Virat kohli: ಸೆಂಚುರಿ ಸ್ಟಾರ್ ಕೊಹ್ಲಿ; ವಿರಾಟ್‌ಗೆ ಆಸ್ಟ್ರೇಲಿಯಾ ಎಂದರೆ ಇಷ್ಟ, ಬೆಂಗಳೂರು ಅಂದ್ರೆ ಪ್ರೀತಿ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂಲಕ ಭಾರತ ತಂಡದ ಜನಾಕರ್ಷಕ ಆಟಗಾರ ಇನ್ನೊಬ್ಬ ತೆರೆಯ ಹಿಂದೆ ಸರಿದಿದ್ದಾರೆ. ಮೈದಾನಕ್ಕೆ ಅಭಿಮಾನಿಗಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಆಟಗಾರರಲ್ಲಿ ವಿರಾಟ್ ಕೊಹ್ಲಿ ಒಬ್ಬರು. ಇವರು ಯಾವುದೇ ದೇಶಕ್ಕೇ ಹೋದ್ರೂ ಅಲ್ಲಿಯ ಅಭಿಮಾನಿಗಳು ಇವರ ಆಟವನ್ನು ಕಣ್ಣು ತುಂಬಿಕೊಳ್ಳಲು ಕಾತುರುದಿಂದ ಕಾಯುತ್ತಿದ್ದರು. ಆದರೆ ಇನ್ನು ವಿರಾಟ್ ಕೊಹ್ಲಿ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ.
ವಿರಾಟ್ ಕೊಹ್ಲಿ ಅವರಿಗೆ ಭಾರತದಲ್ಲಿ ಎಷ್ಟು ಅಭಿಮಾನಿಗಳ ಬಳಗವಿದೆಯೋ ಅಷ್ಟೇ, ವಿದೇಶದಲ್ಲೂ ಇದೆ. ವಿರಾಟ್ ಕೊಹ್ಲಿ ಆಟಕ್ಕೆ ಅದೆಷ್ಟೋ ಮಾಜಿ ಆಟಗಾರರು ಫಿದಾ ಆಗಿದ್ದಾರೆ. ವಿರಾಟ್ ಕ್ಲಾಸಿಕ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ. ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ದದ ಸರಣಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯ ವೇಳೆ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಕೊಹ್ಲಿ ಅವರ ಮೇಲೆ ಹಲವು ಪ್ರಶ್ನೆಗಳು ಉದ್ಭವಿಸಿದ್ದವು. ಇದಕ್ಕೆ ತಮ್ಮದೇ ಧಾಟಿಯಲ್ಲಿ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ.

ವಿರಾಟ್ ಕೊಹ್ಲಿ ಅವರಿಗೆ ಆಸ್ಟ್ರೇಲಿಯಾ ಎಂದರೆ ಅಚ್ಚು ಮೆಚ್ಚಿನ ಎದುರಾಳಿ. ಈ ತಂಡದ ವಿರುದ್ಧ ಇವರು ಆಡುವುದು ಎಂದರೇ ವಿರಾಟ್‌ಗೆ ದೊಡ್ಡ ಹೆಮ್ಮೆ. ಇವರ ಅಂಕಿ ಅಂಶಗಳು ಸಹ ಇವರ ಎದುರು ಭರ್ಜರಿಯಾಗಿವೆ. ವಿರಾಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದೇ ಕಾಂಗರೂ ನಾಡಿನಲ್ಲೇ..
ವಿರಾಟ್ ಮೊದಲ ಟೆಸ್ಟ್ ಶತಕ ಬಾರಿಸಿದ್ದು ಎಲ್ಲಿ?
ವಿರಾಟ್ ಕೊಹ್ಲಿ ತಮ್ಮ ಮೊದಲ ಟೆಸ್ಟ್ ಶತಕವನ್ನು 7 ಟೆಸ್ಟ್ ಪಂದ್ಯಗಳನ್ನು ಆಡಿದ ಮೇಲೆ ಬಾರಿಸಿದ್ದಾರೆ. ಅದು ಸಹ 2012ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ತಮ್ಮ ವಿಶ್ವರೂಪವನ್ನು ಪ್ರದರ್ಶಿಸಿದರು. ಆಡಿಲೇಡ್‌ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಚೊಚ್ಚಲ ಶತಕ ಬಾರಿಸಿ ಅಬ್ಬರಿಸಿದ್ದರು.
ಭಾರತದಲ್ಲಿ ಮೊದಲ ಟೆಸ್ಟ್ ಬಾರಿಸಿದ್ದು ಎಲ್ಲಿ?
ವಿರಾಟ್ ಕೊಹ್ಲಿ ಆಡಿಲೇಡ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಶತಕವನ್ನು ಬಾರಿಸಿದ ಬಳಿಕವೇ ಭಾರತದಲ್ಲೂ ಮೊದಲ ಬಾರಿಗೆ ಮೂರಂಕಿ ಸಾಧನೆ ಮಾಡಿದರು. ಅದು ಅವರ ಎರಡನೇ ತವರಿನಲ್ಲಿ. ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ತಮ್ಮ ವೃತ್ತಿ ಜೀವನದ ಎರಡನೇ ಹಾಗೂ ಭಾರತದಲ್ಲಿ ಮೊದಲ ಶತಕ ಬಾರಿಸಿದರು.
ಭಾರತದಲ್ಲಿ ಕೊನೆಯ ಬಾರಿಗೆ ಶತಕ ಬಾರಿಸಿದ್ದು ಯಾವಾಗ?
ವಿರಾಟ್ ಕೊಹ್ಲಿ ಭಾರತದಲ್ಲಿ 2023, ಮಾರ್ಚ್ 12 ರಂದು ತಮ್ಮ ಕೊನೆಯ ಟೆಸ್ಟ್ ಶತಕವನ್ನು ಆಸ್ಟ್ರೇಲಿಯಾ ವಿರುದ್ಧ ಬಾರಿಸಿದ್ದರು.
ವಿರಾಟ್ ಟೆಸ್ಟ್ ವೃತ್ತಿ ಜೀವನದ ಕೊನೆಯ ಶತಕ ಬಾರಿಸಿದ್ದು ಎಲ್ಲಿ?
ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನದ ಕೊನೆಯ ಶತಕವನ್ನು ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಬಾರಿಸಿದ್ದಾರೆ.
ವಿರಾಟ್ ಭಾರತದಲ್ಲಿ ಹಾಗೂ ವಿದೇಶದಲ್ಲಿ ಎಷ್ಟು ಶತಕ ಬಾರಿಸಿದ್ದಾರೆ?
ವಿರಾಟ್ ಕೊಹ್ಲಿ ಭಾರತದಲ್ಲಿ ಆಡಿದ 55 ಪಂದ್ಯಗಳಲ್ಲಿ 14 ಶತಕ ಬಾರಿಸಿದರೆ, ವಿದೇಶದಲ್ಲಿ 66 ಪಂದ್ಯಗಳನ್ನು ಆಡಿ 16 ಶತಕ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ ಎಷ್ಟು ಟೆಸ್ಟ್ ಆಡಿದ್ದಾರೆ?
ವಿರಾಟ್ ಕೊಹ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದು 287 ರನ್ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ ಡೆಲ್ಲಿ ಎಷ್ಟು ಪಂದ್ಯ ಆಡಿದ್ದಾರೆ? ಗರಿಷ್ಠ ರನ್ ಎಷ್ಟು?
ವಿರಾಟ್ ಕೊಹ್ಲಿ ತಮ್ಮ ತವರು ದೆಹಲಿ ಅಂಗಳದಲ್ಲಿ ಒಟ್ಟು 4 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೇ ಶ್ರೀಲಂಕಾ ವಿರುದ್ಧ 2017ರಲ್ಲಿ 243 ರನ್ ಬಾರಿಸಿದ್ದು ಗರಿಷ್ಠ ಮೊತ್ತವಾಗಿದೆ.
ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಎಷ್ಟು ಶತಕ ಬಾರಿಸಿದ್ದಾರೆ?
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ 30 ಪಂದ್ಯಗಳಲ್ಲಿ 43,76ರ ಸರಾಸರಿಯಲ್ಲಿ 2232 ರನ್ ಸಿಡಿಸಿದ್ದಾರೆ. ಇದರಲ್ಲಿ 9 ಶತಕ, 5 ಅರ್ಧಶತಕಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications