Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಶ್ರೇಯಾಂಕ ಪಟ್ಟಿ ಅಗ್ರಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

Virat Kohli regains the top spot in ICC Test rankings

ಲಂಡನ್, ಆಗಸ್ಟ್ 23: ಅತಿಥೇಯ ಇಂಗ್ಲೆಂಡ್ ಹಾಗೂ ಭಾರತ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಟಗಾರರ ಶ್ರೇಯಾಂಕ ಪಟ್ಟಿ ಪ್ರಕಟಿಸಿದ್ದು, ಟೀಂ ಇಂಡಿಯಾ ನಾಯಕ ಕೊಹ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.

29 ವರ್ಷ ವಯಸ್ಸಿನ ಕೊಹ್ಲಿ ಅವರು ಮೂರನೇ ಟೆಸ್ಟ್ ಪಂದ್ಯದಲ್ಲಿ 97 ಹಾಗೂ 103ರನ್ ಗಳಿಸಿ, ತಂಡಕ್ಕೆ ಗೆಲುವು ದಾಖಲಿಸಲು ನೆರವಾದರು. ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 203ರನ್ ಗಳಿಂದ ಗೆಲುವು ಸಾಧಿಸಿ, ಐದು ಪಂದ್ಯಗಳ ಸರಣಿಯಲ್ಲಿ 2-1 ಸಾಧಿಸಿದೆ.

ಬರ್ಮಿಂಗ್ ಹ್ಯಾಮ್ ಟೆಸ್ಟ್ ನಂತರ ಅಗ್ರಸ್ಥಾನಕ್ಕೇರಿದ್ದ ಕೊಹ್ಲಿ ಅವರು, ಲಾರ್ಡ್ಸ್ ಟೆಸ್ಟ್ ನಂತರ ಕೆಳಗಿಳಿದಿದ್ದರು. ಆದರೆ, ಈಗಾಗಲೇ ಸರಣಿಯಲ್ಲಿ 440ರನ್ ದಾಖಲಿಸಿರುವ ಕೊಹ್ಲಿ ಅವರು ಅತಿಹೆಚ್ಚು ರೇಟಿಂಗ್ ದಾಖಲಿಸುವ ಸಾಧನೆ ಹಂತದಲ್ಲಿದ್ದಾರೆ.

ಟಾಪ್ 10 ಪಟ್ಟಿಯಲ್ಲಿ

ಟಾಪ್ 10 ಪಟ್ಟಿಯಲ್ಲಿ

ಡಾನ್ ಬ್ರಾಡ್ಮನ್ (961 ಅಂಕಗಳು)
ಸ್ಟೀವ್ ಸ್ಮಿತ್ (947)
ಲೆನ್ ಹಟನ್ (945)
ಜಾಕ್ ಹಾಬ್ಸ್ (942)
ರಿಕಿ ಪಾಂಟಿಂಗ್( 942)
ಪೀಟರ್ ಮೇ( 941)
ಗ್ಯಾರಿ ಸೋಬರ್ಸ್, ಕ್ಲೈಡ್ ವಾಲ್ಕಾಟ್, ವಿವಿಯನ್ ರಿಚರ್ಡ್ಸ್ ಹಾಗೂ ಸಂಗಕ್ಕಾರ (938)
ವಿರಾಟ್ ಕೊಹ್ಲಿ (937 ಅಂಕಗಳು)

ಆಗಸ್ಟ್ 23ರ ನಂತರ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ

ಆಗಸ್ಟ್ 23ರ ನಂತರ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ

1. ವಿರಾಟ್ ಕೊಹ್ಲಿ 937 ಅಂಕಗಳು
2. ಸ್ಟೀವ್ ಸ್ಮಿತ್ 929 ಅಂಕಗಳು
3. ಕೇನ್ ವಿಲಿಯಮ್ಸನ್ 847
4. ದೇವಿಡ್ ವಾರ್ನರ್ 820
5. ಜೋ ರೂಟ್ 818

ಬೌಲರ್ಸ್

ಬೌಲರ್ಸ್

1. ಜೇಮ್ಸ್ ಆಂಡರ್ಸನ್ 899
2. ಕಾಗಿಸೋ ರಬಾಡಾ 882
3. ರವೀಂದ್ರ ಜಡೇಜ 840
4. ವೆರ್ನಾನ್ ಫಿಲ್ಯಾಂಡರ್ 826
5. ಪ್ಯಾಟ್ ಕುಮಿನ್ಸ್ 800

 ಆಲ್ ರೌಂಡರ್ಸ್

ಆಲ್ ರೌಂಡರ್ಸ್

1. ಶಕೀಬ್ ಅಲ್ ಹಸನ್ 420
2. ವೆರ್ನಾನ್ ಫಿಲ್ಯಾಂಡರ್, ರವೀಂದ್ರ ಜಡೇಜ 370
4. ಆರ್ ಅಶ್ವಿನ್ 367
5. ಜಾಸನ್ ಹೋಲ್ಡರ್ 354

Story first published: Thursday, August 23, 2018, 15:02 [IST]
Other articles published on Aug 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+