Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಕ್ಷಿಣ ಆಫ್ರಿಕಾ ಪ್ರವಾಸದಿಂದ ದಿಢೀರ್ ಮನೆಗೆ ವಾಪಾಸ್ಸಾದ ವಿರಾಟ್‌ ಕೊಹ್ಲಿ- ಹೊರಬೀಳಲಿದೆಯೇ ಸಿಹಿಸುದ್ದಿ?

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಟೀಮ್ ಇಂಡಿಯಾ ಅಂಗಳದಿಂದ ಎರಡು ದೊಡ್ಡ ಸುದ್ದಿ ಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಿಂದ ರುತುರಾಜ್ ಗಾಯಕ್ವಾಡ್ ಹೊರಗುಳಿದಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಕೌಟುಂಬಿಕ ಕಾರಣಗಳಿಗೆ ತವರಿಗೆ ಮರಳಿದ್ದಾರೆ.

ವಿರಾಟ್‌ ಕೊಹ್ಲಿ ತವರಿಗೆ ಮರಳಿದ್ದರಿಂದ ಇವರು ಆತಿಥೇಯರ ವಿರುದ್ಧ ನಡೆಯಲಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಆಡುವುದಿಲ್ಲ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳ ಪ್ರಕಾರ, ಯುವ ಆರಂಭಿಕ ಬ್ಯಾಟ್ಸ್‌ಮನ್ ಬೆರಳಿನ ಗಾಯದಿಂದ ಚೇತರಿಸಿಕೊಂಡಿಲ್ಲ. ಈ ಕಾರಣಕ್ಕಾಗಿ, ಅವರನ್ನು ತಂಡದ ಆಡಳಿತವು ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ ಮಾಡಿದೆ.

Virat Kohli returned home from South Africa

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾಕ್ಕೆ ಟೆಸ್ಟ್ ಸರಣಿಗಾಗಿ ತೆರಳಿದ್ದ ಕೊಹ್ಲಿ ಕುಟುಂಬದಲ್ಲಿ ಉಂಟಾದ ತುರ್ತು ಪರಿಸ್ಥಿತಿಯಿಂದಾಗಿ ಭಾರತಕ್ಕೆ ಮರಳಬೇಕಾಯಿತು ಎಂದು ತಿಳಿಸಿದೆ.

ರುತುರಜ್‌ಗೆ ಗಾಯ ಟೆಸ್ಟ್‌ನಿಂದ ಔಟ್

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಭಾರತದತ್ತ ಮುಖ ಮಾಡಿದ್ದಾರೆ. ಕೌಟುಂಬಿಕ ಕಾರಣದಿಂದ ವಾಪಸ್ ಬಂದಿದ್ದಾರೆ ಎನ್ನಲಾಗಿದೆ. ಆದರೆ ಶೀಘ್ರದಲ್ಲೇ ಅವರು ಮತ್ತೆ ದಕ್ಷಿಣ ಆಫ್ರಿಕಾಕ್ಕೆ ಹೋಗುತ್ತಾರೆ. ವಿರಾಟ್ ಕೊಹ್ಲಿ ಏಕೆ ಭಾರತಕ್ಕೆ ಮರಳಿದರು ಎಂಬುದು ತಿಳಿದಿಲ್ಲವಾದರೂ, ಡಿಸೆಂಬರ್ 26 ರಿಂದ ಸೆಂಚುರಿಯನ್‌ನಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟ್‌ಗೆ ಅವರು ಸಮಯಕ್ಕೆ ಮರಳುತ್ತಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಟೀಮ್ ಮ್ಯಾನೇಜ್ಮೆಂಟ್ ಮತ್ತು ಬಿಸಿಸಿಐ ಅನುಮತಿಯೊಂದಿಗೆ ವಿರಾಟ್ ಕೊಹ್ಲಿ ಮೂರು ದಿನಗಳ ಕಾಲ ಮುಂಬೈಗೆ ಬಂದಿದ್ದರು.

Virat Kohli returned home from South Africa

ಚೇತರಿಸಿಕೊಳ್ಳದ ಗಾಯಕ್ವಾಡ್‌

ಡಿಸೆಂಬರ್ 19 ರಂದು ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಆತಿಥೇಯರ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ 26 ವರ್ಷದ ಗಾಯಕ್ವಾಡ್ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಫೀಲ್ಡಿಂಗ್ ಮಾಡುವಾಗ ಅವರ ಉಂಗುರದ ಬೆರಳಿಗೆ ಉಂಟಾದ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.

ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಎರಡೂ ಟೆಸ್ಟ್ ಪಂದ್ಯಗಳಿಗೆ ಮುನ್ನ ಅವರು ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಅವರನ್ನು ಕೈ ಬಿಡುವಂತೆ ಬಿಸಿಸಿಐ ಸಲಹೆ ನೀಡಿದ ಹಿನ್ನೆಲೆ, ಮ್ಯಾನೇಜ್ಮೆಂಟ್‌ ಅವರನ್ನು ತಂಡದಿಂದ ಕೈ ಬಿಟ್ಟಿದೆ. ಗಾಯಕ್ವಾಡ್‌ ಶನಿವಾರ ಭಾರತಕ್ಕೆ ತಲಪಬಹುದು ಎಂದು ತಿಳಿದು ಬಂದಿದೆ.

ವಿಶ್ವಕಪ್‌ ಬಳಿಕ ಅಂಗಳಕ್ಕೆ

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಬಳಿಕ ವಿರಾಟ್‌ ಕುಟುಂಬದ ಜೊತೆ ರಜೆಯನ್ನು ಕಳೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಆಡಲಿರುವ ವಿರಾಟ್‌ ಎಲ್ಲರ ಚಿತ್ತ ಕದ್ದಿದ್ದಾರೆ.

Story first published: Friday, December 22, 2023, 14:31 [IST]
Other articles published on Dec 22, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+