17 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬ್ಯಾಕ್ ಟು ಬ್ಯಾಕ್ ಸೊನ್ನೆ ಸುತ್ತಿದ ವಿರಾಟ್
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 7 ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡಿದ್ದಾರೆ. ಈ ವೇಳೆ ಎಲ್ಲರ ಕಣ್ಣುಗಳು ವಿರಾಟ್ ಅವರ ಮೇಲೆ ನೆಟ್ಟಿದ್ದವು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ವಿರಾಟ್ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ, ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸುತ್ತದೋ ಇಲ್ಲವೋ ಎಂಬುದಕ್ಕೆ ಉತ್ತರ ಲಭಿಸುತ್ತಿತ್ತು. ಹೀಗಾಗಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು.
ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ನಿರಾಸೆಯನ್ನು ಅನುಭವಿಸಿದ್ದಾರೆ. ಆಸ್ಟ್ರೇಲಿಯಾದ ತಮ್ಮ ನೆಚ್ಚಿನ ಅಂಗಳದಲ್ಲಿ ವಿರಾಟ್ ಬಿಗ್ ಇನಿಂಗ್ಸ್ ಕಟ್ಟುತ್ತಾರೆ ಎಂಬ ವಿಶ್ವಾಸ ಎಲ್ಲರಲ್ಲೂ ಇತ್ತು. ಆದರೆ ಈ ಆಸೆ ಎಲ್ಲವೂ ಮಣ್ಣುಪಾಲಾಗಿದೆ. ವಿರಾಟ್ ಕೊಹ್ಲಿ ಆಡಿಲೇಡ್‌ನಲ್ಲಿ ನಾಲ್ಕು ಎಸೆತಗಳನ್ನು ಎದುರಿಸುವಷ್ಟರಲ್ಲಿ ಸುಸ್ತಾದರು. ವಿರಾಟ್ ಕೊಹ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಜೇವಿಯರ್ ಬಾರ್ಟ್ಲೆಟ್ ತೋಡಿದ ಖೆಡ್ಡಾಗೆ ಬಲಿಯಾದರು. ವಿರಾಟ್, ಜೇವಿಯರ್ ಬಾರ್ಟ್ಲೆಟ್ ಎಸೆತದಲ್ಲಿ ಎಲ್‌ಬಿ ಡಬ್ಲ್ಯೂ ಬಲೆಗೆ ಬಿದ್ದರು. ಈ ಮೂಲಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬ್ಯಾಕ್ ಟು ಬ್ಯಾಕ್ ನಿರಾಸೆ ಅನುಭವಿಸಿದರು.

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ನಾಯಕ ಶುಭಮನ್ ಗಿಲ್ ಏಳನೇ ಓವರ್‌ನ ಮೊದಲ ಎಸೆತದಲ್ಲಿ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ವಿರಾಟ್, ಬಿಗ್ ಇನಿಂಗ್ಸ್ ಕಟ್ಟುವ ಆಸೆಯೊಂದಿಗೆ ಮೈದಾನಕ್ಕೆ ಇಳಿದರು. ಆದರೆ ಇವರ ಆಸೆಗೆ ಜೇವಿಯರ್ ಪೆಟ್ಟು ನೀಡಿದರು. ಈ ಮೂಲಕ ತಮ್ಮ ನೆಚ್ಚಿನ ಅಂಗಳದಲ್ಲಿ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಪರಿಣಾಮ ಭಾರತ ಇನಿಂಗ್ಸ್‌ನ ಏಳನೇ ಓವರ್‌ನಲ್ಲಿ 2ನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆಡಿಲೇಡ್ ಅಂಗಳದಲ್ಲಿ ವಿರಾಟ್ ಕೊಹ್ಲಿ ಸೊನ್ನೆಗೆ ಔಟ್ ಆಗುತ್ತಲೇ ತಮ್ಮ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 18ನೇ ಬಾರಿಗೆ ಡಕ್‌ಔಟ್ ಆದರು. ಈ ಮೂಲಕ ಹರ್ಭಜನ್ ಸಿಂಗ್ ಅವರ ದಾಖಲೆಯನ್ನು ಮೀರಿ ನಿಂತರು. ಹರ್ಭಜನ್ ಸಿಂಗ್ ಏಕದಿನ ಕ್ರಿಕೆಟ್‌ನಲ್ಲಿ 17 ಬಾರಿ ಸೊನ್ನೆ ಸುತ್ತಿದ್ದರು. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ ಹಾಗೂ ಯುವರಾಜ್ ಸಿಂಗ್ ತಲಾ 18 ಬಾರಿ ಡಕ್ ಔಟ್ ಆಗಿದ್ದಾರೆ.
ಅಭಿಮಾನಿಗಳ ಗೌರವ
ವಿರಾಟ್ ಆಡಿಲೇಡ್‌ನಲ್ಲಿ ಸೊನ್ನೆ ಸುತ್ತಿದರು ಸಹ ಅಭಿಮಾನಿಗಳು ಅವರಿಗೆ ಗೌರವ ಸಲ್ಲಿಸಿದರು. ವಿರಾಟ್ ವೃತ್ತಿ ಬದುಕಿನಲ್ಲಿ ಆಡಿಲೇಡ್ ಅಂಗಳ ನೆನಪಿನಲ್ಲಿ ಉಳಿಯುವ ಮೈದಾನವಾಗಿದೆ. ಇವರು ಈ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರನ್ ಕಲೆ ಹಾಕಿದ್ದಾರೆ. ಹೀಗಾಗಿ ಅಭಿಮಾನಿಗಳು ವಿರಾಟ್ ಔಟ್ ಆದಾಗ, ಎದ್ದು ನಿಂತು ಅವರಿಗೆ ಗೌರವ ಸಲ್ಲಿಸಿದರು. ವಿರಾಟ್ ಕೊಹ್ಲಿ ಅವರಿಗೆ ಈ ಮೈದಾನದಲ್ಲಿ ಇದೇ ಕೊನೆಯ ಪಂದ್ಯ ಎಂದು ಭಾವಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications