Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA Test: ಸೆಂಚುರಿಯನ್‌ನಲ್ಲಿ ಸಾಧಿಸಲಾಗದ್ದನ್ನು, ಕೆಪ್‌ಟೌನ್‌ನಲ್ಲಿ ಸಾಧಿಸುವ ವಿಶ್ವಾಸದಲ್ಲಿ ಕಿಂಗ್ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದ ವಿರಾಟ್ ಕೊಹ್ಲಿ, ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದಾರೆ. ಸೆಂಚುರಿಯನ್‌ನಲ್ಲಿ ಮಾಡದ ಸಾಧನೆಯನ್ನು ಕೆಪ್‌ಟೌನ್‌ ನಲ್ಲಿ ಮಾಡುವ ಇರಾದೆಯನ್ನು ಹೊಂದಿರುವ ಟೀಮ್ ಇಂಡಿಯಾ ಚೇಸಿಂಗ್ ಸ್ಟಾರ್‌ ವಿರಾಟ್ ಕೊಹ್ಲಿ ಶತಕದ ಸೂಚನೆಯನ್ನು ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ವಂಚಿತರಾಗಿದ್ದರು. ಅಲ್ಲದೆ ರೋಹಿತ್ ಶರ್ಮಾ ನಾಯಕತ್ವದ ಪ್ರವಾಸಿ ಟೀಂ ಇಂಡಿಯಾ ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು.

Virat Kohli preparing to play a big innings in the second Test

ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 76 ರನ್ ಗಳಿಸಿದ್ದರು, ಆದರೆ ಯಾವುದೇ ಬ್ಯಾಟ್ಸ್‌ಮನ್ ಅವರಿಗೆ ಉತ್ತಮ ಸಾಥ್ ನೀಡಲು ಸಾಧ್ಯವಾಗಲಿಲ್ಲ. ಇದೀಗ ಜನವರಿ 3 ರಿಂದ ಕೇಪ್ ಟೌನ್ ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಇದಕ್ಕಾಗಿ ಕಿಂಗ್ ಕೊಹ್ಲಿ ಬೆವರಿಳಿಸಿದ್ದಾರೆ.

ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಕೊಹ್ಲಿ ಬೆವರು ಸುರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದ ಆರಂಭದಲ್ಲಿ, ಕೊಹ್ಲಿ ಮೈದಾನದ ಒಳಗೆ ತುಂಬ ಉತ್ಸಾಹದಿಂದ ಹೋಗುತ್ತಿರುವುದು ಕಂಡು ಬಂದಿತು.ಈ ವೇಳೆ ಅವರ ಸ್ಟೈಲಿಷ್ ಲುಕ್ ಅಭಿಮಾನಿಗಳಿಗೆ ಖುಷಿ ನೀಡಿದೆ. ನಂತರ ಕೊಹ್ಲಿ ಸ್ವಲ್ಪ ಸ್ಟ್ರೆಚಿಂಗ್ ಮಾಡಿದರು. ಇದಾದ ಬಳಿಕ ಕಿಂಗ್ ಕೊಹ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡು ಬಂತು.

ಟೀಂ ಇಂಡಿಯಾದ ಮೊದಲ ಟೆಸ್ಟ್‌ನ ಮೂರನೇ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಮಾತ್ರ ತಂಡದ ಪರ ಅರ್ಧಶತಕ ಬಾರಿಸಿ ಆಧಾರವಾದರು. ಅಲ್ಲದೆ ಸೋಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಶ್ರಮಿಸಿದರು. ಕೊಹ್ಲಿ 82 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು.

Virat Kohli preparing to play a big innings in the second Test

ಈ ಇನ್ನಿಂಗ್ಸ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್‌ಗಳು ಕೊಹ್ಲಿಗೆ ಉತ್ತಮ ಸಾಥ್ ನೀಡಲಿಲ್ಲ. ಆದಾಗ್ಯೂ ಕೊಹ್ಲಿ ಏಕಾಂಗಿಯಾಗಿ ಹೋರಾಡಿ ಕೊನೆಯಲ್ಲಿ ವಿಕೆಟ್ ಒಪ್ಪಿಸಿದರು. ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ, ಕೊಹ್ಲಿಯನ್ನು ಹೊರತುಪಡಿಸಿ, ಗಿಲ್ ಮಾತ್ರ ಎರಡಂಕಿ ದಾಟಿದ್ದರು. ಇದಲ್ಲದೇ ಎಲ್ಲಾ ಬ್ಯಾಟ್ಸ್‌ಮನ್‌ಗಳು ಒಂದೇ ಅಂಕೆಯಲ್ಲಿ ಔಟಾದರು.

ಕೊಹ್ಲಿ ಟೆಸ್ಟ್‌ ವೃತ್ತಿಜೀವನ

ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 112 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 189 ಇನ್ನಿಂಗ್ಸ್‌ಗಳಲ್ಲಿ 49.38 ಸರಾಸರಿಯಲ್ಲಿ 8790 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು 29 ಶತಕಗಳು ಮತ್ತು 29 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ ಅಜೇಯ 254 ರನ್ ಆಗಿದೆ.

Story first published: Monday, January 1, 2024, 21:38 [IST]
Other articles published on Jan 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+