ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಎಡಗೈ ವೇಗಿಯನ್ನು ಕೊಹ್ಲಿ ಹಾಡಿ ಹೊಗಳಿದ್ದೇಕೆ?

By ರಮೇಶ್ ಬಿ

ಢಾಕಾ. ಫೆ.23. ಪಾಕಿಸ್ತಾನದ ಎಡಗೈ ವೇಗದ ಬೌಲರ್ ಮೊಹಮದ್ ಅಮೀರ್ ಅವರು ವಿಶ್ವ ಶ್ರೇಷ್ಠ ವೇಗದ ಬೌಲರ್ ಗಳ ಪೈಕಿ ಒಬ್ಬರು ಎಂದು ಭಾರತ ತಂಡದ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.

2010 ರ ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಟಾರ್ಟ್ ಫಿಕ್ಸಿಂಗ್ ಆರೋಪದಲ್ಲಿ 5 ವರ್ಷಗಳ ಜೈಲಿನಲ್ಲಿದ್ದು ಈಗ ಮತ್ತೆ ಕ್ರಿಕೆಟ್ ಮರಳಿರುವುದು ಪಾಕಿಸ್ತಾನಕ್ಕೆ ಒಂದು ಬಲ ಬಂದ್ದಂತಾಗಿದೆ ಹಾಗು ಅವರೊಬ್ಬ ವಿಶ್ವ ಶ್ರೇಷ್ಠ ಬೌಲರ್ ಗಳಲ್ಲಿ ಅಮೀರ್ ಅವರು ಉತ್ತಮ ಬೌಲರ್ ಆಗಿದ್ದಾರೆ ಎಂದು ವಿರಾಟ್ ತಿಳಿಸಿದ್ದಾರೆ.[ಏಷ್ಯಾಕಪ್ 2016 : ತಂಡಗಳು]

Virat Kohli praises 'world-class' Pakistan pacer Mohammad Aamir

23 ವರ್ಷದ ಅಮೀರ್ ಅವರ ಆಟವನ್ನು ನೋಡಲು ತುಂಬ ಸಂತೋಷವಾಗುತ್ತಿದೆ. ಅವರು ಬಹಳಟ್ಷು ಅಚ್ಚು ಕಟ್ಟಾಗಿ ಬೌಲಿಂಗ್ ಮಾಡುವ ನೈಪುಣ್ಯತೆಯನ್ನು ಹೊಂದಿದ್ದಾರೆ. ಅತೀ ವೇಗವಾಗಿ ಬೌಲ್ ಎಸೆಯುತ್ತಾರೆ ಹಾಗು ಬೌನ್ಸರ್, ಯಾರ್ಕರ್ ಬೌಲ್ ಮಾಡುವ ಪ್ರತಿಭೆ ಅವರಲ್ಲಿದೆ ಹಾಗಾಗಿ ಮತ್ತೆ ಕ್ರಿಕೆಟ್ ಗೆ ಮರಳಿ ಬಂದಿರುವುದು ಸಂತೋಷವಾಗುತ್ತದೆ ಎಂದು ಮಂಗಳವಾರ ವಿರಾಟ್ ಮಾಧ್ಯಮಗಾರರ ಮುಂದೆ ಅಮೀರ್ ಅವರನ್ನು ಹೊಗಳಿದ್ದಾರೆ.[ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ]

ಮೊಹಮದ್ ಅಮೀರ್ ಅವರು 2009ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ 28 ಕ್ಕೆ 4 ವಿಕೇಟ್ ಇವರ ಅತ್ಯುತ್ತಮ ಸಾಧನೆಯಾಗಿದೆ. ಇವರು ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಐದು ವರ್ಷಗಳ ಕಾಲ ಇವರು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿಷೇಧಕ್ಕೆ ಒಳಗಾಗಿದ್ದರು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X