ತವರಿನ ಅಂಗಳದಲ್ಲಿ ವಿಶ್ವಕಪ್ ಆಡಲು ಮುಜುಗರ ಎಂದಿದ್ದು ಯಾಕೆ ವಿರಾಟ್ ಕೊಹ್ಲಿ!?
ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಎರಡನೇ ಪಂದ್ಯವನ್ನಾಡಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿದ ಬಳಿಕ ಇದೀಗ ಅಫ್ಘಾನಿಸ್ತಾನದ ವಿರುದ್ಧ ಕಣಕ್ಕಿಳಿಯಲಿದ್ದು ಈ ಪಂದ್ಯ ಬುಧವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಟೀಮ್ ಇಂಡಿಯಾದ ಅನುಭವಿ ಆಟಗಾರ ಮಾಜಿ ನಾಯಕ ವಿರಾಟ್ ಕೊಹ್ಲಿಯ ತವರು ಮೈದಾನವಾಗಿರುವ ಕಾರಣ ಈ ಪಂದ್ಯ ಅವರಿಗೆ ಅತ್ಯಂತ ವಿಶೇಷವಾಗಿರುವುದರಲ್ಲಿ ಅನುಮಾನವಿಲ್ಲ.
ಸ್ವತಃ ವಿರಾಟ್ ಕೊಹ್ಲಿ ಮುಂದಿನ ವಿಶ್ವಕಪ್ ಪಂದ್ಯವನ್ನು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡುತ್ತಿರುವುದಕ್ಕೆ ಭಾರೀ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಈ ಮೈದಾನದಲ್ಲಿ ಆಡುವುದು ಅತ್ಯಂತ ವಿಶೇಷವಾದ ಅನುಭವ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಈ ಕ್ರೀಡಾಂಗಣದ ಪೆವಿಲಿಯನ್‌ಗೆ ಸ್ವತಃ ವಿರಾಟ್ ಕೊಹ್ಲಿ ಹೆಸರನ್ನು ಇಡಲಾಗಿದ್ದು ಇದು ನನಗೆ ಸ್ವಲ್ಪ ಮುಜುಗರ ಮಾಡುತ್ತದೆ ಎಂದಿದ್ದಾರೆ.

ಬಿಸಿಸಿಐ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು ಇದರಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಸಂವಾದ ನಡೆಸಿದ್ದಾರೆ. ಈ ವಿಡಿಯೋದನ್ನು ಕೆಎಲ್ ರಾಹುಲ್ ವಿರಾಟ್ ಕೊಹ್ಲಿ ಬಳಿಕ ತವರಿನಲ್ಲಿ ಆಡುತ್ತಿಉವ ಬಗ್ಗೆ ಪ್ರಶ್ನೆ ಮಾಡಿದ್ದಾರೆ. "ನಿದು ನಮಗೆ ತವರಿಗೆ ಮರಳುತ್ತಿರುವ ಸಂದರ್ಭ. ನಾವು ದೆಹಲಿಗೆ ತೆರಳುತ್ತಿದ್ದೇವೆ. ನಿಮಗೆ ಇದು ವಿಶೇಷವಾದ ಅನುಭವ ಎನ್ನುವುದು ನಾನು ಬಲ್ಲೆ. ನೀವು ಎಲ್ಲಿಯೇ ಬೆಳೆದವರು, ಈಗ ಅಲ್ಲಿನ ಫೆವಿಲಿಯನ್‌ಗೆ ನಿಮ್ಮದೇ ಹೆಸರಿದೆ. ಹಾಗಾಗಿ ಯಾವ ರೀತಿಯ ಭಾವನೆ ಈಗ ನಿಮ್ಮಲ್ಲಿದೆ?" ಎಂದು ರಾಹುಲ್ ಕೊಹ್ಲಿಯನ್ನು ಪ್ರಶ್ನಿಸಿದ್ದಾರೆ.
"ಹಿಂದಿನ ಆ ಕ್ಷಣಗಳ ನೆನಪು ನನ್ನ ಇನ್ನೂ ಹಸಿರಾಗಿದೆ. ಅದನ್ನು ನೀವು ಇನ್ನೂ ಕೂಡ ಆನಂದಿಸುತ್ತೀರಿ ಯಾಕೆಂದರೆ ಎಲಲ್ವೂ ಇಲ್ಲಿಂದಲೇ ಆರಂಭವಾಗಿದ್ದು. ಆಯ್ಕೆಗಾರರು ನಿಮ್ಮನ್ನು ನೋಡಿ ಇಲ್ಲಿಯೇ ಅವಕಾಶ ನೀಡಿದ್ದು. ಹಾಗಾಗಿ ರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಹೋಗಿ ಮತ್ತೆ ಆಡುವುದು ಯಾವಾಗಲೂ ವಿಶೇಷ. ಆದರೆ ಸ್ವಲ್ಪ ಮುಜುಗರ ಕೂಡ ಇದೆ. ನನ್ನದೇ ಹೆಸರಿನಲ್ಲಿ ಪೆವಿಲಿಯನ್ ಕೂಡ ಇದೆ. ನಿಜ ಹೇಳಬೇಕೆಂದರೆ ಅದರ ಬಗ್ಗೆ ನನಗೆ ಹೆಚ್ಚು ಮಾತನಾಡಲು ಇಷ್ಟವಿಲ್ಲ. ಮುಜುಗರವೆನಿಸುತ್ತದೆ. ಆದರೆ ಈಗ ನಾನು ಆರಂಭ ಮಾಡಿದ ಸ್ಥಳದಲ್ಲಿಯೇ ಆಡುವ ಅವಕಾಶಕ್ಕಾಗಿ ಕೃತಜ್ಞನಾಗಿದ್ದೇನೆ" ಎಂದಿದ್ದಾರೆ ವಿರಾಟ್ ಕೊಹ್ಲಿ.
ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಬುಧವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಬವಾಗಲಿದ್ದು 1:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅಲಭ್ಯವಾಗಲಿದ್ದು ಆರಂಭಿಕನಾಗಿ ಇಶಾನ್ ಕಿಶನ್ ರೋಹಿತ್ ಶರ್ಮಾಗೆ ಸಾರ್ಥ ನೀಡುವುದು ಖಚಿತ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications