For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಸ್ಥಾನ ತುಂಬಲು ಸಿದ್ಧರಾಗಿದ್ದಾರೆ ಭರವಸೆಯ ಬ್ಯಾಟರ್‌

ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್ ಸರಣಿಗೂ ಮುನ್ನ ವಿರಾಟ್‌ ಟೆಸ್ಟ್‌ ಜೆರ್ಸಿ ಬಿಚ್ಚಿಟ್ಟಿರುವುದು ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಐಪಿಎಲ್‌ ನಡೆಯುವ ಮಧ್ಯೆದಲ್ಲಿ ವಿರಾಟ್‌ ಟೆಸ್ಟ್‌ಗೆ ವಿದಾಯ ಹೇಳಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಸೋಮವಾರ ಬೆಳಗ್ಗೆ ಈ ಸುದ್ದಿ ಧೃಡ ಪಟ್ಟಿದೆ. ಇವರ ಸ್ಥಾನವನ್ನು ತುಂಬುವುದು ಯಾರ ಎಂಬ ಪ್ರಶ್ನೆಗಳು ಉದ್ಭವಿಸುತ್ತದೆ.

ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ದೊಡ್ಡ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 30 ಶತಕ ಬಾರಿಸಿದ ಹಿರಿಮೆ ಹೊಂದಿದ್ದಾರೆ. ಇವರು ಹಲವು ಬಾರಿ ಟೀಮ್ ಇಂಡಿಯಾಕ್ಕೆ ಸಂಕಟ ಮೋಚಕನ ಕಾರ್ಯವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಏಳು ದ್ವಿಶತಕಗಳನ್ನು ಸಿಡಿಸಿದ್ದಾರೆ. ಅವರು ಭಾರತದ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ. ವಿರಾಟ್ 123 ಟೆಸ್ಟ್ ಪಂದ್ಯಗಳಿಂದ 9230 ರನ್ ಗಳಿಸಿದ್ದಾರೆ.

Virat Kohli Retires from Test Cricket Shreyas Iyer Likely to Take Over No 4 Spot

ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಂದ ತೆರವಾದ ಸ್ಥಾನವನ್ನು ವಿರಾಟ್‌ ಕೊಹ್ಲಿ ಸಮರ್ಥವಾಗಿ ತುಂಬಿದ್ರು. ಸಚಿನ್ ತೆಂಡೂಲ್ಕರ್‌ ಟೆಸ್ಟ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದರು. ವಿರಾಟ್‌ ಸಹ ಇದೇ ಕ್ರಮಾಂಕದಲ್ಲಿ ಬಹು ವರ್ಷಗಳ ಕಾಲ ಬ್ಯಾಟ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಲ್ಕನೇ ಸ್ಥಾನ ಎಂಬುದು ತುಂಬಾ ಇಂಪಾರ್ಟೆಂಟ್‌. ಈ ಸ್ಥಾನದಲ್ಲಿ ಬ್ಯಾಟ್ ಮಾಡುವ ಆಟಗಾರ ಎಲ್ಲ ಆಟಗಾರರೊಂದಿಗೆ ಹೊಂದಿಕೊಂಡು ಪರಿಸ್ಥಿತಿಗೆ ತಕ್ಕನಾಗಿ ಆಟವಾಡುವ ಕಲೆಯನ್ನು ಹೊಂದಿರಬೇಕು. ಈ ಎಲ್ಲ ಗುಣಗಳು ವಿರಾಟ್ ಕೊಹ್ಲಿ ಅವರಲ್ಲಿ ಹೇರಳವಾಗಿದ್ದವು.

ವಿರಾಟ್‌ ಸ್ಥಾನ ತುಂಬುವುದು ಯಾರು?

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಟೀಮ್ ಮ್ಯಾನೇಜ್ಮೆಂಟ್‌ ಚಿತ್ತ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವು ಶ್ರೇಯಸ್‌ ಅಯ್ಯರ್‌ ನೆಟ್ಟಿದೆ. ಶ್ರೇಯಸ್‌ ಏಕದಿನ ಕ್ರಿಕೆಟ್‌ನಲ್ಲಿ ಇದೇ ಸ್ಥಾನದಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದ್ದಾರೆ. ಈಗ ಶ್ರೇಯಸ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಲ್ಕನೇ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಈಗಾಗಲೇ ಶ್ರೇಯಸ್‌ ಭಾರತದ ಪರ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 811 ರನ್ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ.

Virat Kohli Retires from Test Cricket Shreyas Iyer Likely to Take Over No 4 Spot

ಸುಮಾರು ಒಂದು ವರ್ಷದಿಂದ ಶ್ರೇಯಸ್‌ ಟೆಸ್ಟ್‌ ಕ್ರಿಕೆಟ್‌ ಆಡಿಲ್ಲ. ಇವರಿಗೆ ಈ ಬಾರಿ ಇಂಗ್ಲೆಂಡ್‌ ಪ್ರವಾಸದಲ್ಲಿ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಇವರು ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, ಆಯ್ಕೆದಾರರ ಮನ ಗೆದಿದ್ದಾರೆ. 30 ವರ್ಷದ ಶ್ರೇಯಸ್ ಅಯ್ಯರ್‌ ಇಂಗ್ಲೆಂಡ್‌ ವಿರುದ್ದದ ಸರಣಿಯಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Story first published: Monday, May 12, 2025, 21:12 [IST]
Other articles published on May 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+