ಟೀಮ್ ಇಂಡಿಯಾ ಮತ್ತು ಆರ್‌ಸಿಬಿಯಲ್ಲಿ ಕೊಹ್ಲಿಯ ಬೆಸ್ಟ್ ಬ್ಯಾಟಿಂಗ್ ಪಾರ್ಟ್‌ನರ್ಸ್ ಇವರು!

ಕ್ರಿಕೆಟ್‌ನ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಸಮಾಜಿಕ ಜಾಲತಾಣದಲ್ಲಿ ಗುರುವಾರ ಇಂಗ್ಲೆಂಡ್‌ನ ಮಾಜಿ ಆಟಗಾರ ಕೆವಿನ್ ಪೀಟರ್‌ಸನ್ ಜಿತೆಗ ಸಂವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕೆವಿನ್ ಪೀಟರ್‌ಸನ್ ಜೊತೆಗೆ ಮಾತುಕತೆ ಸಂದರ್ಭದಲ್ಲಿ ಅನೇಕ ಕುತೂಹಲಕಾರಿ ವಿಚಾರಗಳನ್ನು ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ವೈಯಕ್ತಿಕವಾದ ಅಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ಪೀಟರ್ಸನ್ ಜೊತೆಗೆ ಹೇಳಿಕೊಂಡಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.
ಈ ಸಂದರ್ಭದಲ್ಲಿ ವಿರಾಟ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಜೊತೆಗಾರರನ್ನು ಕೊಹ್ಲಿ ಹೆಸರಿಸಿದ್ದಾರೆ

ಇಬ್ಬರು ಆಟಗಾರರನ್ನು ಬೆಸ್ಟ್ ಪಾರ್ಟ್‌ನರ್ಸ್ ಎಂದ ಕೊಹ್ಲಿ
ವಿರಾಟ್ ಕೊಹ್ಲಿ ಇಬ್ಬರು ಆಟಗಾರರನ್ನು ತನ್ನ ಉತ್ತಮ ಜೊತೆಗಾರರು ಎಂದು ಹೇಳಿದ್ದಾರೆ. ಅದರಲ್ಲಿ ಓರ್ವ ಆಟಗಾರನನ್ನು ಟೀಮ್ ಇಂಡಿಯಾದಿಂದ ಕೊಹ್ಲಿ ಆಯ್ದುಕೊಂಡಿದ್ದರೆ, ಇನ್ನೋರ್ವ ಆಟಗಾರ ಕೊಹ್ಲಿಯ ಐಪಿಎಲ್ ಟೀಮ್‌ಮೇಟ್ ಆಗಿದ್ದಾರೆ.

ಟೀಮ್ ಇಂಡಿಯಾದಿಂದ ಯಾರು?
ಟೀಮ್ ಇಂಡಿಯಾದಿಂದ ಕೊಹ್ಲಿ ಆಯ್ದುಕೊಂಡ ಆಟಗಾರ ಬೇರೆ ಯಾರು ಅಲ್ಲ. ಅದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಧೋನಿಯ ಜೊತೆಗೆ ಬ್ಯಾಟಿಂಗ್ ಮಾಡುವುದು ತನಗೆ ಇಷ್ಟ. ಅವರು ಬ್ಯಾಟಿಂಗ್ ಜೊತೆಗಾರನಾಗಿದ್ದಾಗ ಹೊಂದಾಣಿಕೆ ತುಂಬಾ ಚೆನ್ನಾಗಿರುತ್ತದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಐಪಿಎಲ್ ಜೊತೆಗಾರ
ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಐಪಿಎಲ್‌ನ ಬೆಸ್ಟ್ ಪಾರ್ಟ್‌ನರ್ ಯಾರು ಎಂಬುದನ್ನು ಕೂಡ ಹೇಳಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿಗೆ ಎಬಿಡಿ ವಿಲಿಯರ್ಸ್ ಅಚ್ಚುಮೆಚ್ಚಿನ ಜೊತೆಗಾರ ಎಂಬಿದನ್ನು ಕೊಹ್ಲಿ ಬಹಿರಂಗಪಡಿಸಿದ್ದಾರೆ.

ಕಾರಣವೂ ಹೇಳಿದ ಕೊಹ್ಲಿ
ಉತ್ತಮ ಜೊತೆಗಾರರನ್ನು ಹೆಸರಿಸಿದ ಬಳಿಕ ಇದಕ್ಕೆ ಕೊಹ್ಲಿ ಕಾರಣವನ್ನೂ ನೀಡಿದ್ದಾರೆ. ತನಗೆ ಉತ್ತಮವಾಗಿ ಓಡುವಂತಾ ಆಟಗಾರರು ಅಂದರೆ ಇಷ್ಟ. ರನ್‌ಗಾಗಿ ಕರೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಈ ಇಬ್ಬರು ಆಟಗಾರರು ಇಷ್ಟ ಎಂದಿದ್ದಾರೆ.

ಎಬಿಡಿ ಯನ್ನು ಹೊಗಳಿದ ಕೊಹ್ಲಿ
ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಜೊತೆಗಾರ ಎಬಿಡಿ ಬಗ್ಗೆ ಉತ್ತಮ ಮಾತುಗಳನ್ನಾಡಿದ್ದಾರೆ. ಎಬಿಡಿ ಒಬ್ಬ ಅದ್ಭುತ ಆಟಗಾರ. ಆತಮ ಜೊತೆ ಬ್ಯಾಟಿಂಗ್ ಮಾಡುವುದುನ್ನು ನಾನು ಯಾವಾಗಲೂ ಆನಂದಿಸುತ್ತೇನೆ. ನಾವಿಬ್ಬರು ಕ್ರಿಕೆಟ್ ಬಗ್ಗೆ ಹೆಚ್ಚಾಗಿ ಮಾತನಾಡಿಕೊಳ್ಳುವುದಿಲ್ಲ ಎಂಬುದನ್ನು ಇದೇ ವೇಳೆ ಕೊಹ್ಲಿ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications