಲೇಯಿಂಗ್ ಇಲೆವೆನ್‌ ಹೆಸರಿಸಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ಕ್ರಿಸ್‌ ಗೇಲ್ ಅವರೇ ಇನಿಂಗ್ಸ್ ಆರಂಭಿಸಲಿದ್ದಾರೆ.

Virat Kohli

ಮೂರನೇ ಕ್ರಮಾಂಕದಲ್ಲಿ ಮಿಸ್ಟರ್‌ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್‌ ಕಾಣಿಸಿಕೊಳ್ಳಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಕರ್ನಾಟಕದ ಸೂಪರ್ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರಿಗೆ ಅವಕಾಶ ನೀಡಿದ್ದಾರೆ. ಆರ್‌ಸಿಬಿ ಪರ ಕೆಎಲ್ ರಾಹುಲ್ ನೀಡಿದ ಪ್ರದರ್ಶನದ ಆಧಾರದ ಮೇಲೆ ಅವರಿಗೆ ಸ್ಥಾನ ನೀಡಿದ್ದಾಗಿ ತಿಳಿಸಿದ್ದಾರೆ. ಇನ್ನು ಹಾಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ಇವರು ಸ್ಪಿನ್ ಬೌಲರ್‌ಗಳನ್ನು ಉತ್ತಮವಾಗಿ ದಂಡಿಸುವ ಕಲೆಯನ್ನು ಹೊಂದಿದ್ದರಿಂದ ಇವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ವಿರಾಟ್ ತಿಳಿಸಿದ್ದಾರೆ.

ಆರನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಇದ್ದಾರೆ. ಇವರು ಡೆತ್‌ ಓವರ್‌ಗಳಲ್ಲಿ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಆಟಗಾರ. ಹರ್ಷಲ್‌ ಪಟೇಲ್ ಅವರು ಕೊಂಚ ಬ್ಯಾಟಿಂಗ್ ಮಾಡುವ ಕ್ಷಮತೆ ಹೊಂದಿದ್ದರಿಂದ ಅವರನ್ನು ಸಹ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಅನಿಲ್‌ ಕುಂಬ್ಳೆಗೂ ಸ್ಥಾನ

ಆರ್‌ಸಿಬಿ ತಂಡವನ್ನು ಆರಂಭಿಕ ದಿನಗಳಲ್ಲಿ ಮುನ್ನಡೆಸಿದ್ದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಸಹ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಯುಜ್ವೇಂದ್ರ ಚಾಹಲ್ ಅವರು ಸಹ ವಿರಾಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಗದ ಬೌಲರ್‌ಗಳಾಗಿ ಮಿಚೆಲ್ ಸ್ಟಾರ್ಕ್, ಡೇಲ್ ಸ್ಟೇನ್ ಇದ್ದಾರೆ.

4 ವಿದೇಶಿ ಆಟಗಾರರು

ಐಪಿಎಲ್‌ನಲ್ಲಿ ತಂಡ ರಚಿಸುವಂತೆ ವಿರಾಟ್ ಸಹ ತಮ್ಮ ತಂಡದಲ್ಲಿ ನಾಲ್ಕು ವಿದೇಶಿ ಆಟಗಾರರನ್ನು ಸೇರಿಸಿಕೊಂಡಿದ್ದಾರೆ. ಆರಂಭಿಕರಾಗಿ ಕ್ರಿಸ್‌ ಗೇಲ್‌, ಎಬಿಡಿ, ಮಿಚೆಲ್ ಸ್ಟಾರ್ಕ್, ಡೇಲ್ ಸ್ಟೇನ್ ವಿದೇಶಿ ಆಟಗಾರರಿಗೆ ಸ್ಥಾನ ಪಡೆದಿದ್ದಾರೆ. ತಂಡದ ನಾಯಕತ್ವದ ಹೊಣೆಯನ್ನು ವಿರಾಟ್‌ ಯಾರಿಗೂ ನೀಡಿಲ್ಲ.

Virat Kohli

ವಿರಾಟ್‌ ಕೊಹ್ಲಿ ಪ್ಲೇಯಿಂಗ್ ಇಲೆವೆನ್: ಕ್ರಿಸ್ ಗೇಲ್ , ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕೆಎಲ್ ರಾಹುಲ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಅನಿಲ್ ಕುಂಬ್ಳೆ, ಮಿಚೆಲ್ ಸ್ಟಾರ್ಕ್, ಡೇಲ್ ಸ್ಟೇನ್ , ಯುಜ್ವೇಂದ್ರ ಚಾಹಲ್.

Story first published: Monday, March 16, 2026, 17:55 [IST]
Other articles published on Mar 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+