Virat Kohli: ಅಭ್ಯಾಸದ ವೇಳೆ ವಿರಾಟ್ ಆಕರ್ಷಣೆ: ತಿಂಡಿ ಪೋತ ಕೊಹ್ಲಿ
ಸದ್ಯ ಭಾರತದಲ್ಲಿ ರಣಜಿ ಟ್ರೋಫಿ ಟೂರ್ನಿಗಳು ನಡೆಯುತ್ತಿವೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಸಹ ರಣಜಿ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 12 ವರ್ಷಗಳ ಬಳಿಕ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ದೆಹಲಿ ರಣಜಿ ತಂಡದ ಪರ ಆಡಲಿದ್ದಾರೆ. ಇವರ ಜೊತೆ ಕೊನೆಯ ಬಾರಿಗೆ ರಣಜಿ ಟೂರ್ನಿ ಆಡಿದ ಯಾವೊಬ್ಬ ಪ್ಲೇಯರ್ ಈಗ ಈ ತಂಡದ ಪರ ಆಡುತ್ತಿಲ್ಲ. ಹೀಗಾಗಿ ಎಲ್ಲ ಆಟಗಾರರು ವಿರಾಟ್ ಅವರನ್ನು ಬೆರಗುಗಣ್ಣಿನಿಂದ ನೋಡುವುದು ಸಾಮಾನ್ಯ. ಅಕ್ಷರಶಃ ದೆಹಲಿ ತಂಡದ ಯುವ ಆಟಗಾರರ ಪಾಲಿಗೆ ಮಂಗಳವಾರ ಶುಭಧಿನವಾಗಿತ್ತು.
ಸುಮಾರು 9 ಗಂಟೆಗೆ ಕಪ್ಪು ಬಣ್ಣದ ಪೋರ್ಷೆ ಕಾರು ಅರುಣ್ ಜೇಟ್ಲಿ ಮೈದಾನದ ವೀರೇಂದ್ರ ಸೆಹ್ವಾಗ್ ಗೇಟ್ ಎಂಟ್ರಿ ಆದಾಗ ಎಲ್ಲರಿಗೂ ಖುಷಿ. ತನ್ನ ನೆಚ್ಚಿನ ಆಟಗಾರ ತಮ್ಮ ಜೊತೆಗೆ ಇಂದು ಅಭ್ಯಾಸ ಆರಂಭಿಸಲಿದ್ದಾನೆ. ತಮ್ಮ ರೋಲ್ ಮಾಡೆಲ್ ಕಂಡು ಅದೆಷ್ಟೋ ಆಟಗಾರರು ಸಖತ್ ಖುಷಿ ಪಟ್ಟರು. ಇನ್ನು ಅಭಿಮಾನಿಗಳು ಸಹ ವಿರಾಟ್ ಅವರನ್ನು ಕಣ್ಣು ತುಂಬಿಕೊಳ್ಳುವ ಅವಕಾಶವನ್ನು ಮಿಸ್ ಮಾಡಲೇ ಇಲ್ಲ.

ದೆಹಲಿ ತಂಡದೊಂದಿಗೆ ಅಭ್ಯಾಸ
ಕೇವಲ ಟಿವಿಯ ಪರದೆಗಳ ಮೇಲೆ, ಫೋಟೋಗಳಲ್ಲಿ ಅಥವಾ ಬೇರೆಯವರ ಬಾಯಲ್ಲಿ ಕಥೆಯ ರೂಪದಲ್ಲಿ ಕೇಳಿದ್ದ ವ್ಯಕ್ತಿಯನ್ನು ಮೊದಲ ಬಾರಿಗೆ ನೋಡಿದ ಖುಷಿ ಆಟಗಾರರ ಮುಖದಲ್ಲಿ ಎದ್ದು ಕಾಣುತ್ತಿತ್ತು. 12 ವರ್ಷದ ಹಿಂದೆ ರಣಜಿ ಆಡುವಾಗ ವಿರಾಟ್ ಅವರಿಗೆ ಇಷ್ಟೊಂದು ಫ್ಯಾನ್ ಫಾಲೋವರ್ಸ್ ಇದ್ದರಲಿಲ್ಲ. ಈಗ ಅದು ವಿಶ್ವವನ್ನೇ ಆವರಿಸಿಬಿಟ್ಟಿದೆ. ವಿಶ್ವದ ಸೂಪರ್ ಸ್ಟಾರ್ ಬ್ಯಾಟರ್ ಯುವಕರೊಂದಿಗೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಿಕೊಳ್ಳುವುದನ್ನು ಎದುರು ನೋಡ್ತಾ ಇದ್ದರು.
ಬರೀ ಆಟಗಾರರು ಅಷ್ಟೇ ಅಲ್ಲ, ಕೋಚಿಂಗ್ ಸಿಬ್ಬಂದಿಗಳು ಸಹ ಇವರ ಭೇಟಿಗೆ ಕಾಯುತ್ತಿದ್ದರು. ವಿರಾಟ್ ಬರುವದನ್ನು ಮನಗೊಂಡ ಡಿಡಿಸಿಎ ಸಕಲ ಸಿದ್ಧತೆಯನ್ನು ಮಾಡಿಕೊಂಡಿತ್ತು. ಸೋಮವಾರ ವಿರಾಟ್ ಅಭ್ಯಾಸವನ್ನು ಮೂರು ಗಂಟೆಗಳ ಕಾಲ ಮಾಡಿದರು. ಈ ವೇಳೆ ಹಲವು ಸಿಬ್ಬಂದಿಗಳನ್ನು ಮಾತನಾಡಿಸಿದರು. ಈಗ ದೆಹಲಿ ತಂಡದ ಮ್ಯಾನೇಜರ್ ಹಾಗೂ ಆಗ ಅಂಡರ್ 19 ವಿಶ್ವಕಪ್ ತಂಡದ ಕೋಚ್ ಆಗಿದ್ದ ಮಹೇಶ್ ಭಾಟಿ ಅವರೊಂದಿಗೆ ಹೆಚ್ಚಾಗಿ ಕಾಣಿಸಿಕೊಂಡರು.

ವಿರಾಟ್ ತಿಂಡಿ ಪ್ರಿಯ
"ಅವನು ಬದಲಾಗಿಲ್ಲ. ಅವನಿಗೆ ಛೋಲೆ ಪೂರಿ ತುಂಬ ಇಷ್ಟ. ಹೀಗಾಗಿ ನಾವು ಅವನಿಗಾಗಿ ಛೋಲೆ ಪೂರಿ ತಂದು ಇಟ್ಟಿದ್ದೆವು. ಅಲ್ಲದೆ ಅಭ್ಯಾಸದ ಬಳಿಕ ವಿರಾಟ್ ತಮ್ಮ ಹಳೆಯ ಅಭ್ಯಾಸದಂತೆ ಅನ್ನ ಹಾಗೂ ಮಜ್ಜಿಗೆಯ ಕಡಿ ಹಾಕಿಕೊಂಡು ಇಷ್ಟ ಪಟ್ಟು ತಿಂಡಿ ತಿಂದರು" ಎಂದು ಡಿಡಿಸಿಎ ಅಧಿಕಾರಿಗಳು ಹೇಳದ್ದಾರೆ.
ವಿರಾಟ್ ರಣಜಿ ತಂಡದೊಂದಿಗೆ ಅಭ್ಯಾಸ ಆರಂಭಿಸಲಿದ್ದಾರೆ ಎಂಬ ಸುದ್ದಿ ಹರುಡುತ್ತಿದ್ದಂತೆ ಮೈದಾನಕ್ಕೆ ಬರುವ ಅಭಿಮಾನಿಗಳ ಸಂಖ್ಯೆಯಲ್ಲೂ ಏರಿಕೆ ಆಯಿತು. ಅಲ್ಲದೆ ಮೈದಾನದಲ್ಲಿ ಬಿಗಿ ಭದ್ರತೆಯನ್ನು ಹೆಚ್ಚಿಸಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications