For Quick Alerts
ALLOW NOTIFICATIONS  
For Daily Alerts
 

Virat Kohli: ಗೆಳೆಯನ ದಾಖಲೆ ಅಳಿಸುವ ಸನಿಹದಲ್ಲಿ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ಸದ್ಯ ಶ್ರೀಲಂಕಾ ಪ್ರವಾಸವನ್ನು ಮುಗಿಸಿಕೊಂಡು ಭಾರತಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ದೇಶೀಯ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಬಹುತೇಕ ಭಾರತ ತಂಡದ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಸಹ ಈ ಟೂರ್ನಿಯಲ್ಲಿ ಆಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು ಆದರೆ, ಕೊನೆಯ ಕ್ಷಣದಲ್ಲಿ ಅವರು ಹಿಂದೇಟು ಹಾಕಿದರು. ಬಾಂಗ್ಲಾದೇಶದ ವಿರುದ್ಧದ ಸರಣಿಯಿಂದ ಅವರು ಮೈದಾನಕ್ಕೆ ಮರಳಲಿದ್ದಾರೆ.

ಬಾಂಗ್ಲಾದೇಶ ಸದ್ಯ ಪಾಕ್ ಪ್ರವಾಸವನ್ನು ಮಾಡುತ್ತಿದ್ದು, ಇದಾದ ಬಳಿಕ ಭಾರತಕ್ಕೆ ಬರಲಿದೆ. ಈ ಸರಣಿಯನ್ನು ಟೀಮ್ ಇಂಡಿಯಾ ಅಭಿಮಾನಿಗಳು ಸಹ ಎದುರು ನೋಡುತ್ತಿದ್ದಾರೆ. ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಒಂದು ದೊಡ್ಡ ಮೈಲುಗಲ್ಲು ಮುಟ್ಟುವ ಪ್ಲ್ಯಾನ್ ಮಾಡಿಕೊಂಡಿದೆ. ಈ ಮೂಲಕ ತಮ್ಮದೇ ಗೆಳೆಯ ದಾಖಲೆಯನ್ನು ಹಿಂದಿಕ್ಕಲು ರೆಡಿ ಆಗಿದ್ದಾರೆ.

Virat Kohli Poised to Overtake Cheteshwar Pujara in Test Runs Against Bangladesh

ವಿರಾಟ್‌ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ಸ್ಟಾರ್‌ ಬ್ಯಾಟರ್‌ ಭಯ ನಿಜಕ್ಕೂ ಬಾಂಗ್ಲಾ ತಂಡಕ್ಕೆ ಕಾಡಲಿದೆ. ಇವರು ಅಂಗಳದಲ್ಲಿ ರನ್‌ಗಳನ್ನು ಹೇಗೆ ಕಲೆ ಹಾಕಬೇಕು ಎಂಬುದನ್ನು ಚೆನ್ನಾಗಿ ಅರಿತು ಕೊಂಡಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಕೊಹ್ಲಿ ಮತ್ತೊಂದು ದಾಖಲೆ ಮಾಡಬಹುದು.

ಸಚಿನ್‌ ಟಾಪ್‌ ಸ್ಕೋರ್

ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹಿರಿಮೆ ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ಇವರು ಬಾಂಗ್ಲಾ ವಿರುದ್ಧ 820 ರನ್‌ ಸಿಡಿಸಿದ್ದಾರೆ. ಸಚಿನ್‌, ಬಾಂಗ್ಲಾ ವಿರುದ್ಧ 7 ಟೆಸ್ಟ್‌ ಪಂದ್ಯಗಳ 9 ಇನಿಂಗ್ಸ್‌ ಆಡಿದ್ದು, ಇದರಲ್ಲಿ 5 ಶತಕ ಸೇರಿವೆ. ಬಾಂಗ್ಲಾ ವಿರುದ್ಧ ಗರಿಷ್ಠ ರನ್‌ ಸಾಧನೆ ಮಾಡಿರುವ ಎರಡನೇ ಬ್ಯಾಟರ್‌ ರಾಹುಲ್ ದ್ರಾವಿಡ್. ಟೀಮ್ ಇಂಡಿಯಾ ಮಾಜಿ ನಾಯಕ 7 ಟೆಸ್ಟ್ ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ 560 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಚೇತೇಶ್ವರ ಪೂಜಾರ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಬಾಂಗ್ಲಾದೇಶ ವಿರುದ್ಧ 5 ಟೆಸ್ಟ್ ಪಂದ್ಯಗಳ 8 ಇನ್ನಿಂಗ್ಸ್‌ಗಳಲ್ಲಿ 468 ರನ್ ಗಳಿಸಿದ್ದಾರೆ.

ವಿರಾಟ್‌ಗೆ ನಾಲ್ಕನೇ ಸ್ಥಾನ

ಬಾಂಗ್ಲಾ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ನಾಲ್ಕನೇ ಸ್ಥಾನ. ಕೊಹ್ಲಿ 6 ಟೆಸ್ಟ್ ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ 437 ರನ್ ಗಳಿಸಿದ್ದಾರೆ. ವಿರಾಟ್‌ ಬಾಂಗ್ಲಾ ವಿರುದ್ಧ ಟೆಸ್ಟ್‌ನಲ್ಲಿ ಇನ್ನೂ 32 ರನ್ ಗಳಿಸಿದರೆ, ಅವರು ಪೂಜಾರ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

Virat Kohli Poised to Overtake Cheteshwar Pujara in Test Runs Against Bangladesh

ಕೊಹ್ಲಿ ಬಾಂಗ್ಲಾ ವಿರುದ್ಧ ಎರಡು ಟೆಸ್ಟ್‌ ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡುವ ಅವಕಾಶ ಹೊಂದಿದ್ದಾರೆ. ಈ ವೇಳೆ ಅವರು ಈ ಸಾಧನೆ ಮಾಡಬಹುದು ಎಂದು ಪರಿಗಣಿಸಲಾಗಿದೆ. ಚೇತೇಶ್ವರ್‌ ಪೂಜಾರ ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ಈ ಟೆಸ್ಟ್ ಸರಣಿಯಲ್ಲಿ ಪೂಜಾರ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ.

ಒಂದು ವೇಳೆ ಪೂಜಾರ ಅವರಿಗೆ ಈ ತಂಡದಲ್ಲಿ ಸ್ಥಾನ ಲಭಿಸಿದರೆ, ವಿರಾಟ್‌, ಈ ದಾಖಲೆ ಮುರಿಯುವುದು ಕೊಂಚ ಕಷ್ಟ. ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಎಷ್ಟು ರನ್ ಗಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

Story first published: Thursday, August 15, 2024, 9:37 [IST]
Other articles published on Aug 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+