For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ-ರವೀಂದ್ರ ಜಡೇಜಾ ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನ

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಅಗ್ರ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಷದ ಪುರುಷರ ಕ್ರಿಕೆಟಿಗ ಪ್ರಶಸ್ತಿಗಾಗಿ ಸ್ಪರ್ಧೆ ನಡೆಸಿದ್ದಾರೆ. ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಅವರ ಸಹ ಆಟಗಾರ ಟ್ರಾವಿಸ್ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಗಾಗಿ ಕೊಹ್ಲಿ ಮತ್ತು ಜಡೇಜಾ ಸವಾಲನ್ನು ಎದುರಿಸಲಿದ್ದಾರೆ.

ಅಶ್ವಿನ್, ಟ್ರಾವಿಸ್ ಹೆಡ್ ಮತ್ತು ಆಸ್ಟ್ರೇಲಿಯಾದ ಸಹ ಆಟಗಾರ ಉಸ್ಮಾನ್ ಖವಾಜಾ, ಇಂಗ್ಲೆಂಡ್‌ನ ಹಿರಿಯ ಬ್ಯಾಟ್ಸ್‌ಮನ್ ಜೋ ರೂಟ್ ವಿರುದ್ಧ ಸ್ಪರ್ಧಿಸಬೇಕಾಗಿದೆ. ಕೊಹ್ಲಿ 2023 ರಲ್ಲಿ ಟೆಸ್ಟ್ ಮತ್ತು ODI ನಲ್ಲಿ 35 ಪಂದ್ಯಗಳಲ್ಲಿ 2048 ರನ್ ಗಳಿಸಿದ್ದರು. ವಿಶ್ವಕಪ್ ಸಮಯದಲ್ಲಿ ಅವರ 50 ನೇ ODI ಶತಕ ಸೇರಿದಂತೆ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

Virat Kohli-Ravindra Jadeja nominated for ICC Mens Cricketer of the Year

ಸಿಕ್ಕ ಅವಕಾಶವನ್ನು ಬಳಸಿಕೊಂಡ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಚಿತ್ತವನ್ನು ಕದ್ದಿದ್ದರು. ಈ ವರ್ಷ ಅವರ ಫಾರ್ಮ್‌ ಸೊಗಸಾಗಿತ್ತು. ಇದರ ಪರಿಣಾಮವೇ ಅವರು ಈ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.

ಇನ್ನು ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು 35 ಪಂದ್ಯಗಳಲ್ಲಿ 613 ರನ್ ಗಳಿಸಿದ್ದಲ್ಲದೆ, ಜಡೇಜಾ 66 ವಿಕೆಟ್ ಪಡೆದಿದ್ದಾರೆ. ಕಳೆದ ವರ್ಷದ ಆರಂಭದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 22 ವಿಕೆಟ್‌ಗಳನ್ನು ಪಡೆದಿದ್ದರು.

Virat Kohli-Ravindra Jadeja nominated for ICC Mens Cricketer of the Year

ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್‌ ಅವರು ಈ ವರ್ಷ ಮುಟ್ಟಿದ್ದೆಲ್ಲವೂ ಚಿನ್ನ. ಈ ಸ್ಟಾರ್ ಆಟಗಾರ ಆಸೀಸ್‌ ತಂಡದ ಮುಂದಾಳತ್ವವನ್ನು ವಹಿಸಿದ ಮೇಲೆ ಅವರ ಲಕ್ ಬದಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನ ಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮಣಿಸಿ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದ್ದರು.

ಅಲ್ಲದೆ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸೊಗಾಸದ ಪ್ರದರ್ಶನ ನೀಡಿದ್ದರು. ಆರಂಭಿಕ ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದ್ದ ಆಸೀಸ್ ನಂತರ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿತು. ಅಲ್ಲದೆ ಕಮಿನ್ಸ್ ನಾಯಕತ್ವದಲ್ಲಿ ಏಕದಿನ ವಿಶ್ವ ಚಾಂಪಿಯನ್ ಆಯಿತು.

Virat Kohli-Ravindra Jadeja nominated for ICC Mens Cricketer of the Year

ಕಮ್ಮಿನ್ಸ್ 24 ಪಂದ್ಯಗಳಲ್ಲಿ 422 ರನ್ ಗಳಿಸಿ 59 ವಿಕೆಟ್ ಪಡೆದಿದ್ದಾರೆ. ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಆಶಸ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಮತ್ತು ODI ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಇನ್ನು ಈ ವರ್ಷ ಭರ್ಜರಿ ಫಾರ್ಮ್‌ನಲ್ಲಿರುವ ಆಸೀಸ್‌ ಸ್ಟಾರ್ ಪ್ಲೇಯರ್‌ ಟ್ರಾವಿಸ್ ಹೆಡ್‌ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಆಟಗಾರರು ಹಾಗೂ ಇಬ್ಬರು ಆಸೀಸ್ ಆಟಗಾರರು ಇರುವುದು ವಿಶೇಷ..

Story first published: Friday, January 5, 2024, 21:05 [IST]
Other articles published on Jan 5, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+