ನೆಚ್ಚಿನ ವೀಕ್ಷಕ ವಿವರಣೆಕಾರನನ್ನು ಹೆಸರಿಸಿದ ಟೀಮ್ ಇಂಡಿಯಾ ನಾಯಕ ಕೊಹ್ಲಿ

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ನಡೆಸಿಕೊಟ್ಟ ಇನ್‌ಸ್ಟಾಗ್ರಾಮ್ ಲೈವ್ ಸಂದರ್ಶನದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಫೇವರೀಟ್ ವೀಕ್ಷಕವಿವರಣೆಕಾರ ಯಾರು ಎಂಬ ವಿಚಾರವನ್ನು ಹೇಳಿಕೊಂಡಿದ್ದಾರೆ.
ಕ್ರಿಕೆಟ್ ಜೀವನದ ಹಲವಾರು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡ ವಿರಾಟ್ ಕೊಹ್ಲಿ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾಹಿತಿಯನ್ನು ನೀಡಿದರು. ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್‌ಸನ್ ಜೊತೆಗೆ ಕೊಹ್ಲಿ ಮನ ಬಿಚ್ಚಿ ಮಾತಮಾಡಿದರು.
ಕೆವಿನ್ ಪೀಟರ್‌ಸನ್ ಕೊಹ್ಲಿ ಬಳಿ ನೆಚ್ಚಿನ ಕಾಮೆಂಟೇಟರ್ ಯಾರು ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಸ್ವತಃ ಕಾಮೆಂಟೇಟರ್ ಆಗಿರುವ ಪೀಟರ್ಸನ್ ಈ ವೇಳೆ ವಿರಾಟ್‌ಗೆ ಪ್ರಶ್ನೆಯ ಜೊತೆಗೆ "ಈ ಪ್ರಶ್ನೆಗೆ ಉತ್ತರಿಸುವ ಮೊದಲು ಎಚ್ಚರದಿಂದಿರಿ, ಇದರಿಂದ ನಿಮಗೆ ಕೆಟ್ಟದಾಗಬಹುದು ಎಂದು ಹುಸಿ ಬೆದರಿಕೆಯನ್ನೂ ಒಡ್ಡಿದ್ದರು.
ಈ ಬಗ್ಗೆ ಉತ್ತರಿಸಲು ಕೊಂಚ ಸಮಯ ತೆಗೆದುಕೊಂಡ ಕೊಹ್ಲಿ ಸಿಕ್ಕಾಪಟ್ಟೆ ಆಲೋಚಿಸಿ ಕೊನೆಗೆ, "ನನ್ನ ಫೇವರಿಟ್ ಕಾಮೆಂಟೇಟರ್... ಬಹಳ ಸುಲಭ. ಅದು ನೀವಂತೂ ಅಲ್ಲ. ಅವರು ನಾಸಿರ್ ಹುಸೇನ್," ಎಂದಿದ್ದಾರೆ.
ಇದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿದ ಪೀಟರ್ಸನ್, "ಪರ್ಫೆಕ್ಟ್. ಈ ಪ್ರಶ್ನೆಗೆ ಉತ್ತರಿಸಲು ಸಮಯ ತೆಗೆದುಕೊಂಡರೂ, ಥ್ಯಾಂಕ್ಯೂ ಈ ಉತ್ತರ ಚೆನ್ನಾಗಿದೆ. ಪರ್ಫೆಕ್ಟ್," ಎಂದರು.
ಕೆವಿನ್ ಪೀಟರ್‌ಸನ್ ಆರ್‌ಸಿಬಿ ತಂಡದ ಮಾಜಿ ಆಟಗಾರನೂ ಆಗಿದ್ದಾರೆ. ಹೀಗಾಗಿ ಕೊಹ್ಲಿ ಮತ್ತು ಪೀಟರ್‌ಸನ್ ನಡುವುನ ಬಾಂಧವ್ಯ ತುಂಬಾ ಚೆನ್ನಾಗಿದೆ. ವಿರಾಟ್ ಕೊಹ್ಲಿ ಅನೇಕ ವಿಚಾರಗಳನ್ನು ಈ ಸಂದರ್ಶನದ ಸಂದರ್ಭದಲ್ಲಿ ಪೀಟರ್‌ಸನ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications